ಮುತ್ತು‌ ಜೀವಕ್ಕೆ ತರಬಹುದು‌ ಕುತ್ತು; ಪ್ರೇಮಿಗಳೆ ಎಚ್ಚರ ಮುತ್ತು‌ಕೊಡುವುದರಿಂದ‌ ಈ‌ ಕಾಯಿಲೆಗಳು ಬರುತ್ತವಂತೆ!

ಮುತ್ತು‌ ಜೀವಕ್ಕೆ ತರಬಹುದು‌ ಕುತ್ತು; ಪ್ರೇಮಿಗಳೆ ಎಚ್ಚರ ಮುತ್ತು‌ಕೊಡುವುದರಿಂದ‌ ಈ‌ ಕಾಯಿಲೆಗಳು ಬರುತ್ತವಂತೆ!

ನ್ಯೂಸ್ ಆ್ಯರೋ : ನಾವು ಬಹಳಷ್ಟು ಪ್ರೀತಿಸುವ ಮತ್ತು ಇಷ್ಟ ಪಡುವ ವ್ಯಕ್ತಿಗೆ ಪ್ರೀತಿಯಿಂದ ಮುತ್ತು ಕೊಡುವುದು ಮಾಮೂಲು. ಆದರೆ ಈ ಮುತ್ತಿನಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೀಗ ವರದಿಯೊಂದರಿಂದ ದೃಢವಾಗಿದೆ. ಇದನ್ನು ನಿರ್ಲಕ್ಷ್ಯ ಮಾಡುವ‌ ಹಾಗಿಲ್ಲ. ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕಿನ ಮೂಲಕ ಈ ಕಾಯಿಲೆಗಳು ವ್ಯಕ್ತಿಯ ಎಂಜಲಿನ‌ ಮೂಲಕ ಹರಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹಾಗಾದರೆ ಯಾವ ಕಾಯಿಲೆ ಮುತ್ತು ಕೊಡುವುದರಿಂದ ಬರಬಹುದು ಮತ್ತು ಕಾಯಿಲೆಗಳನ್ನು ತಡೆಯುವುದು ಹೇಗೆ ಎಂದು ನೋಡೋಣ ಬನ್ನಿ.

ಮುತ್ತಿನಿಂದ ಶೀತವಾಗಬಹುದು :

ಮುತ್ತಿನಿಂದ ಶೀತವಾಗಬಹುದು ಎಂಬ ಮಾತನ್ನು ತಜ್ಞರು ದೃಢೀಕರಿಸುತ್ತಾರೆ‌. ಅವರ ಪ್ರಕಾರ, ಮುತ್ತು ಕೊಡುವ ವ್ಯಕ್ತಿಯಿಂದ ಮುತ್ತು ತೆಗೆದುಕೊಳ್ಳು ವ್ಯಕ್ತಿಗೆ ಎಂಜಲಿನ ರೂಪದಲ್ಲಿ Pesky rhinovirus ಎಂಬ ವೈರಸ್ ಹರಡುತ್ತದೆ. ಇದರಿಂದಾಗಿ ಶೀತವಾಗುವ ಸಾಧ್ಯತೆ ಇದೆಯಂತೆ.ಆದರೆ ಪರಸ್ಪರ ತಬ್ಬಿಕೊಳ್ಳುವುದರಿಂದ ಅಥವಾ ಒಂದೇ ಪ್ಲೇಟ್ ನಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ಅಪಾಯವಿಲ್ಲ.

ಮೆನಿಂಜೈಟಿಸ್ ಎಂಬ ಮಾರಕ ಕಾಯಿಲೆ ಬರಬಹುದು

ಮುತ್ತು ಕೊಡುವುದರಿಂದ ಕೇವಲ ಸಣ್ಣ ಪುಟ್ಟ ಅನಾರೋಗ್ಯ ಮಾತ್ರವಲ್ಲ, ಮೆನಿಂಜೈಟಿಸ್ ಎಂಬ ಮಾರಕ ಕಾಯಿಲೆಯೂ ಕೂಡ ದೇಹಕ್ಕೆ ಹರಡುವ ಸಾಧ್ಯತೆ ಇದೆ. ಇದು ಮನುಷ್ಯನ ಜೀವಕ್ಕೆ ಮಾರಕವಾಗಿದ್ದು, ಪ್ರಮುಖವಾಗಿ ಮೆದುಳಿಗೆ ಮತ್ತು ಬೆನ್ನುಹುರಿಯ ಭಾಗದಲ್ಲಿ ಬ್ಯಾಕ್ಟೀರಿಯ ಸೋಂಕಿನ ರೂಪದಲ್ಲಿ‌ ಕಂಡು ಬರುತ್ತದೆ. ಮೊದಲೇ ಯಾರಿಗಾದರು ಈ ಕಾಯಿಲೆಯಿದ್ದು ಅವರೊಂದಿಗೆ ದೀರ್ಘವಾದ ತುಟಿ ಚುಂಬನ ನಡೆಸಿದರೆ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ವು ಎಂದು ವೈದ್ಯರು ಸ್ಪಷ್ಟನೆ ನೀಡುತ್ತಾರೆ.

ಮುತ್ತಿನಿಂದ ಬರಬಹುದು ರುಬೆಲ್ಲ!

ಪರಸ್ಪರ ಮುತ್ತು‌ ಕೊಡುವುದರಿಂದ ಬರಬಹುದಾದ ಮತ್ತೊಂದು‌ ಕಾಯಿಲೆ ಎಂದರೆ ಅದು ರುಬೆಲ್ಲ. ಇದು ಮೂಗಿನ ಹಾಗೂ ಗಂಟಲಿನ ಭಾಗದಿಂದ ಹೊರಬರುವ ದ್ರವದ ಮೂಲಕ ಮತ್ತೊಬ್ಬರಿಗೆ ಹರಡುತ್ತದೆ. ಇದೊಂದು ವೈರಸ್‌ನಿಂದ ಹರಡಬಹುದಾಗಿದ್ದು, ದೇಹದಲ್ಲಿ ಇವುಗಳು ಕೆಂಪು ದದ್ದುಗಳನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.

ಪೋಲಿಯೋ :

ಸೋಂಕಿತ ವ್ಯಕ್ತಿಯೊಂದಿಗೆ ನೀರು ಹಾಗೂ ಆಹಾರವನ್ನು ವಿನಿಮಯ ಮಾಡಿಕೊಳ್ಳುವುದರಿಂದ ಈ ಕಾಯಿಲೆ ಹರಡುತ್ತದೆ. ವ್ಯಕ್ತಿಯ ಎಂಜಲು, ಕಫ ಹಾಗೂ ನೆಗಡಿಯಲ್ಲಿ ಈ ವೈರಸ್ ಇರಲಿದ್ದು, ಮುತ್ತು ಕೊಡುವುದರಿಂದ ಸುಲಭವಾಗಿ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಕಾಯಿಲೆ ತಡೆಯಲು‌ ಈ ಕ್ರಮ ಅನುಸರಿಸಿ

ಮುತ್ತು‌ ಕೊಡುವುದರಿಂದ ಅಥವಾ ಪಡೆಯುವುದರಿಂದ ಬರಬಹುದಾದ ಕಾಯಿಲೆಗಳನ್ನು ಕೆಲವು ಮುಂಜಾಗ್ರತಾ ಕ್ರಮಗಳಿಂದ ತಡೆಯಬಹುದಾಗಿದ್ದು. ಅವುಗಳು‌ ಇಂತಿವೆ.

  1. ಮುತ್ತು‌ ಕೊಡುವ ಅಥವಾ ತೆಗೆದುಕೊಳ್ಳುವ ಮೊದಲು ಬಾಯನ್ನು ಸ್ವಚ್ಚಗೊಳಿಸಬೇಕು.
  2. ಚುಂಬನಕ್ಕೂ‌‌ ಮೊದಲು ಮುಖವನ್ನು‌ ತೊಳೆದುಕೊಳ್ಳಬೇಕು.
  3. ಶೀತ, ನೆಗಡಿ, ಕೆಮ್ಮು‌ ಇರುವ ಸಮಯದಲ್ಲಿ ದೀರ್ಘ ಚುಂಬನ ನಡೆಸಬಾರದು.
  4. ಚುಂಬನದ ಸಮಯದಲ್ಲಿ ಮುಖ ಅಥವಾ ಕುತ್ತಿಗೆ ಭಾಗದಲ್ಲಿ ಬೆವರಿಲ್ಲದಂತೆ ಒರೆಸಿಕೊಳ್ಳಬೇಕು.

5.ಮುತ್ತು ಕೊಡುವ, ಪಡೆಯುವ ವ್ಯಕ್ತಿಯೊಂದಿಗೆ ನಿಮಗಿರುವ ಅನಾರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ, ಎಚ್ಚರಿಕೆಯಿಂದ ಮುತ್ತಿನ ವಿನಿಮಯ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ವೈದ್ಯರು.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *