ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್ ಮಾಡಿದ ನಟಿ ಸ್ವರಾ ಭಾಸ್ಕರ್‌ – ಉರಿಯುವ ಬೆಂಕಿಗೆ ತುಪ್ಪ ಸುರಿದ್ರಾ ವಿವಾದಿತ ನಟಿ?

ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್ ಮಾಡಿದ ನಟಿ ಸ್ವರಾ ಭಾಸ್ಕರ್‌ – ಉರಿಯುವ ಬೆಂಕಿಗೆ ತುಪ್ಪ ಸುರಿದ್ರಾ ವಿವಾದಿತ ನಟಿ?

ನ್ಯೂಸ್‌ ಆ್ಯರೋ : ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಕೆಲ ದಿನಗಳ ಹಿಂದೆ ತಾನು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್‌ ಜತೆ ಮದುವೆಯಾಗಿದ್ದನ್ನು ಘೋಷಣೆ ಮಾಡಿದ್ದರು. ಈ ಮೂಲಕ ಎಲ್ಲರಿಗೂ ಏಕಾಏಕಿ ಶಾಕ್​ ಕೊಟ್ಟಿದ್ದರು.

ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಸ್ವರಾ ವಿರುದ್ಧ ಅಪಸ್ವರಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿತ್ತು. ‌ಅವುಗಳಿಗೆ ದಿಟ್ಟ ಉತ್ತರವನ್ನೂ ಸ್ವರಾ ನೀಡುತ್ತಿದ್ದಾರೆ. ಇದೀಗ ಸ್ವರಾ ಭಾಸ್ಕರ್ ಅವರು ತಮ್ಮ ಫಸ್ಟ್‌ ನೈಟ್‌ ಬೆಡ್‌ರೂಂನ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

2023ರ ಜನವರಿ 6ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ ಸ್ವರಾ ತಿಳಿಸಿದ್ದರು. ತಮ್ಮ ಪೋಷಕರೊಂದಿಗೆ ಹಾಜರಾಗಿ, ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು. ‘ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರದಲ್ಲಿ ಹುಡುಕುತ್ತೇವೆ. ಆದರೆ, ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ’ ಎಂದು ಸ್ವರಾ ಹೇಳಿದ್ದರು.

‌ಇದೀಗ ಸ್ವರಾ ಭಾಸ್ಕರ್ ತಮ್ಮ ಮಲಗುವ ಕೋಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮಧುಚಂದ್ರದ ಹಾಸಿಗೆಯನ್ನು ಅಲಂಕರಿಸುವುದನ್ನು ನೋಡಬಹುದು. ಅವರ ಹಾಸಿಗೆಯನ್ನು ಗುಲಾಬಿಗಳು ಮತ್ತು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಲಾಗಿದೆ. ಇದಕ್ಕೆ ಸ್ವರಾ ತಮ್ಮ ತಾಯಿಗೆ ಧನ್ಯವಾದ ತಿಳಿಸಿದ್ದಾರೆ. ಈ ಮೂಲಕ ತಮ್ಮ ಮೊದಲ ರಾತ್ರಿಯ ಬೆಡ್​ರೂಮ್​ ಚಿತ್ರವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.

ಸಿನಿಮಾ ಸ್ಟೈಲ್​ನಲ್ಲಿಯೇ ಬೆಡ್​ರೂಂ ಶೃಂಗಾರ ಮಾಡಲಾಗಿದೆ. ಇದನ್ನು ಮಾಡಲು ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಇದು ತುಂಬಾ ಸುಂದರವಾಗಿದೆ. ಸಿನಿಮಾ ಮಾದರಿಯಲ್ಲಿ ಮೊದಲ ರಾತ್ರಿಯ ಸೀನ್​ ಇರುವ ರೀತಿಯಲ್ಲಿ ಇದನ್ನು ಶೃಂಗಾರ ಮಾಡಲಾಗಿದೆ ಎಂದು ಸ್ವರಾ ಹೇಳಿಕೊಂಡಿದ್ದಾರೆ. ಆದರೆ, ಬೆಡ್​ರೂಂ ಚಿತ್ರವನ್ನು ಶೇರ್​ ಮಾಡಿಕೊಂಡಿರುವುದಕ್ಕೆ ಪರ ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಹಲವರು ಟ್ರೋಲ್​ ಕೂಡ ಮಾಡುತ್ತಿದ್ದಾರೆ.

ಸ್ವರಾ ಮದುವೆಯ ಸಂಬಂಧ ಟ್ರೋಲ್​ ಆಗುತ್ತಿರುವುದು ಇದೇ ಮೊದಲಲ್ಲ. ಅವರು ತಮ್ಮ ಪತಿಗೆ ಈ ಮೊದಲು ಅಣ್ಣ (ಭಾಯ್) ಎಂದು ಕರೆದಿದ್ದರು. ಅದರ ಹಳೆಯ ವಿಡಿಯೋ ವೈರಲ್​ ಮಾಡಿ ಟ್ರೋಲ್​ ಮಾಡಲಾಗಿತ್ತು. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. ‘ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ’ ಎಂದು ಹೇಳಿದ್ದರು. ಇದಾಗಿ ಎರಡೇ ವಾರಗಳಲ್ಲಿ ಮದುವೆಯ ಸುದ್ದಿಯನ್ನೂ ಕೊಟ್ಟು ಶಾಕ್​ ಕೊಟ್ಟಿದ್ದರು.

ಮದುವೆಯಾದ ಮೇಲೂ ಇವರ ಮದುವೆಯ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಖುದ್ದು ಇಸ್ಲಾಮಿಕ್ ಧರ್ಮಗುರು ಈ ಮದುವೆಯನ್ನು ವಿರೋಧಿಸಿದ್ದರು. ಚಿಕಾಗೋ ಮೂಲದ ನಿಯತಕಾಲಿಕದ ಸಂಪಾದಕ ಮತ್ತು ವಿದ್ವಾಂಸ ಡಾ, ಯಾಸಿರ್ ನದೀಮ್ ಅಲ್ ವಾಜಿದಿ ಅವರು ಈ ಮದುವೆ ಅಮಾನ್ಯವಾಗಿದೆ. ಇಬ್ಬರೂ ಬೇರೆ ಧರ್ಮೀಯರಾಗಿದ್ದು, ವಿಭಿನ್ನ ನಂಬಿಕೆಗಳಿಂದ ಬಂದ ಕಾರಣ ಮದುವೆ ಅಸಿಂಧು ಎಂದು ಘೋಷಿಸಿದ್ದಾರೆ. ಅಂತರ್ಧರ್ಮೀಯ ವಿವಾಹ ಸರಿಯಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ಮದುವೆಯ ಸಲುವಾಗಿಯಷ್ಟೇ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದರೆ ಮಹಿಳೆಯ ಜೊತೆಗಿನ ಮದುವೆ ಸಿಂಧುವಾಗುವುದಿಲ್ಲ ಎಂದಿದ್ದಾರೆ. ಇದಕ್ಕೂ ಪರ ವಿರೋಧಗಳ ಚರ್ಚೆ ಶುರುವಾಗಿತ್ತು.

ಸ್ವರಾ ಭಾಸ್ಕರ್​ ದಂಪತಿ ಪರವಾಗಿ ಪ್ರಸಿದ್ಧ ರೇಡಿಯೊ ನಿರೂಪಕ ಮತ್ತು ಕಾರ್ಯಕರ್ತ ಆರ್‌ಜೆ ಸಯೆಮಾ ನಿಂತಿದ್ದರು. ಧಾರ್ಮಿಕ ವಿದ್ವಾಂಸರು ಜನರ ವೈಯಕ್ತಿಕ ವಿಷಯಗಳ ಬಗ್ಗೆ ತೀರ್ಪು ನೀಡಬಾರದು. ಭಾರತದಂತಹ ದೇಶದಲ್ಲಿ, ಅಂತರ್‌ಧರ್ಮೀಯ ವಿವಾಹಗಳು ಇನ್ನೂ ಅನುಮಾನ ಮತ್ತು ಹಗೆತನವನ್ನು ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಇವರ ಮದುವೆಯನ್ನು ದೂಷಿಸುವುದು ಸರಿಯಲ್ಲ ಎಂದಿದ್ದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *