ಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’ – ಚಂದ್ರಯಾನ 3 ‘ವಿಕ್ರಮ್‌’ ಲ್ಯಾಂಡಿಂಗ್ ನೇರಪ್ರಸಾರ

ಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’ – ಚಂದ್ರಯಾನ 3 ‘ವಿಕ್ರಮ್‌’ ಲ್ಯಾಂಡಿಂಗ್ ನೇರಪ್ರಸಾರ

ನ್ಯೂಸ್‌ ಆ್ಯರೋ : ಇಸ್ರೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಂದ್ರಯಾನ 3 ಮಿಷನ್ ಸಾಫ್ಟ್‌ ಲ್ಯಾಂಡಿಂಗ್‌ ನೇರ ಪ್ರಸಾರವನ್ನು 80 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಇದು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಆಗಿದೆ ಎಂದು ಸ್ಯಾಕ್ನಿಲ್ಕ್ ತಿಳಿಸಿದೆ.

ಭಾರತದ ಮೂರನೇ ಚಂದ್ರಯಾನ ಮಿಷನ್ ಲೈವ್‌ ಟೆಲಿಕಾಸ್ಟ್‌ ಅನ್ನು ನಿರೀಕ್ಷೆಗೂ ಮೀರಿ ಜನ ವೀಕ್ಷಿಸಿದ್ದಾರೆ.

ಚಂದ್ರಯಾನ -3 ರ ಯಶಸ್ವಿ ಸಾಧನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಅಭಿನಂದನಾ ಸಂದೇಶವನ್ನು ವಿಡಿಯೋ ಮೂಲಕ ಕಳುಹಿಸಿದ್ದಾರೆ. ಅದಕ್ಕೂ ಮೊದಲು ಅವರು ಕರೆ ಮಾಡಿ‌ ಅಭಿನಂದನೆ ಸಲ್ಲಿಸಿದ್ದರು.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿರುವ ಪ್ರಧಾನಿ ಮೋದಿ ಅವರು ಸೋಮನಾಥ್ ಅವರಿಗೆ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ಆಗಸ್ಟ್‌ 26ರ ಶನಿವಾರ ಭೇಟಿ ನೀಡಿ ಇಡೀ ತಂಡವನ್ನು ವೈಯಕ್ತಿಕವಾಗಿ ಅಭಿನಂದಿಸುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *