Dr. Bro LIVE : ಯೂಟ್ಯೂಬ್ ನಿಂದ ಬರೋ ತಿಂಗಳ ಗಳಿಕೆ ರಿವೀಲ್ ಮಾಡಿದ ಗಗನ್ – ಬಿಗ್ ಬಾಸ್ ಗೆ ಹೋಗೋ ಬಗ್ಗೆ ಏನಂದ್ರು?
ನ್ಯೂಸ್ ಆ್ಯರೋ : ನಮಸ್ಕಾರ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ. ಆತನ ಮಾತುಗಳ, ಆತನ ವಿಡಿಯೋಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಂಪು ಹರಿಸುತ್ತಿರೋ ವ್ಯಕ್ತಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಆತನೇ ಡಾ. ಬ್ರೋ ಅಲಿಯಾಸ್ ಗಗನ್..
ನಿನ್ನೆ ಲೈವ್ ಬಂದಿದ್ದ ಗಗನ್, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡ್ತಾ ಹೋದ್ರು. ಇದೇ ವೇಳೆ ಸಮಯದಲ್ಲಿ ತಮಗೆ ತಿಂಗಳಿಗೆ ಯುಟ್ಯೂಬ್ ನಿಂದ ಬರುವ ಹಣವೆಷ್ಟು, ಅದ್ರಲ್ಲಿ ಎಲ್ಲ ಖರ್ಚು ಕಳೆದು ಎಷ್ಟು ಉಳಿಯುತ್ತೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ವಾಸ್ತವವಾಗಿ ಯುಟ್ಯೂಬ್ ಗಳಿಕೆಯನ್ನು ರಿವೀಲ್ ಮಾಡ್ಬಾರದು ಎನ್ನುವ ರೂಲ್ಸ್ ಇದೆ. ಆದ್ರೆ ಗಗನ್ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ. ತಮ್ಮ ಮೊಬೈಲ್ ಸ್ಕ್ರೀನ್ ತೋರಿಸ್ತಾ ತಿಂಗಳಿಗೆ ಇಷ್ಟು ಹಣ ಬರುತ್ತೆ ಎಂದಿದ್ದಾರೆ.
ಕಳೆದ ಒಂದು ತಿಂಗಳ ನನ್ನ ಯುಟ್ಯೂಬ್ ಸಂಬಳ 2,100/- ಡಾಲರ್ ಎಂದು ಗಗನ್ ಹೇಳಿದ್ದಾರೆ. ಅಂದ್ರೆ ರೂಪಾಯಿಗೆ ಇದನ್ನು ಕನ್ವರ್ಟ್ ಮಾಡಿದ್ರೆ 1 ಲಕ್ಷದ 76 ಸಾವಿರ ರೂಪಾಯಿ ಗಳಿಸೋದಾಗಿ ಗಗನ್ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಗಳಿಕೆ ಏನಕ್ಕೂ ಸಾಲೋದಿಲ್ಲ ಅನ್ನೋದು ಅವರ ಅಭಿಪ್ರಾಯ.
ಗಳಿಕೆ ಜೊತೆ ಲೆಕ್ಕ ಬಿಚ್ಚಿಟ್ಟ ಡಾ. ಬ್ರೋ, ವಿದೇಶಕ್ಕೆ ಹೋಗಿ ಬರಲು 50 ಸಾವಿರ ರೂಪಾಯಿ ಬೇಕು. ಹೊಟೇಲ್ ಬಾಡಿಗೆ, ವಿಡಿಯೋ, ಎಡಿಟಿಂಗ್ ಜೊತೆ ನನ್ನ ಇಎಂಐ ಎಲ್ಲ ಖರ್ಚನ್ನು ಲೆಕ್ಕ ಹಾಕಿದ್ರೆ ನನ್ನ ಬಳಿ ತಿಂಗಳಿಗೆ 10 – 20 ಸಾವಿರ ಉಳಿಯುತ್ತೆ ಎಂದಿದ್ದಾರೆ.
ಮೊದಲ ಸಲ ಲೈವ್‌ಗೆ ಬಂದ ಡಾಕ್ಟರ್ ಬ್ರೋ, ಲೈವ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಹೇಳಿಕೊಂಡಿದ್ದಾರೆ. ಸಾಕಷ್ಟು ಪ್ರಶ್ನೆಗಳು ಅವರಿಗೆ ಎದುರಾಗಿವೆ. ಆ ಪೈಕಿ “ಈ ಸಲದ ಬಿಗ್‌ಬಾಸ್‌ಗೆ ನೀವೂ ಹೋಗ್ತಿರಾ?” ಎಂಬ ಪ್ರಶ್ನೆ ಕೇಳಿ ಬಂದಿದೆ. ಅದಕ್ಕೆ ಉತ್ತರಿಸಿದ ಡಾ. ಬ್ರೋ, “ಮೂರು ತಿಂಗಳು ಒಂದು ಮನೆಯಲ್ಲಿ ಇರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಅದೇ ಮೂರು ತಿಂಗಳಲ್ಲಿ ಐದು ದೇಶ ನೋಡಬಹುದು. ಅದೇ ಕಷ್ಟ ಆಗುತ್ತೆ” ಎಂದಿದ್ದಾರೆ. ಈ ಮೂಲಕ ತಮಗೆ ಬಿಗ್‌ಬಾಸ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯ ಸಿರಿಯಾ ದೇಶದ ಸುತ್ತಾಟದ ವಿಡಿಯೋವನ್ನು ಅಪ್‌ಲೋಡ್ ಮಾಡುವ ಬಗ್ಗೆ ಹೇಳಿದ ಬ್ರೋ, ಮುಂದೆ ವಿಯೇಟ್ನಾಂಗೆ ಹೋಗುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಾಕ್ಟರ್ ಬ್ರೋ ಹೆಸರು ಗಗನ್. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವರು. ಹುಟ್ಟಿದ್ದು ಮದ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ಇವರ ತಂದೆಯ ಹೆಸರು ಶ್ರೀನಿವಾಸ್. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಈ ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದರು. ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದರು. ಆದರೆ, ಡಾ ಬ್ರೋಗೆ ನಲ್ಲಿ ಆಸಕ್ತಿ ಇರಲಿಲ್ಲ. ಹಾಡು, ಡ್ಯಾನ್ಸ್ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ ಎಂದು ಅವರೇ ಹೇಳಿಕೊಂಡಿದ್ದಾರೆ.
Leave a Comment