
ಭರ್ಜರಿ ಸೆಂಚುರಿ ಬಾರಿಸಿದ ಪ್ರಗ್ಯಾನ್ ರೋವರ್ – ಇಸ್ರೋ ಅಧ್ಯಕ್ಷರು ಏನ್ ಹೇಳಿದ್ರು ಗೊತ್ತಾ?
- ಕೌತುಕ-ವಿಜ್ಞಾನ
- September 2, 2023
- No Comment
- 99
ನ್ಯೂಸ್ ಆ್ಯರೋ : ಪಾಕಿಸ್ತಾನದ ವಿರುದ್ಧದ ಪಂದ್ಯದ ಮುನ್ನವೇ ಭಾರತ ಸೆಂಚುರಿ ಬಾರಿಸಿದೆ. ಅರೇ! ಇದು ಹೇಗೆ ಸಾಧ್ಯ ಎಂದುಕೊಂಡಿದ್ದೀರಾ? ಭಾರತ ಸೆಂಚುರಿ ಹೊಡೆದದ್ದು ಚಂದ್ರನಲ್ಲಿ. ಹೊಡೆದವರು ಪ್ರಗ್ಯಾನ್ ರೋವರ್. ಅದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಏನಿದು ಸೆಂಚುರಿ?
ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ 100 ಮೀಟರ್ ದೂರ ಸಂಚರಿಸಿ ಅದ್ವಿತೀಯ ಸಾಧನೆ ಮಾಡಿರುವ ಬಗ್ಗೆ ಎಕ್ಸ್ (ಟ್ವಿಟರ್) ಮೂಲಕ ಇಸ್ರೋ ಅಧ್ಯಕ್ಷ ಎಸ್.ಶಿವಶಂಕರ್
ಮಾಹಿತಿ ಹಂಚಿಕೊಂಡಿದ್ದಾರೆ
ಶಿವಶಕ್ತಿ ಪಾಯಿಂಟ್ ನಿಂದ ಪ್ರಗ್ಯಾನ್ ರೋವರ್ ಸಾಗಿರುವ ಹಾದಿಯ ನಕ್ಷೆಯನ್ನೂ ಇಸ್ರೋ ಬಿಡುಗಡೆ ಮಾಡಿದೆ. ಮಾತ್ರವಲ್ಲ ಪ್ರಗ್ಯಾನ್ ರೋವರ್ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಇದುವರೆಗೆ ಒಟ್ಟು 101.04 ಮೀಟರ್ ದೂರ ಕ್ರಮಿಸಿದಂತಾಗಿದೆ. ಇನ್ನು 2-3 ದಿನಗಳಲ್ಲಿ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ನಿದ್ರಾ ಸ್ಥಿತಿಗೆ ಹೋಗಲಿದೆ.
ಭಾರತದ ಮಹತ್ವಾಕಾಂಕ್ಷೆ ಹೊತ್ತುಕೊಂಡು ಚಂದ್ರಯಾನ-3 ಜುಲೇ 14ರಂದು ನಭಕ್ಕೆ ಚಿಮ್ಮಿತ್ತು. ಆಗಸ್ಟ್ 23ರಂದು ಚಂದ್ರನ ಧ್ರುವವನ್ನು ಸ್ಪರ್ಶಿಸಿತ್ತು. ಆ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಎನಿಸಿಕೊಂಡಿತ್ತು. ಸಾಫ್ಟ್ ಲ್ಯಾಂಡಿಂಗ್ ನ 4 ಗಂಟೆಗಳ ಬಳಿಕ ವಿಕ್ರಮ್ ನಿಂದ ಪ್ರಗ್ಯಾನ್ ರೋವರ್ ಹೊರ ಬಂದಿತ್ತು.