ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ…!? – ಸೈನಸ್ ಉಪಶಮನಕ್ಕೆ ಇಲ್ಲಿದೆ ನೈಸರ್ಗಿಕ ಮನೆ ಮದ್ದುಗಳು..

ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ…!? – ಸೈನಸ್ ಉಪಶಮನಕ್ಕೆ ಇಲ್ಲಿದೆ ನೈಸರ್ಗಿಕ ಮನೆ ಮದ್ದುಗಳು..

ನ್ಯೂಸ್ ಆ್ಯರೋ : ಇದೀಗ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರೋ ಆರೋಗ್ಯ ಸಮಸ್ಯೆಗಳಲ್ಲಿ ಸೈನಸ್ ಕೂಡ ಒಂದು. ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಕುಳಿಗಳು. ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಕೆಲವೊಮ್ಮೆ ಈ ಕುಳಿಗಳು ಮುಚ್ಚಿಹೋಗುತ್ತವೆ. ಆಗ ವ್ಯಕ್ತಿ ತಲೆನೋವು, ಉಸಿರಾಟದ ಸಮಸ್ಯೆ, ಗೊರಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಒಳಗಾಗುತ್ತಾನೆ. ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಾಗ ಮೆದುಳಿನ ಜ್ವರ, ಮೆನಿಂಜೈಡಿಸ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸೈನಸ್ ಸಮಸ್ಯೆಗಳಲ್ಲಿ ವಿವಿಧ ಬಗೆ ಇರುವುದನ್ನು ಕಾಣಬಹುದು. ಈ ಆರೋಗ್ಯ ಸಮಸ್ಯೆಯು ಗುಣ ಮುಖವಾಗಲು 4- 8 ವಾರಗಳ ಕಾಲ ಸಮಯ ಬೇಕಾಗುವುದು. ಆಗಾಗ ಕಾಡುವ ಈ ಸೈನಸ್ ಸಮಸ್ಯೆಗೆ ಕೆಲವು ಮನೆ ಮದ್ದನ್ನು ಮಾಡುವುದರ ಮೂಲಕ ತ್ವರಿತವಾದ ಪರಿಹಾರವನ್ನು ಕಂಡುಕೊಳ್ಳಬಹುದು.

ಅಧಿಕ ನೀರು ಸೇವನೆ ಮಾಡಿ
ಸೈನಸ್ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು ಅಧಿಕ ನೀರು, ಸಕ್ಕರೆ ರಹಿತವಾದ ಪಾನೀಯಗಳು ಹಾಗೂ ಬೆಚ್ಚಗಿನ ಪಾನೀಯಗಳನ್ನು ಆಗಾಗ ಸೇವಿಸುತ್ತಲೇ ಇರಬೇಕು. ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಲೋಳೆಗಳು ತೆಳುವಾಗಿರಲು ಸಹಾಯ ಮಾಡುತ್ತದೆ.

ಕಾಳು ಮೆಣಸು ಸೇವಿಸಿಜೊತೆಗೆ ಕಿರಿಕಿರಿಗೊಳಿಸುವ ಸೈನಸ್‍ಗೆ ಪರಿಹಾರವನ್ನು ನೀಡುವುದು. ದೇಹವನ್ನು ನಿರ್ಜಲೀಕರಣ ಮಾಡುವ ಆಲ್ಕೋಹಾಲ್, ಕೆಫೀನ್ ಮತ್ತು ಧೂಮಪಾನಗಳನ್ನು ಆದಷ್ಟು ತಪ್ಪಿಸಬೇಕು. ಇವು ಸಮಸ್ಯೆಯನ್ನು ಅಧಿಕ ಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣವನ್ನು ಹೊಂದಿರುವ ಕಾಳು ಮೆಣಸು, ಕೆಂಪು ಮೆಣಸು ಹಾಗೂ ಇನ್ನಿತ ಮಸಾಲ ಪದಾರ್ಥಗಳನ್ನು ಬಳಸಬಹುದು. ಅವು ಲೋಳೆಗಳು ಒಡೆದು ಬರಿದಾಗಲು ಅಥವಾ ಕಡಿಮೆಯಾಗಲು ಸಹಾಯ ಮಾಡುತ್ತವೆ. ಮೂಲಂಗಿಯ ರಸ, ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ರಸವನ್ನು ಬೆರೆಸಿ, ಲೋಳೆ ಕರಗುವಂತಹ ದಿವ್ಯ ಔಷಧವನ್ನು ಸಿದ್ಧಪಡಿಸಿಕೊಂಡು ಸೇವಿಸಬಹುದು. ಇಲ್ಲವೇ ತಾಜಾ ಮೂಲಂಗಿ ರಸವನ್ನು 1/4 ಟೀ ಚಮಚದಷ್ಟು ಬಾಯಿಗೆ ಹಾಕಿಕೊಂಡು, ಕೆಲ ನಿಮಿಷಗಳ ಕಾಲ ಬಾಯಲ್ಲಿಯೇ ಹಿಡಿದಿಟ್ಟುಕೊಳ್ಳಬೇಕು. ಒಮ್ಮೆ ರುಚಿಯು ಆವಿಯಾಗಿದೆ ಎಂದಾಗ ಆ ರಸವನ್ನು ನುಂಗಬೇಕು. ಈ ಕ್ರಮಗಳು ಸೈನಸ್‍ಗೆ ಪರಿಣಾಮ ಕಾರಿಯಾದ ಚಿಕಿತ್ಸೆ ನೀಡುತ್ತವೆ.

ಆಗಾಗ ಹಬೆ ತೆಗೆದುಕೊಳ್ಳುವಿಕೆ


ಹಬೆಯನ್ನು ತೆಗೆದುಕೊಳ್ಳುವುದು ಸೈನಸ್‍ಗೆ ಒಂದು ವಿಶೇಷವಾದ ಮನೆ ಔಷಧಿ ಎನಿಸಿಕೊಳ್ಳುತ್ತದೆ. ಇದನ್ನು ವೈದ್ಯರು ಸಹ ಮಾಡಲು ಸಲಹೆ ನೀಡುವರು. ಬಿಸಿ ನೀರಿನ ಪಾತ್ರೆಗೆ 3 ಹನಿ ಪುದೀನಾ ಅಥವಾ ರೋಸ್ಮರಿ ಎಣ್ಣೆ, 2 ಹನಿ ನೀಲಗಿರಿ ಎಣ್ಣೆ ಅಥವಾ 1 ಹನಿ ಥೈಮ್ ಅನ್ನು ಸೇರಿಸಿ, ಮಿಶ್ರಗೊಳಿಸಬೇಕು. ನಂತರ ಬಿಸಿಯಾದ ಹಬೆಗೆ ಮುಖವನ್ನು ಹಿಡಿದು, ತಲೆಯ ಮೇಲ್ಭಾಗದಿಂದ ಹಬೆಯ ಪಾತ್ರೆ ಮುಚ್ಚುವಂತೆ ಟವೆಲ್ ಅಥವಾ ದಪ್ಪ ಬಟ್ಟೆಯನ್ನು ಮುಚ್ಚಿಕೊಳ್ಳಬೇಕು.ಆಗ ಆರೋಗ್ಯಕರವಾದ ಬಿಸಿ ಬಿಸಿಯಾದ ಉಗಿಯು ಮೂಗಿನೊಳಗೆ ಹೋಗುವುದು. ಆಗ ನಿರ್ಬಂಧಿತವಾದ ಉಸಿರಾಟ ಹಾಗೂ ಮೂಗಿನ ಮಾರ್ಗವು ತೆರವುಗೊಳ್ಳುತ್ತದೆ. ಸೈನಸ್ ಸಮಸ್ಯೆಯು ತ್ವರಿತವಾಗಿ ಶಮನವಾಗುವುದು.

ಅರಿಶಿನ ಮತ್ತು ಶುಂಠಿ ಸೇವನೆ

ಅರಿಶಿನ ಮತ್ತು ಶುಂಠಿಯು ಅದ್ಭುತವಾದ ಪರಿಮಳ ಹಾಗೂ ಆರೋಗ್ಯಯುತವಾದ ಮಸಾಲ ಪದಾರ್ಥ. ಇದನ್ನು ಆಯುರ್ವೇದದಲ್ಲಿ ದಿವ್ಯ ಔಷಧದ ಮೂಲ ಎಂದು ಪರಿಗಣಿಸಲಾಗುವುದು. ಇವು ನೈಸರ್ಗಿಕವಾಗಿಯೇ ಉರಿಯೂತದ ಗುಣಲಕ್ಷಣವನ್ನು ಹೊಂದಿರುವುದಲ್ಲದೆ ಉತ್ಕರ್ಷಣ ನಿರೋಧಕ ಗುಣಗಳಿಂದ ಕೂಡಿದೆ. ಇವುಗಳನ್ನು ಬಿಸಿಬಿಸಿಯಾದ ಕಷಾಯ, ಚಹಾಗಳಲ್ಲಿ ಸೇರಿಸಿ ಕುಡಿಯುವುದರಿಂದ ಮೂಗಿನ ಮಾರ್ಗದಲ್ಲಿ ಉಂಟಾಗುವ ಲೋಳೆಯನ್ನು ಸಡಿಲಗೊಳಿಸಿ, ಕಡಿಮೆ ಮಾಡುತ್ತದೆ. 1 ಟೀ ಚಮಚ ಜೇನುತುಪ್ಪದೊಂದಿಗೆ ತಾಜಾ ಶುಂಠಿ ರಸವನ್ನು ದಿನಕ್ಕೆ 2-3 ಬಾರಿ ಸೇವಿಸಿದರೆ ಸೈನಸ್ ಸಮಸ್ಯೆಗೆ ತ್ವರಿತವಾದ ಉಪಶಮನ ದೊರೆಯುವುದು.

ಗಿಡಮೂಲಿಕೆಯ ಸೂಪ್‍ ಸೇವಿಸಿ

ಮೂಗಿನ ದಟ್ಟಣೆ ಹಾಗೂ ಸೈನಸ್ ತೊಂದರೆಗೆ ಬಿಸಿ-ಬಿಸಿಯಾದ ಸೂಪ್ ಕುಡಿಯುವುದು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯಾಗುವುದು. ಗಿಡಮೂಲಿಕೆಯ ಸೂಪ್‍ಗಳು, ಚಿಕನ್ ಸೂಪ್‍ಗಳು, ತರಕಾರಿ ಸೂಪ್ ಸೇರಿದಂತೆ ಹಲವಾರು ಪಾಕವಿಧಾನಗಳ ಸೂಪ್‍ಅನ್ನು ಆಯ್ಕೆಗೆ ಅನುಗುಣವಾಗಿ ಕುಡಿಯಬಹುದು. ಇವುಗಳಿಂದ ಸೈನಸ್ ತೆರವುಗೊಳಿಸಲು ಸಹಾಯವಾಗುವುದು.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *