ಮನಿ ಲಾಂಡರಿಂಗ್ ಗುಮಾನಿ, ನಟ ವಿಜಯ್ ದೇವರಕೊಂಡ ವಿರುದ್ಧ ಇಡಿ ತನಿಖೆ – ಲೈಗರ್ ಸಿನಿಮಾಕ್ಕೆ ಹಣ ಹೂಡಿದ್ಯಾರು? ದೂರಿನಲ್ಲಿ ಮೈಕ್ ಟೈಸನ್ ಹೆಸರೂ ಉಲ್ಲೇಖ…!!

ಮನಿ ಲಾಂಡರಿಂಗ್ ಗುಮಾನಿ, ನಟ ವಿಜಯ್ ದೇವರಕೊಂಡ ವಿರುದ್ಧ ಇಡಿ ತನಿಖೆ – ಲೈಗರ್ ಸಿನಿಮಾಕ್ಕೆ ಹಣ ಹೂಡಿದ್ಯಾರು? ದೂರಿನಲ್ಲಿ ಮೈಕ್ ಟೈಸನ್ ಹೆಸರೂ ಉಲ್ಲೇಖ…!!

ನ್ಯೂಸ್ ಆ್ಯರೋ‌ : ಇತ್ತೀಚೆಗೆ ಬಿಡುಗಡೆಯಾದ ಲೈಗರ್ ಚಲನಚಿತ್ರ ನಿರ್ಮಾಣಕ್ಕೆ ಹಣ ಹೂಡಿಕೆ ಮೂಲದ ತನಿಖೆಗೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಹೈದರಾಬಾದ್​ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಹಾಜರಾಗಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಉಲ್ಲಂಘನೆಗಳ ಆರೋಪಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಅಧಿಕೃತ ಮೂಲಗಳ ಪ್ರಕಾರ, ಚಲನಚಿತ್ರ ನಿರ್ಮಾಣಕ್ಕೆ ಹಣದ ಮೂಲ, ಅವರ ಸಂಭಾವನೆ ಮತ್ತು ಅಮೆರಿಕನ್​ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರ ನಟರಿಗೆ ಸಂಭಾವನೆ ಪಾವತಿಸಿದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಪ್ರಶ್ನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ, ಇಡಿ ಅಧಿಕಾರಿಗಳು ನವೆಂಬರ್ 17 ರಂದು ಚಲನಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ – ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಲೈಗರ್ ಚಿತ್ರಕ್ಕೆ ಹೂಡಿಕೆಯ ಮೂಲದ ಬಗ್ಗೆ ಅವರಿಗೆ ಪ್ರಶ್ನಿಸಲಾಗಿತ್ತು. ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಮಾರು 125 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಾಯಕರಾಗಿ ನಟಿಸಿರುವ ಈ ಚಿತ್ರದ ಭಾಗಶಃ ಚಿತ್ರೀಕರಣ ಲಾಸ್ ವೇಗಾಸ್‌ನಲ್ಲಿ ನಡೆದಿದೆ. ಆದಾಗ್ಯೂ, ಇದು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡಿದೆ.

ಸಂಶಯಾಸ್ಪದ ಮಾರ್ಗಗಳ ಮೂಲಕ ಚಿತ್ರಕ್ಕೆ ಹೂಡಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ದೂರು ದಾಖಲಿಸಿದ ನಂತರ ಇಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ರಾಜಕಾರಣಿಗಳೂ ಕೂಡ ಲೈಗರ್ ನಲ್ಲಿ ಹಣ ಹೂಡಿದ್ದಾರೆ ಎಂದು ಬಕ್ಕಾ ಜಡ್ಸನ್ ದೂರಿದ್ದರು. ಹೂಡಿಕೆದಾರರು ತಮ್ಮ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸುವ ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಫೆಮಾ ನಿಯಮ ಉಲ್ಲಂಘಿಸಿ ವಿದೇಶಗಳಿಂದ ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ಹಲವಾರು ಕಂಪನಿಗಳು ಚಲನಚಿತ್ರ ನಿರ್ಮಾಪಕರ ಖಾತೆಗಳಿಗೆ ಹಣವನ್ನು ವರ್ಗಾಯಿಸಿವೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಮೈಕ್ ಟೈಸನ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿದೇಶಿ ನಟರಿಗೆ ಹಣವನ್ನು ರವಾನೆ ಮಾಡಿದವರ ವಿವರಗಳನ್ನು ಮತ್ತು ಪಾವತಿಗಳನ್ನು ಹೇಗೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡುವಂತೆ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕೇಳಲಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *