ಬಾದ್‌ ಶಾ ಮನೆಯ ‘ಮನ್ನತ್‌’ಗೆ ಹೊಸ ಲುಕ್ – ವಜ್ರದಿಂದ ಕಂಗೊಳಿಸುತ್ತಿದೆ ನಾಮಫಲಕ

ಬಾದ್‌ ಶಾ ಮನೆಯ ‘ಮನ್ನತ್‌’ಗೆ ಹೊಸ ಲುಕ್ – ವಜ್ರದಿಂದ ಕಂಗೊಳಿಸುತ್ತಿದೆ ನಾಮಫಲಕ

ನ್ಯೂಸ್ ಆ್ಯರೋ : ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಾಂದ್ರಾ ನಿವಾಸ ಇದೀಗ ನೋಡುಗರನ್ನು ಮತ್ತಷ್ಟು ಸೆಳೆಯುತ್ತಿದೆ. ಬಾದ್‌ ಶಾ ತಮ್ಮ ಮನೆಯ ನೇಮ್‌ ಪ್ಲೇಟ್‌ಗೆ ವಜ್ರದ ಅಲಂಕಾರವನ್ನು ಮಾಡಿದ್ದು ಇದೀಗ ಇನ್ನಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ.

ಎರಡು ವಜ್ರದ ನೇಮ್ ಪ್ಲೇಟನ್ನು ಅಳವಡಿಸಲಾಗಿದ್ದು, ಎಡ ಭಾಗಕ್ಕೆ ಮನ್ನತ್ ಎಂದು, ಬಲ ಭಾಗದಲ್ಲಿ ಲ್ಯಾಂಡ್‌ಸೆಂಡ್ ಎಂದು ಬರೆಯಲಾಗಿದೆ.

ಈ ಬಂಗಲೆ ತುಂಬಾನೇ ಹೆಸರುವಾಸಿಯಾಗಿದ್ದು ಇಲ್ಲಿ ಬರ್ತ್ಡೇ ಪಾರ್ಟಿಗಳನ್ನು, ವಿವಿಧ ಸಮಾರಂಭಗಳನ್ನು ಶಾರುಖ್ ಕುಟುಂಬ ಆಯೋಜಿಸುತ್ತದೆ. ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲವಾಗಿದ್ದು ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿ ಮಾಡುತ್ತಾರೆ.

ಶಾರುಖ್ ಖಾನ್ ಅವರ ಫ್ಯಾನ್ ಪೇಜ್‌ಗಳಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಕಿಂಗ್ ಖಾನ್ ನಿವಾಸದ ಮುಖ್ಯ ದ್ವಾರದಲ್ಲಿ ಮನ್ನತ್ ಎಂದು ನೇಮ್ ಪ್ಲೇಟ್ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ. ವಜ್ರದ ನೇಮ್‌ಪ್ಲೇಟ್ ಹೊಂದಿರುವ ಕಾರಣದಿಂದ ಮನ್ನತ್ ಈಗ ಮತ್ತಷ್ಟು ಹೈಲೈಟ್ ಆಗಿ ಕಾಣುತ್ತಿದೆ.

ಮನ್ನತ್ ಹೆಸರಿನ ಫಲಕವು ವರ್ಷಗಳಿಂದ ಅಭಿಮಾನಿಗಳಿಗೆ ನೆಚ್ಚಿನ ಸೆಲ್ಫಿ ತಾಣವಾಗಿದೆ. ತಮ್ಮ ಮನೆಯ ಬಾಲ್ಕನಿಯಿಂದ ಶಾರುಖ್ ಖಾನ್ ಹುಟ್ಟುಹಬ್ಬದ ದಿನ ಹಾಗೂ ಈದ್ ಮಿಲಾದ್ ಸಮಯದಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನವನ್ನು ನೀಡಿದ್ದರು. ಕೆಲವೊಮ್ಮೆ ತಮ್ಮ ಮಕ್ಕಳನ್ನು ಸಹ ತಮ್ಮೊಂದಿಗೆ ಕರೆತಂದರು. ಕೊರೊನಾದ ಬಳಿಕ ಶಾರುಖ್ ಖಾನ್ ಅವರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಶಾರುಖಾ ಖಾನ್ ಅವರು ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪಠಾಣ್’ನಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ಅಭಿನಯಿಸುತ್ತಿದ್ದು, ಜನವರಿ 25ರಂದು ಚಿತ್ರ ಬಿಡುಗಡೆಯಾಗಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *