ತೆಂಗಿನ ಎಣ್ಣೆ ಜೊತೆಗೆ ಇದನ್ನು ಬೆರೆಸಿ ಹಚ್ಚಿದ್ರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ – ಏನದು ಹೊಸ ವಿಧಾನ? ಇಲ್ಲಿದೆ ನೋಡಿ ವಿವರ.

ತೆಂಗಿನ ಎಣ್ಣೆ ಜೊತೆಗೆ ಇದನ್ನು ಬೆರೆಸಿ ಹಚ್ಚಿದ್ರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ – ಏನದು ಹೊಸ ವಿಧಾನ? ಇಲ್ಲಿದೆ ನೋಡಿ ವಿವರ.

ನ್ಯೂಸ್ ಆ್ಯರೋ : ಇಂದಿನ ಆಧುನಿಕ‌ ಜಗತ್ತು ಮನುಷ್ಯ ಕುಲಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಮಾರಕವಾಗುತ್ತಿದೆ. ಇಂದಿನ ಆಹಾರ ಕ್ರಮ, ಒತ್ತಡದ ಜೀವನ, ಹೇರ್ ಕಲರ್, ರಾಸಾಯನಿಕಗಳ ಬಳಕೆಯಿಂದ ವಯಸ್ಸಿಗೂ ಮುನ್ನವೇ ಕೂದ ಬಿಳಿಯಾಗುತ್ತಿದೆ. ಕೂದಲು ಬಿಳಿಯಾಗುತ್ತಿರುವುದರಿಂದ ಯುವ ಜನತೆ ಮುಜುಗರಕ್ಕೆ ಒಳಗಾಗಿ ರಾಸಾಯನಿಕ ಔಷಧಗಳ ಮೊರೆ ಹೋಗುತ್ತಿದ್ದಾರೆ. ಆದರೆ ತೆಂಗಿನ ಎಣ್ಣೆಗೆ ಈ ಒಂದು ವಸ್ತು ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಹುದು ಎಂಬುದು ನಿಮಗೆ ಗೊತ್ತಾ?

ಬಿಳಿ‌ ಕೂದಲು ಕಪ್ಪಾಗಿಸುವುದು ಹೇಗೆ?

ಶತಮಾನಗಳಿಂದಲೂ ನಮ್ಮ‌ ಹಿರಿಯರು ತೆಂಗಿನ ಎಣ್ಣೆಯನ್ನು ಕೂದಲಿನ ಆರೈಕೆಗಾಗಿ ಬಳಸುತ್ತಿದ್ದಾರೆ. ಈ ತೆಂಗಿನ ಎಣ್ಣೆಯ ಬಳಕೆಯಿಂದ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲು ಬಲಿಷ್ಠವಾಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ.‌ ಆದರೆ ಇತ್ತೀಚೆಗೆ ಯುವ ಜನರನ್ನೂ ಕಾಡುತ್ತಿರುವ ಬಿಳಿ ಕೂದಲಿನ ಸಮಸ್ಯೆ ತಡೆಯಲು ತೆಂಗಿನ‌ ಎಣ್ಣೆಯ ಜೊತೆಗೆ ನಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿದರೆ ಈ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.

ನಿಂಬೆ ರಸದ ಮಹಿಮೆ ಗೊತ್ತಾ?

ನಿಂಬೆ ಹಣ್ಣಿನ ರಸವನ್ನು ಹಲವಾರು ಔಷಧ ಕ್ರಮದಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ‌. ಹಾಗೆಯೇ ಕೂದಲಿನ ಸಮಸ್ಯೆಗೂ ಬಳಸುತ್ತಾರೆ.‌ ಇದರಲ್ಲಿ ಶಿಲೀಂಧ್ರ ನಾಶಕ ಗುಣಗಳಿದೆ. ಈ ಕಾರಣದಿಂದ ನಿಂಬೆ ರಸವನ್ನು ತೆಂಗಿನ ಎಣ್ಣೆಯ ಜೊತೆ ಸೇರಿಸಿ ಬೆರೆಸಿದರೆ ತಲೆ ಹೊಟ್ಟು ಶಮನವಾಗಿ ಕೂದಲಿನ ಬೆಳವಣಿಗೆಗೆ ಸಹಾಯಕವಾಗುತ್ತದೆ‌ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದನ್ನು ಇದು ತಡೆಯುತ್ತದೆ.

ಬಿಳಿ‌ ಕೂದಲಿಗೆ ಕಾರಣ ಮತ್ತು ಪರಿಹಾರ?

ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಲು ಒತ್ತಡದ ಜೀವನ, ಕಳಪೆ ಆಹಾರ ಕ್ರಮ ಜೊತೆಗೆ ಬಹು ಮುಖ್ಯವಾಗಿ ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾಗುವುದರಿಂದ ಆಗುತ್ತದೆ. ಇದಕ್ಕೆ ನಿಂಬೆ ಹಣ್ಣಿನ ಜೊತೆಗೆ ತೆಂಗಿನ ಎಣ್ಣೆ ಬೆರೆಸಿ ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕೂದಲು ಶಾಶ್ವತವಾಗಿ ಕಪ್ಪಾಗಿರುತ್ತದೆ ಎಂದು ಕೆಲ ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *