ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ ಇಸ್ರೋ – ಸೆಪ್ಟೆಂಬರ್‌ನಲ್ಲೇ ಸೌರ ಮಿಷನ್ ಆದಿತ್ಯ ಉಡಾವಣೆಗೆ ಸಿದ್ಧತೆ

ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ ಇಸ್ರೋ – ಸೆಪ್ಟೆಂಬರ್‌ನಲ್ಲೇ ಸೌರ ಮಿಷನ್ ಆದಿತ್ಯ ಉಡಾವಣೆಗೆ ಸಿದ್ಧತೆ

ನ್ಯೂಸ್‌ ಆ್ಯರೋ : ಚಂದ್ರನ ಅಂಗಳಕ್ಕೆ ಕಾಲಿಟ್ಟು ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯನ ಸಮಗ್ರ ಅಧ್ಯಯನ ನಡೆಸಲು ಮುಂದಾಗಿದೆ. ಬುಧವಾರ ಸಂಜೆ 6ಕ್ಕೆ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸ್ಮೂತ್ ಲ್ಯಾಂಡಿಂಗ್ ಮಾಡಲಾಯಿತು. ಇದರ ಬೆನ್ನಲ್ಲೇ ಸೌರ ಮಿಷನ್ ಆದಿತ್ಯ-ಎಲ್ 1 ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.

ಸೆಪ್ಟೆಂಬರ್​ನ ಮೊದಲ ವಾರದಲ್ಲಿ ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಮಾಡುವ ಯೋಜನೆಯಲ್ಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಉಪಗ್ರಹ ಎಂದು ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಸೂರ್ಯನ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ಆದಿತ್ಯ ಉಪಗ್ರಹ ರೆಡಿ ಮಾಡಿದೆ. PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ಉಡಾವಣೆಗೆ ಸಜ್ಜಾಗಿದ್ದು ಇದರ ಬುನಾದಿ ಹಾಕಿದ್ದೇ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ಎನ್ನುವುದು ವಿಶೇಷವಾಗಿದೆ.

ಈಗಾಗಲೇ ಈ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಉಡಾವಣೆ ಮಾಡಲಾಗುತ್ತದೆ.

PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆ ಆಗಿದೆ. ಈ ಉಪಗ್ರಹ 1,500 ಕೆ.ಜಿ ತೂಕ ಇದ್ದು ಇದು ಭೂಮಿಯಿಂದ ಸೂರ್ಯನ ಕಡೆಗೆ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ರ ಕಕ್ಷೆಯಲ್ಲಿ ನೆಲೆಯಾಗಲಿದೆ. ಈ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಇಸ್ರೋ ಮುಂದಾಗಿದೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *