ಕಾರ್ಕಳ ‌: ಇನ್ಸ್ಟಾಗ್ರಾಮ್ ನಲ್ಲಿ ಹಿಂದೂ ಯುವತಿಗೆ ಮುಸ್ಲಿಂ ಯುವಕನ ಪರಿಚಯ – ಕಾಡಿಗೆ ಕರೆದೊಯ್ದು ಮದ್ಯ ಕುಡಿಸಿ ಸ್ನೇಹಿತರ ಜೊತೆ ಸೇರಿ‌ ಗ್ಯಾಂಗ್ ರೇಪ್ ? ಇಬ್ಬರ‌ ಬಂಧನ

20240824 090541
Spread the love

ನ್ಯೂಸ್ ಆ್ಯರೋ : ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮುಸ್ಲಿಂ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ‌.

ಕಾರ್ಕಳ ಜಿಲ್ಲೆಯ ಕುಕ್ಕುಂದೂರು ಅಯ್ಯಪ್ಪನಗರ ನಿವಾಸಿ ಹಿಂದೂ ಯುವತಿಗೆ ಮೂರು ತಿಂಗಳ ಹಿಂದೆ ಮುಸ್ಲಿಂ ಯುವಕ‌ ಅಲ್ತಾಫ್ ಪರಿಚಯವಾಗಿದ್ದು, ಅವನು ದಿನಾಂಕ 23/08/2024 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಸಂತ್ರಸ್ತೆಯನ್ನು ಅಯ್ಯಪ್ಪನಗರ ಜೇನು ಕೃಷಿ ಸ್ಥಳದ ಬಳಿಯಿಂದ ಆತನ ಬಿಳಿ ಬಣ್ಣದ ಕಾರಿನಲ್ಲಿ ಬಲಾತ್ಕಾರವಾಗಿ ಕರೆದುಕೊಂಡು ಹೋಗಿದ್ದ.

ಬಳಿಕ ಕೌಡೂರು ಗ್ರಾಮದ ರಂಗನಪಲ್ಕೆ ಕಾಡಿನ ಜಾಗಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿಗೆ ಇತರ ಇಬ್ಬರು ಕಾರಿನಲ್ಲಿ ಬಂದು ಬಿಯರ್ ಬಾಟಲಿಗಳನ್ನು ಆಲ್ತಾಫ್ ನಲ್ಲಿ ನೀಡಿದ್ದಾರೆ ಎನ್ನಲಾಗಿದೆ.

ಆರೋಪಿ ಅಲ್ತಾಫ್‌ ನು ಸುಮಾರು 01 ಗಂಟೆಗೆ ಬಿಯರ್ ಬಾಟಲಿಗೆ ಯಾವುದೋ ಮಾದಕ ವಸ್ತುವನ್ನು ಬೆರೆಸಿ ಸಂತ್ರಸ್ತೆಗೆ ಬಲಾತ್ಕಾರವಾಗಿ ಕುಡಿಸಿ ನಂತರ ಅವಳ ಹತೋಟಿ ತಪ್ಪಿದಾಗ, ಕಾರಿನಲ್ಲಿ ಅವಳ ಹಾಗೂ ಅವನ ಬಟ್ಟೆಗಳನ್ನು ಬಿಚ್ಚಿ ಅವಳ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

ನಂತರ ಉಳಿದ ಇಬ್ಬರು ಆರೋಪಿಗಳೂ‌ ಕೂಡ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಪ್ರಮುಖ‌ ಆರೋಪಿ ಅಲ್ತಾಫ್ ಹಾಗೂ ಬಿಯರ್ ತಂದು ಕೊಟ್ಟ ಸುಬೇರ್ ಸೇರಿ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಪೋಲಿಸರು ಬಂಧಿಸಿದ್ದಾರೆ‌.

ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 145/2024 ಕಲಂ: 138,64 ಜೊತೆಗೆ 3(5) BNS 2023 ರಂತೆ‌ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಆರೋಪಿಯ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ.

ಎಸ್ಪಿ ಅವರು ನೀಡಿರುವ ಮಾಹಿತಿಯಂತೆ ಪ್ರಮುಖ ಆರೋಪಿ ಅಲ್ತಾಫ್ ಮಾತ್ರ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದು, ಇತರ ಇಬ್ಬರು ಕೃತ್ಯಕ್ಕೆ ಸಹಕರಿಸಿದವರು ಮಾತ್ರ ಎಂದು ಖಚಿತಪಡಿಸಿದ್ದಾರೆ.‌‌‌ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದು, ಎಚ್ಚರಿಕೆಯನ್ನೂ‌ ನೀಡಿದ್ದಾರೆ.

Leave a Comment

Leave a Reply

Your email address will not be published. Required fields are marked *