ನಟಿ ಅಭಿನಯ ಮನೆಯಲ್ಲೇ ವೇಶ್ಯಾವಾಟಿಕೆ ನಡೆಯುತ್ತಿತ್ತಂತೆ..!! – ವರದಕ್ಷಿಣೆ ಪ್ರಕರಣದಲ್ಲಿ ಜೈಲುಪಾಲಾದ ಅಭಿನಯ ಬಗ್ಗೆ ಅವರ ಅತ್ತಿಗೆ ಹೇಳಿದ್ದೇನು?

ನಟಿ ಅಭಿನಯ ಮನೆಯಲ್ಲೇ ವೇಶ್ಯಾವಾಟಿಕೆ ನಡೆಯುತ್ತಿತ್ತಂತೆ..!! – ವರದಕ್ಷಿಣೆ ಪ್ರಕರಣದಲ್ಲಿ ಜೈಲುಪಾಲಾದ ಅಭಿನಯ ಬಗ್ಗೆ ಅವರ ಅತ್ತಿಗೆ ಹೇಳಿದ್ದೇನು?

ನ್ಯೂಸ್ ಆ್ಯರೋ : ಅತ್ತಿಗೆಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ ಆರೋಪದಲ್ಲಿ ಕನ್ನಡದ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆಯಾಗಿದೆ.

2002ರಲ್ಲಿ ಬೆಂಗಳೂರಿನ ಚಂದ್ರಲೇಔಟ್​ನಲ್ಲಿ ಅಭಿನಯ ಸೇರಿದಂತೆ ಐವರ ವಿರುದ್ಧ ಲಕ್ಷ್ಮೀದೇವಿ ಅನ್ನುವವರು ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ ಸಾವನ್ನಪ್ಪಿದ್ದಾರೆ. ವಿಚಾರಣೆ ನಡೆಸಿದ ಹೈಕೋರ್ಟ್​, ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹೈಕೋರ್ಟ್‌ ಆದೇಶ ಬಳಿಕ ಪ್ರತಿಕ್ರಿಯಿಸಿದ ನಟಿ ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ, ಕೋರ್ಟ್ ಆದೇಶ ಕೇಳಿ ತುಂಬಾನೇ ಖುಷಿಯಾಯಿತು. 20 ವರ್ಷಗಳ ಹೋರಾಟದಲ್ಲಿ ತುಂಬಾನೇ ಕಷ್ಟ ಪಟ್ಟಿದ್ದೇನೆ. ನಾನು ಕಾಲೇಜಿಗೆ ಕೆಲಸಕ್ಕೆ ಹೋಗುತ್ತಿದ್ದೆ, ಆ ಕೆಲಸವನ್ನೂ ತೆಗೆದು ಹಾಕಿದ್ದರು. ಹೊಟ್ಟೆ ಪಾಡಿಗೆ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ ನನಗೆ ಟಾರ್ಚರ್ ಕೊಡುತ್ತಿದ್ದರು.

ಅದಲ್ಲದೆ ವೇಶ್ಯಾವಾಟಿಕೆಯಾದರೂ ಮಾಡಿ ಹಣ ಕೊಡು ಎಂದು ಪೀಡಿಸುತ್ತಿದ್ದರು. ನಾನು ಅದ್ಯಾವುದಕ್ಕೂ ಬಗ್ಗದ ಹಿನ್ನೆಲೆ ಹಿಂಸೆ ಕೊಡುತ್ತಿದ್ದರು. ಇದೀಗ ಅವರಿಗೆ ಶಿಕ್ಷೆಯಾಗಿದೆ. ಅದಕ್ಕೆ ಕಾರಣ ನನ್ನ ವಕೀಲರು. ಅವರಿಗೆ ಧನ್ಯವಾದ ಹೇಳ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಕರಣ ಕುರಿತು ಹಿನ್ನೆಲೆ ಹಾಗೂ ಸಂಪೂರ್ಣ ಮಾಹಿತಿ:

84ರಲ್ಲಿ ಅನುಭವ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಭಿನಯ ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಒಬ್ಬ ನಟಿಯಾಗಿ ತನ್ನ ಅತ್ತಿಗೆಯ ಬೆಂಬಲಕ್ಕೆ ನಿಂತುಕೊಳ್ಳದೆ ಮನೆಯವರೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಅತ್ತಿಗೆ ಲಕ್ಷ್ಮಿದೇವಿ ಆರೋಪಿಸಿದ್ದಾರೆ. ಅಲ್ಲದೆ ಮಾಧ್ಯಮದವರ ಜೊತೆ ಮಾತನಾಡಿದ ಲಕ್ಷ್ಮಿದೇವಿ ನಾನು ಗಂಡನ ಮನೆಯಲ್ಲಿ ಇದ್ದದ್ದು ಒಂದೇ ವರ್ಷ ಮಾತ್ರ. ಎಲ್ಲ ರೀತಿಯ ನರಕವನ್ನೂ ಅನುಭವಿಸಿದೆ. ತಿನ್ನೋಕೆ ಒಂದ್ ರೊಟ್ಟಿ, ಸ್ನಾನ ಮಾಡೋಕೆ ಒಂದ್ ಬಕೆಟ್ ನೀರು ಜೊತೆಗೆ ಪರಪುರುಷನ ಜೊತೆ ಸಹಕರಿಸು ಅಂತ ಚಿತ್ರಹಿಂಸೆ ಕೊಡುತ್ತಿದ್ದರು. ಪರಪುರುಷನನ್ನು ಮನೆಗೂ ಕರೆದುಕೊಂಡು ಬರುತ್ತಿದ್ದರು. ಅಭಿನಯ ಚಿತ್ರ ನಟಿಯಾದರೂ, ಅವರು ನನ್ನ ನೆರವಿಗೆ ಬರಲಿಲ್ಲ. ಅವರೂ ಕೂಡ ಹಿಂಸೆ ಕೊಟ್ಟರು ಎಂದು ಮಾತನಾಡಿದ್ದಾರೆ ಲಕ್ಷ್ಮಿದೇವಿ.

ಅಲ್ಲದೆ, ಪರಪುರುಷರನ್ನು ಮನೆಗೆ ಕರೆದುಕೊಂಡು ಬಂದು ಅವರ ಜೊತೆ ಸಹಕರಿಸು ಎಂದು ಚಿತ್ರಹಿಂಸೆ ಕೊಡುತ್ತಿದ್ದರು ಎಂದು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ ಲಕ್ಷ್ಮಿದೇವಿ.

ನಟಿ ಅಭಿನಯ ಅವರ ಅತ್ತಿಗೆ ಲಕ್ಷ್ಮಿದೇವಿ 2002ರಲ್ಲಿ ಬೆಂಗಳೂರಿನ ಚಂದ್ರ ಲೇ ಔಟ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕುರಿತು ದೂರು ದಾಖಲಿಸಿದ್ದರು. ಈ ಸಂಬಂಧ ಅಭಿನಯ ಅವರನ್ನು ಸೇರಿಸಿ ಒಟ್ಟು ಐದು ಜನರ ಮೇಲೆ ಕೇಸ್ ಫೈಲ್ ಆಗಿತ್ತು. ನಟಿ ಅಭಿನಯ ಅವರ ಸಹೋದರ ಶ್ರೀನಿವಾಸ್ ಲಕ್ಷೀದೇವಿಯವರನ್ನು 1998ರಲ್ಲಿ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 80 ಸಾವಿರ ಹಣ, 250ಗ್ರಾಂ ಚಿನ್ನವನ್ನು ಪಡೆದಿದ್ದರು.

ಇದಲ್ಲದೆ, ಸ್ವಲ್ಪ ದಿನದ ನಂತರ ಮತ್ತೆ ಒಂದು ಲಕ್ಷ ಹಣ ಕೊಡುವುದಾಗಿ ಅಭಿನಯ ಕುಟುಂಬ ಲಕ್ಷ್ಮಿದೇವಿಯವರನ್ನ ಪೀಡಿಸುತ್ತಿದ್ದು, ಮನೆಯಿಂದ ಹೊರಹಾಕಿದ್ದರು. ಈ ಕುರಿತು ಲಕ್ಷ್ಮಿದೇವಿ ಕಿರುಕುಳ ತಾಳಲಾರದೆ ಚಂದ್ರ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಸಂಬಂಧ ಪೊಲೀಸ್ ಠಾಣೆ ಐದು ಜನರ ಮೇಲೆ 2012ರಲ್ಲಿ ಚಾರ್ಜ್​ ಶೀಟ್ ರೆಡಿ ಮಾಡಿತ್ತು. ಚಾರ್ಜ್​ಶೀಟ್ ಆಧರಿಸಿ ಮ್ಯಾಜಿಸ್ಟರೇಟ್ ಕೋರ್ಟ್​ ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಆದರೆ ನಂತರ ಜಿಲ್ಲಾ ನ್ಯಾಯಾಲಯ ಅವರ ಕೇಸನ್ನ ಖುಲಾಸೆ ಮಾಡಿತ್ತು. ನಂತರ ಲಕ್ಷ್ಮಿದೇವಿ ಜಿಲ್ಲಾ ನ್ಯಾಯಾಲಯದ ಆದೇಶವನ್ನ ಖಂಡಿಸಿ ಮೇಲ್ಮನವಿ ಸಲ್ಲಿಸಿದ್ದರು.ಹಾಗಾಗಿ ಇದೀಗ ಕೋರ್ಟ್​ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀನಿವಾಸ್, ರಾಮಕೃಷ್ಣ ಸಾವನ್ನಪ್ಪಿದ್ದು, ಅಭಿನಯ, ಚಲುವರಾಜ್, ಜಯಮ್ಮಎಂಬುವರು ಸೆರೆಮನೆ ವಾಸ ಅನುಭವಿಸುವಂತಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *