
‘ಕಾಮಿಡಿ ಕಿಂಗ್’ ಸಾಧುಕೋಕಿಲ ದಿನವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? – ಸಾಧು ಮಹಾರಾಜ್ ಅದೆಷ್ಟು ದುಬಾರಿ ಗೊತ್ತಾ…!?
- ಮನರಂಜನೆ
- March 18, 2023
- No Comment
- 1013
ನ್ಯೂಸ್ ಆ್ಯರೋ : ಸ್ಯಾಂಡಲ್‌ವುಡ್‌ನ ‘ಕಾಮಿಡಿ ಕಿಂಗ್’ ಸಾಧುಕೋಕಿಲ ಅವರು ಕಲಾವಿದನಾಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕನಾಗಿಯೂ ದೊಡ್ಡ ಮಟ್ಟದ ಹೆಸರನ್ನು ಗಳಿಸಿದ್ದಾರೆ. ಕನ್ನಡ ಚಿತ್ರರಂಗದ ವಿಶೇಷ ಪ್ರತಿಭೆಗಳಲ್ಲಿ ಅವರೂ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ.
ಸಂಗೀತ ವಾದ್ಯಗಳನ್ನು ಅತ್ಯಂತ ವೇಗವಾಗಿ ನುಡಿಸುವಂತಹ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಹಾಸ್ಯ ಕಲಾವಿದನಾಗಿ ಮಾತ್ರವಲ್ಲದೆ ಸಂಗೀತ ಕ್ಷೇತ್ರದಲ್ಲೂ ಆಗಾಗ ಕಮಾಲ್ ಮಾಡಿದ್ದಾರೆ. ಇಷ್ಟೆಲ್ಲ ಟ್ಯಾಲೆಂಟ್ ಇರುವ ಸಾಧುಕೋಕಿಲ ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿರುವ ಸಾಧುಕೋಕಿಲ ಅವರು ಇಂದಿಗೂ ಬೇಡಿಕೆಯ ನಟ. ಸಾಕಷ್ಟು ಹಾಸ್ಯ ಕಲಾವಿದರು ಬಂದು ಮಿಂಚಿ ಮರೆಯಾಗಿದ್ದಾರೆ. ಆದರೆ ಸಾಧುಕೋಕಿಲ ಅವರ ಕಾಮಿಡಿ ಬೇಡಿಕೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ಇಷ್ಟೆಲ್ಲ ಬೇಡಿಕೆಯ ಕಲಾವಿದನಾಗಿರುವ ಸಾಧುಕೋಕಿಲ ಅವರು ದಿನವೊಂದಕ್ಕೆ ಪಡೆಯುವ ಸಂಭಾವನೆ ಬಗ್ಗೆ ಕೇಳಿದರೆ ಖಂಡಿತವಾಗಿ ಆಶ್ಚರ್ಯವಾಗುತ್ತದೆ. ಸಾಧುಕೋಕಿಲ ಅವರು ಪ್ರತಿ ದಿನದ ಚಿತ್ರೀಕರಣಕ್ಕೆ ₹2ರಿಂದ ₹ 3.5 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರಂತೆ.
ಸಿನಿಮಾದಲ್ಲಿ ಕೂಡ ಅವರ ಕಾಮಿಡಿಯನ್ನು ನೋಡಲೆಂದೇ ಸಾವಿರಾರು ಅಭಿಮಾನಿಗಳು ಚಿತ್ರಮಂದಿರಗಳಿಗೆ ಬರುತ್ತಾರೆ. ಅವರ ಪಂಚಿಂಗ್ ಡೈಲಾಗ್ ಕೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.