ಕರ್ನಾಟಕದ ಈ ಜಿಲ್ಲೆಗಳಲ್ಲಿ ಡಿ.1ರಿಂದ ಮಳೆ; ಚಂಡಮಾರುತ ಪ್ರಭಾವ, ಯೆಲ್ಲೋ ಅಲರ್ಟ್ ಘೋಷಣೆ

Cyclone Fengal
Spread the love

ನ್ಯೂಸ್ ಆ್ಯರೋ: ಫೆಂಗಲ್ ಚಂಡಮಾರುತದ ಪ್ರಭಾವವು ಕರ್ನಾಟಕದ ಮೇಲೂ ಆಗಲಿದ್ದು, ಬೆಂಗಳೂರು ಸೇರಿ ಕರ್ನಾಟಕದ 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಮಳೆಯಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಶ್ರೀಲಂಕಾದ ಟ್ರಿಂಕೋಮಲಿಯ ಆಗ್ನೇಯಕ್ಕೆ 310 ಕಿಮೀ, ಪುದುಚೇರಿಯ ದಕ್ಷಿಣ ಆಗ್ನೇಯಕ್ಕೆ 710 ಕಿಮೀ ಮತ್ತು ಚೆನ್ನೈನಿಂದ 800 ಕಿಮೀ ಆಗ್ನೇಯಕ್ಕೆ ಇದೆ ಎಂದು ಭಾರತ ಹವಾಮಾನ ಇಲಾಖೆ (IMD) ಹೇಳಿದೆ.

ವಾಯುಭಾರ ಕುಸಿತದಿಂದ ಉತ್ತರ-ವಾಯುವ್ಯದ ಕಡೆಗೆ ಚಲಿಸುತ್ತದೆ, ಚಂಡಮಾರುತವಾಗಿ ರೂಪುಗೊಂಡು ಮುಂದಿನ ಎರಡು ದಿನಗಳಲ್ಲಿ ತಮಿಳುನಾಡಿನ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಯೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!