ಸದ್ದಿಲ್ಲದೆ ಹಸೆಮಣೆಯೇರಿದ ನರೇಶ್‌– ಪವಿತ್ರಾ ಲೋಕೇಶ್‌ ಜೋಡಿ? – ವೈರಲ್ ಆಯ್ತು ನಟ ನರೇಶ್ ಬಿಡುಗಡೆ ಮಾಡಿದ ಮದುವೆ ವಿಡಿಯೊ..!!

ಸದ್ದಿಲ್ಲದೆ ಹಸೆಮಣೆಯೇರಿದ ನರೇಶ್‌– ಪವಿತ್ರಾ ಲೋಕೇಶ್‌ ಜೋಡಿ? – ವೈರಲ್ ಆಯ್ತು ನಟ ನರೇಶ್ ಬಿಡುಗಡೆ ಮಾಡಿದ ಮದುವೆ ವಿಡಿಯೊ..!!

ನ್ಯೂಸ್‌ ಆ್ಯರೋ : ಹೊಸವರ್ಷದ ಆರಂಭದಲ್ಲಿ ‘ಶೀಘ್ರದಲ್ಲೇ ಮದುವೆಯಾಗುತ್ತಿದ್ದೇವೆ’ ಎಂದು ಹೇಳಿಕೆ ನೀಡಿದ್ದ ತೆಲುಗು ಚಿತ್ರನಟ ನರೇಶ್‌ ಅವರು ಪವಿತ್ರಾ ಲೋಕೇಶ್‌ ಜತೆ ಹಸೆಮಣೆಯೇರುವ ಹೊಸ ವಿಡಿಯೊವೊಂದು ಬಿಡುಗಡೆ ಮಾಡಿದ್ದು, ಈ ವಿಡಿಯೊ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

‘ಒಂದು ಪವಿತ್ರ ಬಂಧ, ಎರಡು ಮನಸ್ಸುಗಳು, ಮೂರು ಗಂಟುಗಳು, ಏಳು ಹೆಜ್ಜೆಗಳು… ನಮಗೆ ನಿಮ್ಮೆಲರ ಆಶೀರ್ವಾದ ಬೇಕು. ನಮ್ಮ ಜೀವನದಲ್ಲಿ ಇದೊಂದು ಹೊಸ ಹೆಜ್ಜೆ, ಇಂತಿ ನಿಮ್ಮ ಪವಿತ್ರಾ ನರೇಶ್‌’ ಎಂದು ನರೇಶ್‌ ತಮ್ಮ ಟ್ವಿಟ್ಟರ್‌ನಲ್ಲಿ ಬರೆದು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಸಂಬಂಧದ ಬಗ್ಗೆ ಕಳೆದ ವರ್ಷ ಭಾರೀ ಚರ್ಚೆಯಾಗಿತ್ತು. ನರೇಶ್‌ ಪತ್ನಿ ಬಹಿರಂಗವಾಗಿಯೇ ಸಿಡಿದೆದ್ದಿದ್ದರು. ಸಾಕಷ್ಟು ಅಡೆತಡೆಗಳ ಮಧ್ಯೆ ಈ ಜೋಡಿ ಈಗ ಸತಿ-ಪತಿಗಳಾಗಿದ್ದಾರೆ. ಸ್ವತಃ ನರೇಶ್‌ ಮದುವೆ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್‌ ನಟರೊಬ್ಬರನ್ನು ಕನ್ನಡದ ನಟಿ ಪವಿತ್ರಾ ಲೋಕೇಶ್‌ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಯಾಗುತ್ತಿರುವಾಗಲೇ ಮೈಸೂರಿನ ಹೋಟೆಲ್‌ ಒಂದರಲ್ಲಿ ಈ ಜೋಡಿ ಒಟ್ಟಿಗೆ ಇರುವುದನ್ನು ನರೇಶ್‌ ಪತ್ನಿ ಪತ್ತೆ ಹಚ್ಚಿ, ಮಾಧ್ಯಮದ ಮುಂದೆ ರಂಪಾಟ ಮಾಡಿದ್ದರು.

ಇದು ನರೇಶ್‌ ಮತ್ತು ಪವಿತ್ರ ಲೋಕೇಶ್‌ ಅವರಿಗೂ ತೀವ್ರ ಮುಜುಗರ ಉಂಟು ಮಾಡಿತ್ತು. ಮತ್ತೊಂದೆಡೆ ನರೇಶ್‌ ಈಗಾಗಲೇ ಎರಡು ಮದುವೆಯಾಗಿದ್ದು, ಪವಿತ್ರಾ ಮೂರನೇ ಪತ್ನಿ ಎಂಬ ವಿಚಾರ ಕೇಳಿ ಜನರು ಆಶ್ಚರ್ಯಪಟ್ಟಿದ್ದರು.

ನಾವಿಬ್ಬರೂ ಮದುವೆ ಆಗುತ್ತಿರುವುದಾಗಿ ಹೊಸ ವರ್ಷದ ದಿನ ನರೇಶ್‌ ತಮ್ಮ ಟ್ವಿಟ್ಟರ್‌ಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಇಬ್ಬರೂ ಕೇಕ್‌ ಕಟ್ಟಿಂಗ್‌ ಮಾಡುವ ಮೂಲಕ ಹೊಸ ವರ್ಷ ಆರಂಭಿಸಿ, ಲಿಪ್‌ ಕಿಸ್‌ ಮಾಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ನರೇಶ್‌ ಮದುವೆ ವಿಡಿಯೊ ಹಂಚಿಕೊಂಡು ಮತ್ತೆ ಶಾಕ್‌ ಕೊಟ್ಟಿದ್ದಾರೆ.

ಈ ವಿಡಿಯೊ ನೋಡುತ್ತಿದ್ದರೆ ಇದೊಂದು ಸಿನಿಮಾ ಶೂಟಿಂಗ್‌ನಂತೆ ಕಾಣುತ್ತಿದೆ. ತಮ್ಮ ಜೀವನದ ಕುರಿತಾದ ಸಿನಿಮಾವೊಂದನ್ನು ಮಾಡುತ್ತಿರುವುದಾಗಿ ಕೆಲವು ದಿನಗಳ ಹಿಂದೆ ನರೇಶ್‌ ಹೇಳಿಕೊಂಡಿದ್ದರು. ಬಹುಶಃ ಇದು ಆ ಸಿನಿಮಾದ ಶೂಟಿಂಗ್‌ ವಿಡಿಯೋ ಇರಬೇಕು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇನ್ನೂ ಕೆಲವರು ಕಮೆಂಟ್‌ ಮಾಡಿ, ಶೂಟಿಂಗ್‌ ನೆಪದಲ್ಲಿ ಇಬ್ಬರೂ ನಿಜವಾಗಲೂ ಮದುವೆ ಆಗಿದ್ದಾರೆ ಎನ್ನುತ್ತಿದ್ದಾರೆ.

ಇದು ನಿಜವಾದ ಮದುವೆಯೋ , ಶೂಟಿಂಗ್‌ ಮದುವೆಯೋ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ. ಈ ವಿಡಿಯೋಗೆ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *