
ಬಿಗ್‌ಬಾಸ್ ಪ್ರವೇಶಿಸುವ ಸುದ್ದಿಯ ಬೆನ್ನಲ್ಲೇ ಬ್ರೇಕಪ್ ಘೋಷಿಸಿದ ರೀಲ್ಸ್ ಜೋಡಿ – ವರುಣ್ – ವರ್ಷ ಬ್ರೇಕಪ್’ಗೆ ಇದೇ ನೋಡಿ ಕಾರಣ !
- ಮನರಂಜನೆ
- September 13, 2023
- No Comment
- 96
ನ್ಯೂಸ್ ಆ್ಯರೋ : ಬಿಗ್ ಬಾಸ್ ಕನ್ನಡ ಸೀಸನ್ 10ರ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಸ್ಪರ್ಧಿಗಳ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಯೂಟ್ಯೂಬರ್ಸ್‌ಗಳು ಸ್ಪರ್ಧಿಗಳಾಗಿ ಬರಲಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಯೂಟ್ಯೂಬ್‌ನ ರಿಯಲ್ ಜೋಡಿಗಳಾದ ವರ್ಷಾ ಕಾವೇರಿ, ವರುಣ್ ಅವರು ಈ ಬಾರಿ ಬಿಗ್ ಬಾಸ್‌ಗೆ ಬರುತ್ತಾರೆ ಎನ್ನಲಾಗಿದ್ದ ಸಂದರ್ಭದಲ್ಲೇ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ. ಈ ಬಗ್ಗೆ ವರ್ಷಾ ಕಾವೇರಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೆಲ ವರ್ಷಗಳಿಂದ ಜೋಡಿಯಾಗಿ ರೀಲ್ಸ್‌ನಲ್ಲಿ ವರುಣ್ ಹಾಗೂ ವರ್ಷ ಕಾವೇರಿ ನಟಿಸುತ್ತಿದ್ದರು. ಇವರಿಬ್ಬರ ಜೋಡಿಗೆ ಅನೇಕ ಮಂದಿ ಫಾಲೋವರ್ಸ್ ಇದ್ದಾರೆ. ಆದರೆ ಈಚೆಗೆ ಈ ಜೋಡಿಗಳ ವಿಡಿಯೋಗಳು ಅಪ್‌ಡೇಟ್ ಆಗುತ್ತಿಲ್ಲ. ಈ ಬಗ್ಗೆ ವರ್ಷಾ ಅವರು ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.
ವರ್ಷಾ ಕಾವೇರಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಏನಿದೆ?
ಎಲ್ಲರಿಗೂ ನಮಸ್ಕಾರ, ತುಂಬ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು.. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ.

ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ, ವರುಣ್ ಮಧ್ಯೆ ಮನಸ್ತಾಪಗಳು ಬಂದಿದ್ದು ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ.
ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ.
ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನುಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ.
ಇದು ಯಾವುದೇ ಪ್ರಾಂಕ್ ಅಲ್ಲ, ಕಳೆದ ಎರಡು ತಿಂಗಳಿನಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ. ನಿಮಗೆ ಇದು ಅರ್ಥವಾಗುತ್ತದೆ ಎಂದುಕೊಂಡಿರುವೆ ಎಂದು ಪೋಸ್ಟ್‌ನ ಕೆಳಗಡೆ ಬರೆದುಕೊಂಡಿದ್ದಾರೆ.
ಈ ಹಿಂದೆ ಬಿಗ್‌ಬಾಸ್ ಸೀಸನ್ 9ಕ್ಕೆ ರಿಯಲ್ ಜೋಡಿ ಜಶ್ವಂತ್ ಹಾಗೂ ನಂದಿನಿ ಅವರು ಭಾಗವಹಿಸಿದ್ದರು. ಅಲ್ಲಿ ಈ ಜೋಡಿ ಮಧ್ಯೆ ಮನಸ್ತಾಪವಾಗಿ ಬಿಗ್‌ಬಾಸ್ ಹೊರಬಂದ ಬಳಿಕ ದೂರವಾದರು. ಈ ಬಾರಿಯೂ ರಿಯಲ್ ಲೈಫ್ ಲವರ್ಸ್‌ಗಳಾದ ವರ್ಷಾ ಹಾಗೂ ವರುಣ್ ಎಂಟ್ರಿಯಾಗುತ್ತಾರೆ ಎನ್ನುವ ಬೆನ್ನಲ್ಲೇ ಈ ಜೋಡಿ ದೂರವಾಗಿದೆ. ಇದೀಗ ಇವರಿಬ್ಬರಲ್ಲಿ ಯಾರದರೂ ಒಬ್ಬರಾದರು ಎಂಟ್ರಿಯಾಗುತ್ತಾರಾ ಎಂದು ಕಾದುನೋಡಬೇಕು.