ಬಿಡುಗಡೆಯಾದ ಒಂದೇ ವಾರಕ್ಕೆ ಕೆ.ಜಿ.ಎಫ್‌, ಬಾಹುಬಲಿ 2 ದಾಖಲೆ ಮುರಿದ ಪಠಾಣ್ – ಶಾರುಕ್ ಚಿತ್ರ ಗಳಿಸಿದ್ದೆಷ್ಟು ಕೋಟಿ ಗೊತ್ತಾ…!

ಬಿಡುಗಡೆಯಾದ ಒಂದೇ ವಾರಕ್ಕೆ ಕೆ.ಜಿ.ಎಫ್‌, ಬಾಹುಬಲಿ 2 ದಾಖಲೆ ಮುರಿದ ಪಠಾಣ್ – ಶಾರುಕ್ ಚಿತ್ರ ಗಳಿಸಿದ್ದೆಷ್ಟು ಕೋಟಿ ಗೊತ್ತಾ…!

ನ್ಯೂಸ್ ಆ್ಯರೋ‌ : ‘ಕಿಂಗ್ ಖಾನ್’ ಶಾರುಖ್ ಖಾನ್ , ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಎಲ್ಲರೂ ಈ ಚಿತ್ರವನ್ನು ನೋಡಲು ಮುಗಿಬೀಳುತ್ತಿದ್ದಾರೆ.

‘ಪಠಾಣ್​’ ಸಿನಿಮಾದ ಕಲೆಕ್ಷನ್ ತಗ್ಗುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಮೊದಲ ಐದು ದಿನ ಅಬ್ಬರದ ಕಲೆಕ್ಷನ್ ಮಾಡಿದ್ದ ಈ ಚಿತ್ರ ಸೋಮವಾರ ಅಂದರೆ ಜ.30ರಂದು ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಸೋಮವಾರವೂ ಶಾರುಖ್​ ಖಾನ್​ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ‘ಪಠಾಣ್​’ ಸಿನಿಮಾ ಸೋಮವಾರ ಸುಮಾರು 25 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಈ ಚಿತ್ರದ ಹಿಂದಿ ವರ್ಷನ್ ಕಲೆಕ್ಷನ್ 296 ಕೋಟಿ ರೂಪಾಯಿ ಆಗಿದ್ದು, ಈ ವಾರಾಂತ್ಯಕ್ಕೆ ಚಿತ್ರ 400 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗುತ್ತಿದೆ.

ಪಠಾಣ್ ಸಿನಿಮಾ ದೇಶದಲ್ಲಿ ಬಿಡುಗಡೆಯಾದ ದಿನವೇ 57 ಕೋಟಿ ರೂ. ಗಳಿಸಿದೆ. ಗುರುವಾರದಂದು 70.50 ಕೋಟಿ ರೂ., ಶುಕ್ರವಾರ 39 ಕೋಟಿ ರೂ., ಶನಿವಾರ 53 ಕೋಟಿ ರೂ., ಭಾನುವಾರ 60.75 ಕೋಟಿ ರೂ., ಸೋಮವಾರ 26.50 ಕೋಟಿ ರೂ. ಗಳಿಸಿದೆ. ಸಿನಿಮಾ ಒಂಬತ್ತೇ ದಿನಗಳಲ್ಲಿ ಭಾರತದಲ್ಲಿಯೇ 300 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ. ಹಿಂದಿ ಸಿನಿಮಾಗಳು ಹಾಗೂ ಹಿಂದಿಗೆ ಡಬ್ ಆದ ಸಿನಿಮಾಗಳ ಮಟ್ಟಿಗೆ ಅತಿ ವೇಗವಾಗಿ 300 ಕೋಟಿ ಬಾಚಿಕೊಂಡ ಸಿನಿಮಾ ಪಟ್ಟಿಗೆ ಇದು ಸೇರಿಕೊಂಡಿದೆ. ಈ ವಿಚಾರದಲ್ಲಿ ಕೆ.ಜಿ.ಎಫ್ ಮತ್ತು ಬಾಹುಬಲಿ 2ರ ದಾಖಲೆಯನ್ನೂ ಮುರಿದುಹಾಕಿದೆ.

ಇನ್ನೂ ಅಭಿಮಾನಿಗಳು ನಾಲ್ಕು ವರ್ಷದ ನಂತರ ನೆಚ್ಚಿನ ನಟನನ್ನು ಹಿರಿತೆರೆ ಮೇಲೆ ನೋಡಿರುವ ಸಂಭ್ರಮದಲ್ಲಿದ್ದು, ಗಳಿಕೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ಈ ಸಿನಿಮಾ ವಿಶ್ವಾದ್ಯಂತ ಈಗಾಗಲೇ 591 ಕೋಟಿ ಗಳಿಸಿ ಮುನ್ನುಗುತ್ತಿದೆ. ಶೀಘ್ರವೇ ಅದು 600 ಕೋಟಿ ರೂ. ದಾಟಲಿದೆ ಎಂದು ಸಿನಿಮಾ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಅಲ್ಲದೇ ‘ಪಠಾಣ್’ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಿದೆ. ಅದರ ಕಲೆಕ್ಷನ್ ಸೇರಿದರೆ ಭಾರತದ ಬಾಕ್ಸ್ ಆಫೀಸ್ ಗಳಿಕೆ 330 ಕೋಟಿ ರೂಪಾಯಿ ದಾಟಿದೆ. ವಿಶ್ವಾದ್ಯಂತ ಚಿತ್ರದ ಗಳಿಕೆ 600 ಕೋಟಿ ರೂಪಾಯಿ ಆಗಿದೆ. ಇನ್ನೂ ಕೆಲ ವಾರ ‘ಪಠಾಣ್​’ ಸಿನಿಮಾ ಅಬ್ಬರದ ಗಳಿಕೆ ಮಾಡಲಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *