ಹಾಟ್ ನಟಿ ಜೊತೆ ಶೀಘ್ರ ಹಸೆಮಣೆ ಏರಲಿದ್ದಾರೆ ಟಾಲಿವುಡ್ ನಟ ವರುಣ್ ತೇಜ್ – ಹ್ಯಾಂಡ್ಸಮ್ ಹೀರೋ ಮನಸ್ಸು ಕದ್ದ ನಟಿ ಯಾರು?

ಹಾಟ್ ನಟಿ ಜೊತೆ ಶೀಘ್ರ ಹಸೆಮಣೆ ಏರಲಿದ್ದಾರೆ ಟಾಲಿವುಡ್ ನಟ ವರುಣ್ ತೇಜ್ – ಹ್ಯಾಂಡ್ಸಮ್ ಹೀರೋ ಮನಸ್ಸು ಕದ್ದ ನಟಿ ಯಾರು?

ನ್ಯೂಸ್ ಆ್ಯರೋ‌ : ವರುಣ್ ತೇಜ್ ಟಾಲಿವುಡ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟ. ಸದ್ಯ ಅವರು ತಮ್ಮ ಮದುವೆಯ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ವರುಣ್ ತೇಜ್ ವಿವಾಹವಾಗುವ ವಧು ಯಾರು? ಯಾವಾಗ ಮದುವೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಾಕಷ್ಟು ಸಮಯದಿಂದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಶೀಘ್ರ ಅವರು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತ ಹೇಳಿಕೆ ಹೊರ ಬೀಳುವ ಸಾಧ್ಯತೆ ಇದೆ.

ಹಲವು ವರ್ಷಗಳಿಂದ ವರುಣ್- ಲಾವಣ್ಯ ಪ್ರೀತಿಸುತ್ತಿದ್ದು, ಇಬ್ಬರ ಪ್ರೀತಿಗೆ ಎರಡು ಮನೆ ಕಡೆಯಿಂದ ಸಮ್ಮತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದೇ ಜೂನ್‌ ನಲ್ಲಿ ಲಾವಣ್ಯ ಜೊತೆ ವರುಣ್ ನಿಶ್ಚಿತಾರ್ಥ ನಡೆಯಲಿದ್ದು, ವರ್ಷಾಂತ್ಯದಲ್ಲಿ ಮದುವೆ ನಡೆಯಲಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬಂದಿದೆ.

2014ರಲ್ಲೂ ‘ಮುಕುಂದ’ ಚಿತ್ರದ ಮೂಲಕ ವರುಣ್ ತೇಜ್ ಚಿತ್ರರಂಗ ಪ್ರವೇಶಿಸಿದ್ದರು. ಸದ್ಯ ಅವರು ‘ಗಾಂಢೀವಧಾರಿ ಅರ್ಜುನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಅಂಡಾಳ ರಾಕ್ಷಸಿ’ ಚಿತ್ರದ ಮೂಲಕ ಲಾವಣ್ಯ ತ್ರಿಪಾಠಿ 2012ರಲ್ಲಿ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ‘ತನಲ್’ ಎನ್ನುವ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *