ಮಧುಮೇಹಕ್ಕಿದು ರಾಮಬಾಣ ; ಈ ತರಕಾರಿಗಳು ನಿಮ್ಮ ಆಹಾರದಲ್ಲಿ ಸಕ್ಕರೆ ಖಾಯಿಲೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ.

ಮಧುಮೇಹಕ್ಕಿದು ರಾಮಬಾಣ ; ಈ ತರಕಾರಿಗಳು ನಿಮ್ಮ ಆಹಾರದಲ್ಲಿ ಸಕ್ಕರೆ ಖಾಯಿಲೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ.

ನ್ಯೂಸ್ ಆ್ಯರೋ : ಶುಗರ್ ಅಥವಾ ಸಕ್ಕರೆ ಖಾಯಿಲೆ ಎನ್ನುವುದು ಬೆಂಬಿಡದ ಬೇತಾಳ ಇದ್ದಂತೆ. ಈ ಖಾಯಿಲೆ ಒಮ್ಮೆ ದೇಹಕ್ಕೆ ಅಂಟಿಕೊಂಡರೆ ಮತ್ತೆ ಇದರಿಂದ ಹೊರ ಬರೋದು ಸಾಧ್ಯವೇ ಇಲ್ಲ. ಈ ಖಾಯಿಲೆ ಆವರಿಸಿಕೊಂಡ ನಂತರ ಸಾವಿನ ವರೆಗೂ ಇದು ಕಾಡುತ್ತಲೇ ಇರುತ್ತದೆ. ಆದರೆ ಈ ಖಾಯಿಲೆ ಬರದಂತೆ ಎಚ್ಚರಿಕೆಯಿಂದ ಇರೋದು ಹೇಗೆ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇರುತ್ತೆ. ಅದನ್ನ ತಿಳಿಯೋದಿಕ್ಕೆ ಈ ವರದಿಯನ್ನ ಓದಿ..

ಸಕ್ಕರೆ ಖಾಯಿಲೆ ಒಮ್ಮೆ ದೇಹವನ್ನ ವ್ಯಾಪಿಸಿಕೊಂಡಿದೆ ಅಂತ ಗೊತ್ತಾದ ಮೇಲೆ ಆಹಾರದ ಬಗ್ಗೆ ನಾವು ಕಾಳಜಿ ವಹಿಸಲೆ ಬೇಕು. ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅಂಶ ಹೆಚ್ಚಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ವೈದ್ಯರ ಸಲಹೆ ಸೂಚನೆಗಳನ್ನ ಪಾಲಿಸಬೇಕು. ಕಟ್ಟುನಿಟ್ಟಾದ ಆಹಾರ ಕ್ರಮಗಳನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ಸಕ್ಕರೆ‌ ಖಾಯಿಲೆಯಿಂದ ದೂರವಿರಬಹುದು.

ಸಕ್ಕರೆ‌ ಖಾಯಿಲೆಯನ್ನ ತಡೆಯುವ ಶಕ್ತಿ ತರಕಾರಿಗಳಿಗಿದೆ :

ಮನುಷ್ಯ ಜೀವಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಕೂಡ ತರಕಾರಿಗಳಲ್ಲಿ ಸಿಗುತ್ತದೆ. ತರಕಾರಿಗಳಲ್ಲಿ ಖಾಯಿಲೆಗಳ ವಿರುದ್ಧ ಹೋರಾಟುವ ಶಕ್ತಿಯಿದೆ ಎಂಬುದು ಗಮನಾರ್ಹ ವಿಚಾರ. ಆದ್ದರಿಂದ ದಿನ ನಿತ್ಯದ ಆಹಾರದಲ್ಲಿ ತರಕಾರಿಗಳನ್ನು‌ ಬಳಸುವುದು ಬಹಳಷ್ಟು ಒಳ್ಳೆಯದು. ಇದರಿಂದಾಗಿ ಇರುವ ಖಾಯಿಲೆಗಳನ್ನು ಹದ್ದುಬಸ್ತಿನಲ್ಲಿಟ್ಟು, ಬರುವ ಖಾಯಿಲೆಗಳನ್ನು ತಡೆಯಬಹುದಾಗಿದೆ ಜೊತೆಗೆ ತೊಂಡೆ ಮತ್ತು ಬೆಂಡೆಕಾಯಿಗಳಲ್ಲಿ ಸಕ್ಕರೆ ಕಾಯಿಲೆ ತಡೆಯುವ ಶಕ್ತಿಯಿದೆ.

ತೊಂಡೆಕಾಯಿಯ ಪ್ರಯೋಜನಗಳು

‘ಹಿತ್ತಲ ಬಳ್ಳಿ ಮದ್ದಲ್ಲ’ ಎಂಬ ಗಾದೆ ಮಾತಿದೆ ಹಾಗೆಯೇ ಇಂದಿನ ಜನರಿಗೆ ಹಳ್ಳಿ ಪ್ರದೇಶಗಳಲ್ಲಿ‌ ಬೆಳೆಯುವ ತೊಂಡೆಕಾಯಿಯ ಬಗ್ಗೆ ಕೊಂಚ ಅಸಡ್ಡೆಯಿದೆ. ಆದರೆ ನೀವು ಈ ತೊಂಡೆಕಾಯಿಯ ಪ್ರಯೋಜನಗಳನ್ನು ಕೇಳಿದ್ರೆ ಚಕಿತರಾಗ್ತಿರ. ಒಂದು ವೈದ್ಯಕೀಯ ಸಂಶೋಧನಾ ವರದಿಯ ಪ್ರಕಾರ ಸಕ್ಕರೆ ಕಾಯಿಲೆಯಿಂದ ಬಳಲುವವರು ತಮ್ಮ ದೈನಂದಿನ ಆಹಾರದಲ್ಲಿ ತೊಂಡೆಕಾಯಿಯನ್ನು ಬಳಸುವುದರಿಂದ ಖಾಯಿಲೆಯ ತೀವ್ರತೆಯನ್ನು‌ ತಡೆಯಬಹುದು ಎಂಬ ವಿಚಾರ ಸಾಬೀತಾಗಿದೆ.
ತೊಂಡೆಕಾಯಿ ಸೇವನೆಯಿಂದಾಗಿ ರಕ್ತದಲ್ಲಿನ ಸಕ್ಕರೆ‌ ಅಂಶ ನಿಯಂತ್ರಣಕ್ಕೆ ಬರುತ್ತದೆ. ಆದ್ದರಿಂದ ಈ ತೊಂಡೆಕಾಯಿಯ ಸೇವನೆ ಮಧುಮೇಹಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಬಲ್ಲದು.

ಬೆಂಡೆಕಾಯಿಯ ಪಾತ್ರವೇನು?

ತೊಂಡೆಕಾಯಿಯಂತೆ ಬೆಂಡೆಕಾಯಿಯಲ್ಲೂ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸುವ ಶಕ್ತಿಯಿದೆ‌. ಸಾಕಷ್ಟು ಜನರು ಬೆಂಡೆಕಾಯಿ ಲೋಳೆಯುಕ್ತ ಎಂಬ ಕಾರಣಕ್ಕೆ ಅದರಿಂದ ದೂರವಿರುತ್ತಾರೆ. ಆದರೆ ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರೊಂದಿಗೆ ನಾರಿನಾಂಶ ಹೆಚ್ಚಿರುವ ಕಾರಣ ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮಧುಮೇಹಿಗಳು ತೊಂಡೆಕಾಯಿಯ ಮತ್ತು‌ ಬೆಂಡೆಕಾಯಿಯನ್ನು ಆಹಾರದಲ್ಲಿ ಹೆಚ್ಚು ಬಳಸುವುದು ಒಳ್ಳೆಯದು.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *