ಡೂಡಲ್ ಮೂಲಕ ಗಾಯಕ ‘ಕೆಕೆ’ ಗೆ ಗೌರವ ಸಲ್ಲಿಸಿದ ಗೂಗಲ್; ಇದಕ್ಕೆ ಕಾರಣ ಏನು ಗೊತ್ತಾ ?

Krishnakumar Kunnath
Spread the love

ನ್ಯೂಸ್ ಆ್ಯರೋ: ಭಾರತೀಯ ಹಿನ್ನೆಲೆ ಗಾಯನಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಿ ಮತ್ತು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ವಾರ್ಷಿಕೋತ್ಸವವನ್ನು ಸ್ಮರಿಸಿ, ಕೆಕೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಿಮೇಟೆಡ್ ಡೂಡಲ್ ಮೂಲಕ ಗೂಗಲ್ ಶುಕ್ರವಾರ ಗೌರವ ಸಲ್ಲಿಸಿದೆ.

1996ರಲ್ಲಿ ಅ.25 ರ ಈ ದಿನದಂದು, ಕೆಕೆ ಅವರು ಮೊದಲ ಬಾರಿಗೆ “ಮಾಚಿಸ್” ಚಿತ್ರದ “ಛೋಡ್ ಆಯೆ ಹಮ್” ಹಾಡಿನ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿ ಹಿನ್ನೆಲೆ ಗಾಯಕನಾಗಿ ಪಾದಾರ್ಪಣೆ ಮಾಡಿದರು. ಇದರ ನೆನಪಿಗಾಗಿ ಗೂಗಲ್‌ ಇಂದು ಗೌರವ ಅರ್ಪಿಸಿದೆ.

ಕೆಕೆ (ಕೃಷ್ಣಕುಮಾರ್​ ಕುನ್ನತ್​ ) ಅವರು ಕೂಡ ಹೃದಯಾಘಾತದಿಂದ ನಿಧನರಾಗಿರುವುದು ನೋವಿನ ಸಂಗತಿ. ಹಲವು ಭಾಷೆಗಳಲ್ಲಿ ಹಾಡಿ ಫೇಮಸ್​ ಆಗಿದ್ದ ಅವರು 2022 ರ ಮೇ 31 ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಆಗ ಅವರಿಗೆ ಆರೋಗ್ಯದಲ್ಲಿ ಏರುಪೇರು ಆಯಿತು. ಕೂಡಲೇ ಅವರು ಹೋಟೆಲ್​ಗೆ ಬಂದು ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಅವರ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇನ್ನು ಕೆಕೆ ಬಾಲಿವುಡ್‌ಗೆ ಪ್ರವೇಶಿಸುವ ಮೊದಲು 3,500 ಜಿಂಗಲ್‌ಗಳನ್ನು ಹಾಡಿದ್ದಾರೆ. ಜಾಹೀರಾತುಗಳಲ್ಲಿ ಜಿಂಗಲ್ಸ್‌ ಹಾಡುವ ಮೂಲಕ ಕೆಕೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಎ.ಆರ್. ರೆಹಮಾನ್ ಅವರ ಜೊತೆ ಕೆಲಸ ಮಾಡಿದ್ದಾರೆ. ಅದ್ಬುತ ಹಾಡುಗಳ ಜೊತೆ ಅವರು ಹಲವಾರು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದು, ಫಿಲ್ಮ್ಫೇರ್ ಸೌತ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!