ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್; ವೈರಲ್ ಆಗುತ್ತಿರುವ ಈ ಸುದ್ದಿಯ ಸತ್ಯಸತ್ಯಾತೆಯೇನು ?

laptop scheme
Spread the love

ನ್ಯೂಸ್ ಆ್ಯರೋ: ಭಾರತದ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯ ಸತ್ಯಸತ್ಯಾತೆ ಏನು ಎಂಬುವುದು ಈಗ ಹೊರ ಬಂದಿದೆ.

ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಮತ್ತು ಜನರು ಕೆಲವು ವಿವರಗಳೊಂದಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆಫರ್ ಅನ್ನು ಪಡೆಯಬಹುದು ಎಂದು ಸ್ಕ್ಯಾಮರ್‌ಗಳು ಶೇರ್ ಮಾಡಿದ್ದಾರೆ. ನೋಂದಾಯಿಸಲು ಇದರಲ್ಲೊಂದು ಲಿಂಕ್ ಇದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಇಂತಹ ಯಾವುದೇ ಅಧಿಕೃತ ಘೋಷಣೆ ಸರ್ಕಾರ ಮಾಡಿಲ್ಲ.

ವೈರಲ್ ಆಗುತ್ತಿರುವುದೇನು?:

‘ಅರ್ಜೆಂಟ್, ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಶಿಕ್ಷಣದ ಡಿಜಿಟಲೀಕರಣವನ್ನು ಉತ್ತೇಜಿಸುತ್ತಿದೆ. ಆದ್ದರಿಂದ ನೀವು ಭಾರತ ಸರ್ಕಾರದ ಉಚಿತ ಲ್ಯಾಪ್‌ಟಾಪ್ ಅಡಿಯಲ್ಲಿ ಉಚಿತ ಲ್ಯಾಪ್‌ಟಾಪ್ ಪಡೆಯಲು ಬಯಸಿದರೆ, ಈ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು ಮತ್ತು ಅರ್ಹತೆಯನ್ನು ಪರಿಶೀಲಿಸಬಹುದು https://education.gov.in@tinyurl.com/lndiaFreeLaptop-197’’ ಈ ಸಂದೇಶದಲ್ಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ವೆಬ್‌ಸೈಟ್‌ಗೆ ಹೋಗುತ್ತಿದೆ. ಇದು ಥೇಟ್ ಸರ್ಕಾರಿ ವೆಬ್​ಸೈಟ್ ಮಾದರಿಯಲ್ಲೇ ಇದೆ. ಆದರೆ, ಇದು ಯಾವುದೇ ಅಧಿಕೃತ ಸರ್ಕಾರಿ ಸೈಟ್ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದಲ್ಲದೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ.

ಸದ್ಯ ಹರಿದಾಡುತ್ತಿರುವ ಮೆಸೇಜ್ ವಿದ್ಯಾರ್ಥಿಗಳನ್ನು ದಾರಿತಪ್ಪಿಸಲು ಸಂವಾದಾತ್ಮಕ ಚಿತ್ರವನ್ನು ಹೊಂದಿದೆ. ಈ ಪೋಸ್ಟ್ ನಿಜ ಎಂದು ನಂಬುವಂತೆ ಮಾಡಲು ಉಚಿತ ಲ್ಯಾಪ್‌ಟಾಪ್ ಅನ್ನು ಸ್ವೀಕರಿಸಿದ್ದೇವೆ ಎಂದು ಹೇಳಿಕೊಳ್ಳುವ ಜನರು ಮಾಡಿದ ಕಾಮೆಂಟ್‌ಗಳನ್ನು ಸಹ ಇಲ್ಲಿ ತೋರಿಸಲಾಗಿದೆ. ಆದಾಗ್ಯೂ, ಈ ಯಾವುದೇ ಪ್ರೊಫೈಲ್ ಹೆಸರುಗಳನ್ನು ಕ್ಲಿಕ್ ಮಾಡಿದಾಗ, ಈ ಪ್ರೊಫೈಲ್‌ಗಳು ನಿಜವಾಗಿ ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ನಲ್ಲಿನ ನೈಜ ಪ್ರೊಫೈಲ್‌ಗಳು ಅಥವಾ ಪುಟಗಳಿಗೆ ಸಂಪರ್ಕಗೊಂಡಿಲ್ಲ.

ಪಿಐಬಿ ಫ್ಯಾಕ್ಟ್ ಚೆಕ್ ಅಂತಹ ಯಾವುದೇ ಪ್ರಕಟಣೆ ಇಲ್ಲ ಮತ್ತು ಇದೇ ರೀತಿಯ ತಪ್ಪು ಮಾಹಿತಿಯೊಂದಿಗೆ ಈ ಹಿಂದೆಯೂ ಮೆಸೇಜ್ ವೈರಲ್ ಆದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಕೆ ನೀಡಿದೆ. ಇದು ಬಳಕೆದಾರರ ಮೊಬೈಲ್ ಅಥವಾ ಕಂಪ್ಯೂಟರ್​ಗೆ ವೈರಸ್ ಅಟ್ಯಾಕ್ ಮಾಡುವ ಸಂಚಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!