ಚಳಿಗಾಲಕ್ಕೆ ನೀವು ಈ ಸೊಪ್ಪುಗಳನ್ನು ತಿನ್ನಲೇಬೇಕು; ಇದರಲ್ಲಿದೆ ಅತಿಹೆಚ್ಚು ಜೀವಸತ್ವಗಳು, ಪೋಷಕಾಂಶಗಳು

Winter 2
Spread the love

ನ್ಯೂಸ್ ಆ್ಯರೋ : ಚಳಿಗಾಲ ಮಳೆಗಾಲ ಬೇಸಿಗೆಗಾಲಕ್ಕೆ ತಕ್ಕಂತೆ ನಮ್ಮಲ್ಲಿ ಸೇವಿಸುವ ಆಹಾರಗಳು ಬದಲಾಗುತ್ತಾ ಹೋಗುತ್ತವೆ. ಹಾಗೆ ಬದಲಾಗಬೇಕು ಕೂಡ. ಸದ್ಯ ಕಾರ್ತಿಕ ಮಾಸದಿಂದ ಕಿರುಚಳಿಯ ಮೂಲಕ ಚಳಿಗಾಲ ಈಗಾಗಲೇ ಪ್ರವೇಶಗೊಂಡಿದೆ. ಈ ಕಾಲದಲ್ಲಿ ಭಾರತೀಯರು ಹೆಚ್ಚು ಮೊರೆ ಹೋಗುವುದು ಸೊಪ್ಪು ಪಲ್ಯಗಳಿಗೆ. ಸೊಪ್ಪಿನ ಆಹಾರಗಳಿಗೆ. ಈ ಚಳಿಗಾಲದಲ್ಲಿ ನೀವು ಬಳಸಲೇಬೇಕಾದ ಕೆಲವು ಸೊಪ್ಪುಗಳಿವೆ. ಅವುಗಳಿಂದ ಅನೇಕ ಆರೋಗ್ಯಕರ ಲಾಭಗಳಿವೆ. ಚಳಿಗಾಲ ಮುಗಿಯುವವರೆಗೂ ಈ ರೀತಿಯ ಸೊಪ್ಪುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಹೆಚ್ಚು ಕಾಪಾಡಿಕೊಳ್ಳಬಹುದು.

ಮೆಂತೆ ಸೊಪ್ಪು:

ಬಹುತೇಕ ವೈದ್ಯರು ನಮ್ಮ ಸದೃಢ ಆರೋಗ್ಯಕ್ಕಾಗಿ ಸೊಪ್ಪುಗಳನ್ನು ಹೆಚ್ಚು ಸೇವಿಸಲು ಹೇಳುತ್ತಾರೆ. ಅದರಲ್ಲಿ ಈ ಮೆಂತೆ ಸೊಪ್ಪು ಪ್ರಮುಖವಾಗಿರುತ್ತದೆ. ಮೆಂತೆ ಸೊಪ್ಪಿನಲ್ಲಿ ಕಬ್ಬಿಣಾಂಶ, ಪೌಷ್ಠಿಕಾಂಶ ಸೇರಿದಂತೆ ಹಲವು ರೀತಿಯ ಜೀವಸತ್ವಗಳು ಹಾಗೂ ಜೀವಪೋಷಕಗಳು ಇವೆ. ಇದರಲ್ಲಿ ಹೆಚ್ಚು ವಿಟಮಿನ್ಸ್ ಹಾಗೂ ಫೈಬರ್ ಅಂಶವು ಇದೆ. ಈ ಒಂದು ಸೊಪ್ಪನ್ನು ಪಲ್ಯ ಮಾಡಿಕೊಂಡು ಕೂಡ ತಿನ್ನಬಹುದು ಇಲ್ಲವೇ ಮೆಂತೆ ಪರೋಟವನ್ನು ಮಾಡಿಕೊಂಡು ಕೂಡ ತಿನ್ನಬಹುದು. ಇದು ಚಳಿಗಾಲಕ್ಕೆ ಇನ್ನೂ ಅನುಕೂಲಕರ ಎಂದು ತಜ್ಞರು ಹೇಳುತ್ತಾರೆ.

420466 Fenugreek Leaves 1

ಸಾಸಿವೆ ಸೊಪ್ಪು:

ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಬಳಸುವುದಿಲ್ಲ. ಪಂಜಾಬ್ ಹಾಗೂ ಉಳಿದ ಉತ್ತರ ರಾಜ್ಯಗಳಲ್ಲಿ ಸಾಸಿವೆ ಸೊಪ್ಪು ತುಂಬಾ ಜನಪ್ರಿಯ ಇಲ್ಲಿ ನಾವು ಪಾಲಕ್, ಸಬ್ಬಸಿಗೆ ಸೊಪ್ಪನ್ನು ಹೇಗೆ ಪ್ರೀತಿಯಿಂದ ಸೇವಿಸುತ್ತೆವೋ ಹಾಗೆಯೇ ಅಲ್ಲಿ ಹೆಚ್ಚು ಪ್ರೀತಿಯಿಂದ ಸಾಸಿವೆ ಸೊಪ್ಪಿನ ಆಹಾರವನ್ನು ಪ್ರೀತಿಸುತ್ತಾರೆ. ಇದೆಲ್ಲದರ ಆಚೆ ಸಾಸಿವೆ ಸೊಪ್ಪಿನಿಂದ ಮಾಡಿದ ಆಹಾರವನ್ನು ಚಳಿಗಾಲದಲ್ಲಿ ಹೆಚ್ಚು ತಿನ್ನುವುದರಿಂದ ಅನೇಕ ಆರೋಗ್ಯದ ಲಾಭಗಳಿವೆ. ಇದರಲ್ಲಿ ವಿಟಮಿನ್ ಸಿ ಹಾಗೂ ಬಿ ಹೇರಳವಾಗಿ ಸಿಗುತ್ತವೆ ಅದಲ್ಲದೇ ಜೀವಸತ್ವಗಳಾದ ಕ್ಯಾಲ್ಸಿಯಂ ಹಾಗೂ ಐರನ್ ಅಂಶವೂ ಕೂಡ ಇದರಲ್ಲಿ ಹೆಚ್ಚು ಕಂಡು ಬರುತ್ತದೆ.

News Display Image 1668004816

ಪಾಲಕ್ ಸೊಪ್ಪು:

ಪಾಲಕ್ ಸೊಪ್ಪಿಗೆ ಇರುವ ಇನ್ನೊಂದು ಹೆಸರೇ ಕಬ್ಬಿಣಾಂಶ. ಅತಿಹೆಚ್ಚು ಕಬ್ಬಿನಾಂಶ ದೇಹಕ್ಕೆ ತುಂಬಾ ಅಗತ್ಯ. ನಾವು ಹೆಚ್ಚು ಹೆಚ್ಚು ಶಕ್ತಿಶಾಲಿಗಳು ಆಗಬೇಕು ಅಂದರೆ ಹೆಚ್ಚು ಹೆಚ್ಚು ಪಾಲಕ್ ತಿನ್ನಬೇಕು ಎಂದು ಬಾಲ್ಯದಲ್ಲಿಯೇ ನಮಗೆ ಹಿರಿಯರು ಹೇಳುತ್ತಾರೆ. ಈ ಒಂದು ಹಸಿರು ಎಲೆಯಿಂದ ಕಬ್ಬಿನಾಂಶದ ಜೊತೆಗೆ ವಿಟಮಿನ್ ಎ,ಸಿ, ಎ ಮತ್ತು ಕೆ ಸಿಗುತ್ತದೆ. ಇದನ್ನು ನಾವು ಹಲವು ರೀತಿಯ ಖಾದ್ಯಗಳನ್ನು ಬಳಸಲು ಉಪಯೋಗಿಸಬಹುದು. ಪಾಲಕ್ ಪನ್ನೀರ್, ಪಾಲಕ್ ಸೂಪ್ ಹಾಗೂ ಪಾಲಕ್ ಆಮ್ಲೆಟ್ ಜೊತೆಗೆ ಪಾಲಕ್ ಪಲ್ಯವನ್ನು ಕೂಡ ಮಾಡಿಕೊಂಡು ತಿನ್ನಬಹುದು.

Spinach

ಹರಿವೆ ಸೊಪ್ಪು :

ನಮ್ಮ ರಕ್ತದಲ್ಲಿ ಹಿಮೋಗ್ಲೊಬಿನ್ ಕಡಿಮೆ ಆದರೆ ನಮಗೆ ವೈದ್ಯರು ಮೊದಲು ಸೂಚಿಸುವುದೇ ಹರಿವೆ ಸೊಪ್ಪನ್ನು ಹೆಚ್ಚು ತಿನ್ನಲು. ಇದು ರಕ್ತದಲ್ಲಿ ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ,ಫೈಬರ್ ಜೊತೆಗೆ ವಿಟಮಿನ್ ಎ ಮತ್ತು ಸಿ ಅಂಶ ಹೆಚ್ಚು ಇರುತ್ತದೆ. ಚಳಿಗಾಲದಲ್ಲಿ ಸೋಂಕುಗಳಿಂದ ರಕ್ಷಣೆ ಪಡೆಯಲು ನಮಗೆ ಹೆಚ್ಚು ರೋಗ ನಿರೋಧಕ ಶಕ್ತಿ ಬೇಕಾಗುತ್ತದೆ. ಹರಿವೆ ಸೊಪ್ಪಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ.

Full

ಬೆಳ್ಳುಳ್ಳಿ ಸೊಪ್ಪು:

ಚಳಿಗಾಲದಲ್ಲಿ ನಾವು ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ತುಂಬಾ ಒಳ್ಳೆಯದು. ಇದರಲ್ಲಿ ಅತಿಹೆಚ್ಚು ಜೀವಸತ್ವಗಳು ಹಾಗೂ ಪೋಷಕಾಂಶಗಳು ಇವೆ. ಇದರಲ್ಲಿ ವಿಟಮಿನ್ ಸಿ ಹಾಗೂ ಬಿ6 ಇರುವುದರಿಂದ ಹಾಗೂ ಕ್ಯಾಲ್ಸಿಯಂ ಸೆಲೆನಿಯಂ ಹೆಚ್ಚು ಇರುವುದರಿಂದ ದೇಹಕ್ಕೆ ತುಂಬಾ ಶಕ್ತಿಯನ್ನು ನೀಡುತ್ತದೆ. ಇದನ್ನೂ ಕೂಡ ನಾವು ಚಟ್ನಿಯ ರೂಪದಲ್ಲಿ, ಸೂಪ್ ರೂಪದಲ್ಲಿ ಹಾಗೂ ಪಲ್ಯದ ರೂಪದಲ್ಲಿ ಸೇವಿಸಬಹುದು.

374014 Green Garlic

Leave a Comment

Leave a Reply

Your email address will not be published. Required fields are marked *

error: Content is protected !!