‘ಐ ಲವ್ ಯು’ ಅಂದ್ರೆ ಮಾತ್ರ ಈತನ ಅಂಗಡಿಯಲ್ಲಿ ರಿಚಾರ್ಜ್ ; ಬಿಸಿ ಬಿಸಿ ಕಜ್ಜಾಯ ಕೊಟ್ಟ ವಿದ್ಯಾರ್ಥಿನಿಯರು…!
ನ್ಯೂಸ್ ಆ್ಯರೋ : ಮೊಬೈಲ್ ಶಾಪ್ ಗಳಲ್ಲಿ ದುಡ್ಡು ಕೊಟ್ಟರೆ ರೀಚಾರ್ಜ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ‘ಐ ಲವ್ ಯು’ ಅಂದ್ರೆ ಮಾತ್ರ ರೀಚಾರ್ಜ್ ಮಾಡೋದು ಅಂತ ಹೇಳಿ ವಿದ್ಯಾರ್ಥಿನಿಯರಿಂದ ಗೂಸಾ ತಿಂದಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮೊಬೈಲ್ ರೀಚಾರ್ಜ್ ಮಾಡಲು ಅಂಗಡಿಗೆ ಹೋದ ವಿದ್ಯಾರ್ಥಿನಿಯರಿಗೆ ಐ ಲವ್ ಯು ಎಂದು ಹೇಳುವಂತೆ ಪೀಡಿಸಿದ ಮಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆಯು ರಾಜಸ್ಥಾನದ ದಿದ್ವಾನಾ ಎಂಬಲ್ಲಿ ನಡೆದಿದೆ.
ದಿದ್ವಾನಾದ ಶಾಲೆಯೊಂದರ ಬಳಿ ಈ ಯುವಕ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದನು. ವಿದ್ಯಾರ್ಥಿನಿಯರು ಯಾವಾಗಲೂ ಇಲ್ಲೇ ರೀಚಾರ್ಜ್ ಮಾಡಿಸುತ್ತಿದುದ್ದರಿಂದ, ಯುವಕ ಹುಡುಗಿಯರ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಇದನ್ನು ದುರುಪಯೋಗ ಮಾಡಿಕೊಂಡು, ಐ ಲವ್ ಯೂ ಹೇಳುವಂತೆ ವಿದ್ಯಾರ್ಥಿನಿಯರನ್ನು ಸತಾಯಿಸಿದ್ದಾನೆ.
ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯರು ಈತನನ್ನು ನಡುರಸ್ತೆಗೆ ಎಳೆದು ಬಿಸಿ ಬಿಸಿ ಕಜ್ಜಾಯವನ್ನು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಡುಗಿಯರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Leave a Comment