ನಿಶ್ಚಿತಾರ್ಥ ನಡೆಯೋ ಮೊದಲೇ ಆಡಿಯೋದಲ್ಲಿ ಮಧುಮಗನ ಚೆಲ್ಲಾಟ ಬಯಲು – ಮುರಿದುಬಿದ್ದ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಮದುವೆ ಮಾತುಕತೆ

ನ್ಯೂಸ್ ಆ್ಯರೋ : ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ನಿಶ್ಚಿತಾರ್ಥ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ವಿದ್ಯಾಭರಣ್ ಜೊತೆ ನನ್ನ ಎಂಗೇಜ್ಮೆಂಟ್ ಆಗಿಲ್ಲ, ಮದುವೆ ಮಾತುಕತೆ ನಡೆದಿತ್ತು ಅಷ್ಟೇ. ಆದ್ರೀಗ ವಿದ್ಯಾಭರಣ್ ಬಗ್ಗೆ ಗೊತ್ತಾಗಿರುವುದರಿಂದ ನಾವಿನ್ನು ಮುಂದುವರಿಯುವುದಿಲ್ಲ, ದಯವಿಟ್ಟು ಈ ವಿಚಾರವನ್ನು ಡ್ರಾಗ್ ಮಾಡಬೇಡಿ. ನನ್ನ ಒಳಿತಿಗಾಗಿ ಹಾರೈಸಿದ ಎಲ್ಲರಿಗೂ ಧನ್ಯವಾದ ಅಂತ ನಟಿ ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಎಂಬ ಸುದ್ದಿ ಹರಿದಾಡಿತ್ತು. ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮತ್ತು ಸಿಹಿ ತಿನ್ನಿಸುತ್ತಿರುವ ವಿಡಿಯೋ ವೈರಲ್ ಕೂಡ ಆಗಿದ್ದವು. ವೈಷ್ಣವಿ ಗೌಡ ಸದ್ದಿಲ್ಲದೆ ಎಂಗೇಜ್ ಆಗಿದ್ದಾರೆ ಎಂದೇ ಭಾವಿಸಲಾಗಿತ್ತು.

ಆದ್ರೆ ವೈಷ್ಣವಿ ಗೌಡ ‘ನಾನು ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಅದು ಹಣ್ಣು ಕಾಯಿ ಇಡುವ ಶಾಸ್ತ್ರ ಮಾತ್ರವಾಗಿದೆ. ಆ ಹುಡುಗನನ್ನು ನಾನು ಇನ್ನೂ ಅರ್ಥ ಮಾಡಿಕೊಳ್ಳಬೇಕು. ಆನಂತರ ನನ್ನ ಒಪ್ಪಿಗೆ ಕುರಿತು ಮಾತನಾಡುತ್ತೇನೆ’ ಎಂದು ಹೇಳಿದ್ದರು. ಆದ್ರೀಗ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ.

ನಟಿ ವೈಷ್ಣವಿ ಜೊತೆ ವಿದ್ಯಾಭರಣ್ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿದ್ಯಾಭರಣ್ ಇಬ್ಬರು ಹುಡುಗಿಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾಭರಣ್, ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಯಾವ ಹುಡುಗಿಯ ಜೊತೆಗೂ ತಪ್ಪಾಗಿ ನಡೆದುಕೊಂಡಿಲ್ಲ. ಆದ್ರೆ ಆಡಿಯೋದಲ್ಲಿ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ಮಾತನಾಡಿದ್ದಾರೆ. ಮೋಸ ಮಾಡಿದ್ದೇನೆ ಎಂದಿದ್ದಾರೆ.

ನನ್ನ, ವೈಷ್ಣವಿ ಫೋಟೋ ಹೊರಬರುತ್ತಿದ್ದಂತೆ ಆಡಿಯೋ ರಿಲೀಸ್ ಮಾಡಿದ್ದಾರೆ. ನಾನು ತಪ್ಪು ಮಾಡಿದ್ದರೆ ಮೊದಲೇ ಈ ಆಡಿಯೋ ರಿಲೀಸ್ ಮಾಡಬಹುದಿತ್ತು, ಆಗ ಯಾಕೆ ಮಾಡಿಲ್ಲ? ಆರೋಪ ಮಾಡುವ ಬದಲು ನನ್ನ ವಿರುದ್ಧ ದೂರು ಕೊಡಬಹುದಿತ್ತು. ಆದ್ರೆ ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡಲು ಹೀಗೆ ಮಾಡಿದ್ದಾರೆ. ಈ ಬಗ್ಗೆ ಇಂದು ಕಮಿಷನರ್’ಗೆ ದೂರು ನೀಡುತ್ತೇನೆ ಎಂದು ವಿದ್ಯಾಭರಣ್ ಹೇಳಿದ್ದಾರೆ.

Video Credit : Kannada Pichhar Youtube channel

ಇನ್ನು ವೈಷ್ಣವಿ ಜೊತೆಗಿನ ಎಂಗೇಜ್ಮೆಂಟ್ ಕುರಿತು ಪ್ರತಿಕ್ರಿಯಿಸಿದ ವಿದ್ಯಾಭರಣ್, ವೈಷ್ಣವಿ ಗೌಡ ತುಂಬ ಒಳ್ಳೆಯವರು, ಅವರ ಹೆಸರು ಹಾಳಾಗಬಾರದು. ನಾನು, ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಆದ್ರೆ ನಮ್ಮ ಎರಡೂ ಕುಟುಂಬದ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಹೀಗಾಗಿ ನವೆಂಬರ್ 11ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾತುಕತೆ ನಡೆದಿತ್ತು. ಪಾಸಿಟಿವ್ ಆಗಿರಲಿ ಎಂದು ನಾವಿಬ್ಬರೂ ಹಾರ ಬದಲಾಯಿಸಿಕೊಂಡೆವು. ಆದ್ರೆ ನಾವಿಬ್ಬರೂ ಇನ್ನೂ ಮದುವೆಗೆ ಓಕೆ ಅಂದಿಲ್ಲ, ಇದು ಅರೇಂಜ್ ಮ್ಯಾರೇಜ್ ಆಗಿದ್ದು, ಮದುವೆ ಬಗ್ಗೆ ಇನ್ನಷ್ಟೇ ನಿರ್ಧಾರಕ್ಕೆ ಬರಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ವಿದ್ಯಾಭರಣ್’ಗೆ ಸಂಬಂಧಿಸಿದ ಆಡಿಯೋ ವೈರಲ್ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ನಟಿ ವೈಷ್ಣವಿ ಗೌಡ, ನಾನು ವಿದ್ಯಾಭರಣ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿಲ್ಲ. ಹೆಣ್ಣು ನೋಡುವ ಶಾಸ್ತ್ರ ನಡೆದಿತ್ತು ಅಷ್ಟೇ. ಆದ್ರೆ ಈಗ ನಡೆದಿರೋ ಬೆಳವಣಿಗೆಗಳಿಂದಾಗಿ ನಾವಿನ್ನೂ ಈ ಸಂಬಂಧದಲ್ಲಿ ಮುಂದುವರಿಯೋದಿಲ್ಲ. ಈಗಲೇ ಗೊತ್ತಾಗಿದ್ದು ಒಳ್ಳೆಯದಾಯಿತು. ನಾನು, ನನ್ನ ಕುಟುಂಬ ಈ ವಿಚಾರವನ್ನು ಇಲ್ಲಿಗೆ ಬಿಡುತ್ತಿದ್ದೇವೆ. ನೀವೂ ಮುಂದುವರಿಸಬೇಡಿ ಎಂದು ನಿಶ್ಚಿತಾರ್ಥ ಕಥೆಗೆ ತೆರೆ ಎಳೆದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *