ಉಡುಪಿ : ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರಿನಲ್ಲೇ “ಮಕ್ಕಳಾ”ಟಕ್ಕಿಳಿದ ಜೋಡಿ – ಕಾರ್ ನ ಕುಲುಕಾಟ, ಮುಲುಕಾಟ ಕಂಡು ಸ್ಥಳೀಯರ ತಪರಾಕಿ : ಕಾರ್ ಬಿಟ್ಟು ಜೋಡಿ ಪರಾರಿ..!!

Spread the love

ನ್ಯೂಸ್ ಆ್ಯರೋ‌ : ಹಾಡ ಹಗಲಲ್ಲೇ ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಮುಲುಕಾಟ, ಕುಲುಕಾಟ ಕೇಳಿಬಂದಿದ್ದು ಸ್ಥಳೀಯರು ಈ ಬಗ್ಗೆ ದಬಾಯಿಸುತ್ತಿದ್ದಂತೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸ್ಥಳದಿಂದ ಪರಾರಿಯಾದ ಘಟನೆ ಇಂದು ಮಧ್ಯಾಹ್ನದ ವೇಳೆ ಉಡುಪಿಯಲ್ಲಿ ನಡೆದಿದೆ.

ನಗರದ ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರು ನಿಲ್ಲಿಸಿದ್ದ ಜೋಡಿ ಕಾರ್ ನಲ್ಲೇ ಕಾಮಕೇಳಿ ನಡೆಸುತ್ತಿತ್ತು.

ಆದರೆ ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿರುವುದು, ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳಿಯರು ಇಣುಕಿ ನೋಡಿದಾಗ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ.

ಇದರಿಂದ ಕೆರಳಿದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಬಳಿಕ ಜೋಡಿ ಮುಜುಗರದಿಂದ ಪರಾರಿಯಾಗಿದ್ದು, ಕಾರು ಕಳೆದ ಒಂದು ವಾರದಿಂದ ಅನುಮಾನಾಸ್ಪದವಾಗಿ ನಿಲ್ಲುತ್ತಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಮಳೆಯ ಭಾರೀ ಅಬ್ಬರ ಕಡಿಮೆಯಾಗುತ್ತಿದ್ದಂತೆ ಬಿಸಿಲು ಪ್ರಕಾಶಿಸುತ್ತಿದ್ದು, ಆ ಬಿಸಿಲಿನಲ್ಲಿ ಮೈ ಬಿಸಿ ಏರಿಸಲು ಹೊರಟ ಜೋಡಿಗಳು ರಸ್ತೆ ಬದಿಯಲ್ಲೇ ಈ ಜೋಡಿ ಕಾಮಕೇಳಿಗೆ ಇಳಿದಿರೋದು ಪ್ರಜ್ಞಾವಂತ ನಾಗರೀಕರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಾನವೀಯ ಕಾರಣಕ್ಕೆ ವಿಡಿಯೋಗಳನ್ನು ಇಲ್ಲಿ ಪ್ರಕಟಿಸಿಲ್ಲ.

Leave a Comment

Leave a Reply

Your email address will not be published. Required fields are marked *