ಪೂಜಾ ಹೆಗ್ಡೆಗೆ ಎರಡು ಕೋಟಿ ಬೆಲೆಯ ಕಾರ್ ಗಿಫ್ಟ್ – ನಿರ್ದೇಶಕರಿಗೆ ನಟಿ ಮೇಲಿನ ವಿಶೇಷ ಕಾಳಜಿಗೆ ಕಾರಣವೇನು?

ಪೂಜಾ ಹೆಗ್ಡೆಗೆ ಎರಡು ಕೋಟಿ ಬೆಲೆಯ ಕಾರ್ ಗಿಫ್ಟ್ – ನಿರ್ದೇಶಕರಿಗೆ ನಟಿ ಮೇಲಿನ ವಿಶೇಷ ಕಾಳಜಿಗೆ ಕಾರಣವೇನು?

ನ್ಯೂಸ್ ಆ್ಯರೋ : ನಟಿ ಪೂಜಾ ಹೆಗ್ಡೆ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲೊಬ್ಬರು. ತೆಲುಗಿನಲ್ಲಿ ಒಂದರ ಮೇಲೊಂದು ಹಿಟ್ ನೀಡಿರುವ ಈ ಚೆಲುವೆ, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಬಹಳ ಬ್ಯುಸಿ. ಸಿನಿಮಾ ಒಂದಕ್ಕಾಗಿ ಹಲವು ಕೋಟಿ ಸಂಭಾವನೆ ಪಡೆಯುವ ಈ ನಟಿಗೆ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಉಡುಗೊರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಆ ನಿರ್ದೇಶಕ ಯಾರು ಎಂಬ ಕೂತುಹಲ ಕಾಡುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಪೂಜಾ ಹೆಗ್ಡೆ ಪ್ರತಿ ಸಿನಿಮಾಕ್ಕೂ ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಇದೀಗ ಸ್ಟಾರ್ ಡೈರೆಕ್ಟರ್ ಪೂಜಾ ಹೆಗ್ಡೆಗೆ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದು, ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಪೂಜಾಗೆ ಎರಡು ಕೋಟಿ ಬೆಲೆಯ ದುಬಾರಿ ಕಾರು ನೀಡಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

ಹೌದು.. ತೆಲುಗಿನ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ಇತ್ತೀಚೆಗಷ್ಟೇ ದುಬಾರಿ ಕಾರೊಂದನ್ನು ಖರೀದಿಸಿ, ಆ ಕಾರನ್ನು ಪೂಜಾ ಹೆಗ್ಡೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ತ್ರಿವಿಕ್ರಮ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೆಕುಂಠಪುರಂಲೋ ಚಿತ್ರಗಳಿಗೆ ಇವರೇ ನಾಯಕಿ. ಎರಡೂ ಹಿಟ್ ಚಿತ್ರಗಳು. ಈಗ ಮೂರನೇ ಬಾರಿ ಪೂಜಾ ಇದೇ ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಲ್ಲದೇ ಈ ಸಿನಿಮಾದ ಬಳಿಕ ತ್ರಿವಿಕ್ರಮ್ ನಿರ್ದೇಶಿಸಲಿರುವ ಅಲ್ಲು ಅರ್ಜುನ್​ರ ಹೊಸ ಸಿನಿಮಾಕ್ಕೂ ಪೂಜಾ ಹೆಗ್ಡೆಯೇ ನಾಯಕಿಯಾಗಿದ್ದು, ಈ ಬೆಳವಣಿಗೆಯನ್ನು ನೋಡಿದ್ದರೆ ತ್ರಿವಿಕ್ರಮ್ ಶ್ರೀನಿವಾಸ್​ಗೆ ಪೂಜಾ ಹೆಗ್ಡೆ ಮೇಲೆ ವಿಶೇಷ ಕಾಳಜಿ ಇರುವುದು ತಿಳಿಯುತ್ತದೆ. ಈ ಕಾರಣದಿಂದಲೇ ತ್ರಿವಿಕ್ರಮ್ ಪೂಜಾ ಆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರೆ ಎಂಬುದೇ ಸದ್ಯ ಕಾಡುತ್ತಿರುವ ಪ್ರಶ್ನೆ.

ಆದರೆ ತ್ರಿವಿಕ್ರಮ್ ಶ್ರೀನಿವಾಸ್, ಪೂಜಾಗೆ ಕಾರು ಕೊಟ್ಟಿರುವ ಚಿತ್ರತಂಡ ಅಲ್ಲಗಳೆದಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ಪ್ರಸ್ತುತ ಮಹೇಶ್ ಬಾಬು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ನಾಯಕಿಯಾಗಿರುವ ಪೂಜಾ, ಹೋಟೆಲ್​ನಿಂದ ಸೆಟ್​ಗೆ ಬರಲು ಪ್ರೊಡಕ್ಷನ್ ಟೀಂನಿಂದ ಇನ್ನೊವಾ ಕಾರೊಂದನ್ನು ನೀಡಲಾಗಿತ್ತಂತೆ. ಹಾಗೆಯೇ ಹಲವು ನಟ-ನಟಿಯರು ಕಾರು ಬಳಸುತ್ತಿದ್ದರಿಂದ ಪ್ರೊಡಕ್ಷನ್ ಖರ್ಚು ಹೆಚ್ಚಾಗಿತ್ತಂತೆ. ಹಾಗಾಗಿ ಸಿನಿಮಾ ತಂಡವೇ ಹೊಸದೊಂದು ಕಾರು ಖರೀದಿ ಮಾಡಿದೆ. ಆ ಹೊಸ ಕಾರಲ್ಲಿ ಮೊದಲಿಗೆ ಪ್ರಯಾಣಿಸಿದ್ದು ಪೂಜಾ ಹೆಗ್ಡೆ, ಆ ಕಾರು ಪೂಜಾ ಹೆಗ್ಡೆಗೆ ಮಾತ್ರ ಎಂದೇನೂ ಇಲ್ಲ ಯಾರು ಬೇಕಾದರೂ ಬಳಸಬಹುದು ಎಂಬ ಸ್ಪಷ್ಟನೆ ಕೇಳಿ ಬಂದಿದೆ.

ಇನ್ನೂ ಇಷ್ಟು ದಿನ ಡೇಟಿಂಗ್ ವಿಚಾರವಾಗಿ ಆಗಾಗ್ಗೆ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಾವಳಿ ಚೆಲುವೆ ಪೂಜಾ ಹೆಗ್ಡೆ ಹೆಸರು ಮತ್ತೆ ಸಿನಿಮಾ ರಂಗದಲ್ಲಿ ಕಾರಿನ ವಿಷಯಕ್ಕಾಗಿ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಪೂಜಾಗೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಪೂಜಾ ಮತ್ತು ಸಲ್ಮಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ, ಪೂಜಾ ಸಹೋದರನ ಮದುವೆ ಸಲ್ಮಾನ್ ಕೂಡ ಬಂದಿದ್ದರು. ಸಲ್ಮಾನ್ ಖಾನ್ ಜೊತೆಯಷ್ಟೇ ಅಲ್ಲ, ಪೂಜಾ ನಟಿಸಿರುವ ಸಿನಿಮಾಗಳ ಬಹುತೇಕ ನಟರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಆದರೂ, ಈವರೆಗೂ ಅವರು ಡೇಟಿಂಗ್ ವಿಚಾರವಾಗಿ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆ ಕುರಿತು ಮಾತನಾಡುವಂತಹ ಧೈರ್ಯವನ್ನೂ ಅವರು ಮಾಡಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *