ರೈತರ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ನೆರವಾಗಲಿದೆ ಸರ್ಕಾರದ ಈ ಯೋಜನೆ – ಪಿಎಂ ಕಿಸಾನ್ ಮಾಂದನ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ರೈತರ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ನೆರವಾಗಲಿದೆ ಸರ್ಕಾರದ ಈ ಯೋಜನೆ – ಪಿಎಂ ಕಿಸಾನ್ ಮಾಂದನ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ನ್ಯೂಸ್ ಆ್ಯರೋ‌ : ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡುತ್ತದೆ, ಅಂದರೆ, ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ.

ಈ ಯೋಜನೆಯ ಜತೆಗೆ ರೈತರ ಆರ್ಥಿಕ ಸಹಾಯಕ್ಕಾಗಿ ಮತ್ತು ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಸರ್ಕಾರವು ಪಿಎಂ ಕಿಸಾನ್ ಮಾಂದನ್ ಯೋಜನೆ’ಯನ್ನೂ ಆರಂಭಿಸಿದೆ. ರೈತರಿಗೂ ಕೂಡ ಪಿಂಚಣಿ ಸೌಲಭ್ಯ ನೀಡುವ ಮುಖ್ಯ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

ರೈತರಿಗೆ ಖಚಿತ ಪಿಂಚಣಿ ಸಿಗಲಿದೆ

ಪ್ರಧಾನಮಂತ್ರಿ ಕಿಸಾನ್ ಮಾಂದನ್ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್ಧನ್ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು ಸಹ ಮಾಡಲಾಗುತ್ತದೆ. ಈ ಯೋಜನೆಯ ಅನೇಕ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ.

ಏನಿದು ಪಿಎಂ ಕಿಸಾನ್ ಮಾಂದನ್ ಯೋಜನೆ?

ಪಿಎಂ ಕಿಸಾನ್ ಮಾಂದನ್ ಯೋಜನೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 60 ವರ್ಷ ವಯಸ್ಸಿನ ನಂತರ ಈ ಯೋಜನೆಯಡಿ ರೈತರಿಗೆ ಪಿಂಚಣಿ ಸೌಲಭ್ಯವಿದೆ. ಅಂದರೆ, ರೈತರ ವೃದ್ದಾಪ್ಯ ಕಾಪಾಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ.

ಈ ದಾಖಲೆಗಳು ಅಗತ್ಯ

  1. ಆಧಾರ್ ಕಾರ್ಡ್
  2. ಗುರುತಿನ ಚೀಟಿ
  3. ವಯಸ್ಸಿನ ಪ್ರಮಾಣಪತ್ರ
  4. ಆದಾಯ ಪ್ರಮಾಣಪತ್ರ
  5. ಕ್ಷೇತ್ರದ ಖಸ್ರಾ ಖತೌನಿ
  6. ಬ್ಯಾಂಕ್ ಖಾತೆ ಪಾಸ್‌ಬುಕ್
  7. ಮೊಬೈಲ್ ಸಂಖ್ಯೆ
  8. ಪಾಸ್‌ಪೋರ್ಟ್ ಗಾತ್ರದ ಫೋಟೋ

ಕುಟುಂಬ ಪಿಂಚಣಿ ಒದಗಿಸುವುದು

ಈ ಯೋಜನೆಯಡಿಯಲ್ಲಿ, ನೋಂದಾಯಿತ ರೈತರು 60 ವರ್ಷ ವಯಸ್ಸಿನ ನಂತರ ವಯಸ್ಸಿನ ಪ್ರಕಾರ ಮಾಸಿಕ ಹೂಡಿಕೆಯ ಮೇಲೆ ಕನಿಷ್ಠ 3000 ರೂ ಅಥವಾ ವರ್ಷಕ್ಕೆ ರೂ 36,000 ಪಿಂಚಣಿ ಪಡೆಯುತ್ತಾರೆ. ಇದಕ್ಕಾಗಿ ರೈತರು ಮಾಸಿಕ ₹55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಪಿಎಂ ಕಿಸಾನ್ ಮಾನ್‌ಧನ್‌ ನಲ್ಲಿ ಕುಟುಂಬ ಪಿಂಚಣಿ ಸೌಲಭ್ಯವೂ ಇದೆ. ಖಾತೆದಾರನ ಮರಣದ ನಂತರ, ಅವನ ಸಂಗಾತಿಯು ಶೇ.50ರಷ್ಟು ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿಯಲ್ಲಿ ಸಂಗಾತಿಯನ್ನು ಮಾತ್ರ ಸೇರಿಸಲಾಗುತ್ತದೆ.

ಫಲಾನುಭವಿಗೆ ಹೇಗೆ ಪ್ರಯೋಜನ?

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ, ಅರ್ಹ ರೈತರಿಗೆ 2000 ರೂ.ಗಳ 3 ಕಂತುಗಳಲ್ಲಿ ಸರ್ಕಾರವು ಪ್ರತಿ ವರ್ಷ ರೂ 6000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಅದರ ಖಾತೆದಾರರು ಪಿಂಚಣಿ ಯೋಜನೆ ಪಿಎಂ ಕಿಸಾನ್ ಮಾಂದನ್ ಯೋಜನೆಯಲ್ಲಿ ಭಾಗವಹಿಸಿದರೆ, ಅವರ ನೋಂದಣಿಯನ್ನು ಸುಲಭವಾಗಿ ಮಾಡಲಾಗುತ್ತದೆ. ಅಲ್ಲದೆ, ರೈತರು ಈ ಆಯ್ಕೆಯನ್ನು ಆರಿಸಿದರೆ, ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಕಡಿತಗೊಳಿಸುವ ಕೊಡುಗೆಯನ್ನು ಈ 3 ಕಂತುಗಳಲ್ಲಿ ಪಡೆದ ಮೊತ್ತದಿಂದಲೇ ಕಡಿತಗೊಳಿಸಲಾಗುತ್ತದೆ. ಅಂದರೆ, ಇದಕ್ಕಾಗಿ ಪಿಎಂ ಕಿಸಾನ್ ಖಾತೆದಾರರು ಜೇಬಿನಿಂದ ಹಣ ಹೂಡಿಕೆ ಮಾಡಬೇಕಾಗಿಲ್ಲ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *