ಸಂಜೆ ನೀವು ಇವುಗಳನ್ನು ಮಾಡಲೇಬೇಡಿ; ಲಕ್ಷ್ಮಿ ದೇವಿ ನಿಮ್ಮನ್ನು ಬಿಟ್ಟು ಹೋಗೋದು ಗ್ಯಾರೆಂಟಿ !

Goddess Lakshmi
Spread the love

ನ್ಯೂಸ್ ಆ್ಯರೋ: ಸಂಜೆ ಸಮಯವು ಲಕ್ಷ್ಮಿ ದೇವಿಯ ಸಂಚಾರದ ಸಮಯವಾಗಿದೆ. ಹಾಗಾಗಿ ಸಂಜೆ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಸಂಪತ್ತಿನ ಅಧಿದೇವತೆಯನ್ನು ಒಲಿಸಿಕೊಳ್ಳಲು ಸಂಜೆ ನಾವು ಯಾವ ಕೆಲಸಗಳನ್ನು ಮಾಡಬಾರದು.? ಎಂಬುದನ್ನು ತಿಳಿದುಕೊಳ್ಳಿ.

​ತುಳಸಿಯನ್ನು ಮುಟ್ಟದಿರಿ​:

ಲಕ್ಷ್ಮಿ ದೇವಿಯ ದರ್ಶನದ ಸಮಯದಲ್ಲಿ ಅಥವಾ ಸಂಜೆ ವೇಳೆ ನೀವು ಮರೆತು ಕೂಡ ತುಳಸಿ ಗಿಡವನ್ನು ಮುಟ್ಟಬಾರದು. ಈ ತಪ್ಪನ್ನು ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಈ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟುವುದಾಗಲಿ, ಅದಕ್ಕೆ ನೀರನ್ನು ಹಾಕುವುದಾಗಲಿ ಮಾಡಲು ಹೋಗಬಾರದು. ಈ ಸಮಯದಲ್ಲಿ ನೀವು ಆದಷ್ಟು ತುಳಸಿ ಗಿಡದಿಂದ ದೂರಿವಿರಿ.

ಮನೆಯನ್ನು ಸ್ವಚ್ಛಗೊಳಿಸಬೇಡಿ​:

ಸೂರ್ಯಾಸ್ತದ ನಂತರ ತಪ್ಪಾಗಿಯೂ ಪೊರಕೆಯನ್ನು ಹಿಡಿದು ಮನೆಯನ್ನು ಗುಡಿಸಲು ಹೋಗಬೇಡಿ ಅಥವಾ ಮನೆಯನ್ನು ಸ್ವಚ್ಛಗೊಳಿಸಬೇಡಿ. ಇದರಿಂದ ಮನೆಗೆ ಬಂದಿದ್ದ ಲಕ್ಷ್ಮಿ ದೇವಿಯು ಹಿಂದಿರುಗಿ ಹೋಗುತ್ತಾಳೆ ಎನ್ನುವ ನಂಬಿಕೆಯಿದೆ.

​ಮನೆಯಲ್ಲಿ ದೀಪವನ್ನು ಬೆಳಗಿಸಿ​:

ಸಂಜೆ ಮನೆಯಲ್ಲಿ ಎಲ್ಲೆಂದರಲ್ಲಿ ಬೆಳಕು ಇರಬೇಕು. ಲಕ್ಷ್ಮಿ ದೇವಿಯು ಕತ್ತಲೆ ತುಂಬಿರುವ ಸ್ಥಳಗಳಿಗೆ ಬರುವುದಿಲ್ಲ ಎನ್ನುವ ನಂಬಿಕೆಯಿದೆ. ಮನೆಯ ಎಲ್ಲಾ ಸ್ಥಳಗಳಲ್ಲಿ ಬೆಳಕನ್ನು ಹಾಕಲು ಸಾಧ್ಯವಾಗದೇ ಇದ್ದರೆ, ದೇವರ ಕೋಣೆಯಲ್ಲಿ, ಮನೆಯ ಮುಖ್ಯ ದ್ವಾರದಲ್ಲಿ ದೀಪವನ್ನು ಅಥವಾ ಬೆಳಕನ್ನು ಬೆಳಗಿಸಬೇಕು.

​ಸಂಜೆ ಪೂಜೆ ಮಾಡಿ​:

ಮುಸ್ಸಂಜೆ ಸಮಯದಲ್ಲಿ ನೀವು ದೇವರ ಪೂಜೆಯನ್ನು ಮಾಡಬೇಕು. ಹಾಗೂ ದೇವರ ಬಳಿ ದೀಪವನ್ನು, ಧೂಪ ದ್ರವ್ಯಗಳನ್ನು ಬೆಳಗಿಸಬೇಕು. ಒಂದು ವೇಳೆ ನೀವು ಈ ಕೆಲಸವನ್ನು ಮಾಡದೇ ಇದ್ದರೆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಎಂದಿಗೂ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಸಂಜೆ ಈ ಕೆಲಸ ಮಾಡಬೇಡಿ:

ಸಂಜೆ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ಯಾವುದೇ ರೀತಿಯ ಜಗಳದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳದಿರಿ. ಇದರಿಂದ ದೇವಿಯು ಕೋಪಗೊಂಡು ಮನೆ ಬಿಟ್ಟು ಹೋಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಿಸಿದ ವ್ಯವಹಾರವನ್ನು ಮಾಡಬೇಡಿ. ಇಲ್ಲದಿದ್ದರೆ, ಅದು ನಿಮ್ಮ ಮೇಲೆ ಹೆಚ್ಚು ಭಾರವಾಗಬಹುದು.

ಸಂಜೆಯ ಹೊತ್ತು ಮಲಗಬಾರದು:

ಹಿಂದೂ ಸಂಪ್ರದಾಯದ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆ ಬಹಳ ಪ್ರಾಶಸ್ತ್ಯವಾದ ಸಮಯ. ಈ ಸಮಯದಲ್ಲಿ ದೇವತೆಗಳು ಪರಸ್ಪರ ಭೇಟಿಯಾಗಿ ಮನೆಯ ಸದಸ್ಯರಿಗೆ ಆಶೀರ್ವದಿಸಲು ಬರುತ್ತಾರೆ. ಅಂತಹ ಸಮಯದಲ್ಲಿ ನಾವು ದೇವಾನುದೇವತೆಗಳ ಆಶೀರ್ವಾದ ಪಡೆಯಲು ಸಿದ್ಧರಾಗಿರಬೇಕು. ಹಾಗಾಗಿ ಮಲಗುವುದು ಬೇಡ ಎಂದು ಹೇಳಲಾಗುತ್ತದೆ. ಸಂಜೆಯ ಸಮಯದಲ್ಲಿ ದುರ್ಗಾ, ಲಕ್ಷ್ಮಿ, ಸರಸ್ವತಿ ದೇವತೆಗಳು ಮನೆಯೊಳಗೆ ಪ್ರವೇಶಿಸಿ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇಂತಹ ಸಮಯದಲ್ಲಿ ನಿದ್ರಿಸಬಾರದು.

Leave a Comment

Leave a Reply

Your email address will not be published. Required fields are marked *

error: Content is protected !!