ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ನ್ಯೂಸ್‌ ಆ್ಯರೋ : ಪಾರ್ಟಿ, ಗೆಟ್‌ ಟುಗೆದರ್‌ ಎಲ್ಲಾ ಜೋರಾಗಿರುವ ಬಾಲಿವುಡ್‌ನಲ್ಲಿ ಮದ್ಯ ಎಲ್ಲ ಮಾಮೂಲು. ಪಾರ್ಟಿಗೆ ಸೇರುವುದೇ ಕುಡಿದು ಕುಣಿದಾಡ್ಲಿಕ್ಕೆ ಅಂತಾ ಹೇಳಿದರೆ ತಪ್ಪಾಗಲ್ಲ. ಹಲವು ಸಿನಿಮಾ ನಟ-ನಟಿಯರು ಮದ್ಯ ಸೇವಿಸುತ್ತಾರೆಂಬುದು ಗುಟ್ಟಾಗಿಲ್ಲ.

ಈಚೆಗೆ ರಣಬೀರ್‌ ಕಪೂರ್‌ ತಾನೊಬ್ಬ ಆಲ್ಕೋಹಾಲಿಕ್ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ರಣಬೀರ್‌ಗೆ ಕಡಿಮೆ ಬೆಲೆಯ ರಮ್‌ ಕುಡಿಸಿರುವ ಬಗ್ಗೆ ಸಹನಟರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟ ಸೌರಭ್ ಶುಕ್ಲ ಹಿಂದಿ ಚಿತ್ರರಂಗದ ಹೆಸರಾಂತ ಮುಖ. ಅಂದಹಾಗೆ ಸೌರಭ್ ಶುಕ್ಲ, ಕನ್ನಡದ ಕೇರ್ ಆಫ್ ಫುಟ್​ಪಾತ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಲವು ವರ್ಷಗಳಿಂದಲೂ ಪೋಷಕ ಪಾತ್ರಗಳು, ಹಾಸ್ಯ, ವಿಲನ್ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಸೌರಭ್ ಶುಕ್ಲ, ಈಚೆಗಿನ ಸಂದರ್ಶನವೊಂದರಲ್ಲಿ ತಾವು, ರಣಬೀರ್ ಕಪೂರ್ ಅತಿ ಕಡಿಮೆ ಬೆಲೆಯ ಸಸ್ತಾ ಡ್ರಿಂಕ್ಸ್ ಕುಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್ ಶುಕ್ಲಾಗೆ ಸಂದರ್ಶಕ ನೀವು ಡ್ರಿಂಕ್ಸ್ ಮಾಡ್ತೀರ, ಯಾವ ಬ್ರ್ಯಾಂಡ್ ಕುಡಿಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೌರಭ್, ಕಡಿಮೆ ಬೆಲೆಯಲ್ಲಿ ಸಿಗುವ ಓಲ್ಡ್ ಮಾಂಕ್ ಹಾಗೂ ಕೋಕ್ ಕುಡಿಯುತ್ತೀನಿ. ದುಬಾರಿ ಹಾಗೂ ಕಡಿಮೆ ಬೆಲೆಯ ಎರಡೂ ಮದ್ಯವನ್ನು ಸೇವಿಸುತ್ತೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ನಟ ರಣಬೀರ್‌ ಕಪೂರು ದುಬಾರಿ ಬೆಲೆಯ ರಮ್ ಕುಡಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಒಮ್ಮೆ ನಾವು ಲೇಹ್​ನಲ್ಲಿದ್ದೆವು. ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೆ. ಆಗ ಬಂದ ರಣಬೀರ್ ಏನು ಕುಡಿಯುತ್ತಿದ್ದೀರಿ ಎಂದು ಕೇಳಿದ ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೀನಿ ಎಂದೆ. ಆಗ ರಣಬೀರ್, ಇರಿ ನಾನು ಒಳ್ಳೆಯ ರಮ್ ಕುಡಿಸುತ್ತೇನೆ ಎಂದು ತರಿಸಿ ಕೊಟ್ಟಿದ್ದರು.

ರಣಬೀರ್ ಕಪೂರ್, 30 ಸಾವಿರ ಬೆಲೆಯ ರಮ್ ಬಾಟಲಿ ತರಿಸಿದ ಬಳಿಕ ನಾವಿಬ್ಬರು ಚೆನ್ನಾಗಿ ಕುಡಿದೆವು. ಮೊದಲೇ ಆ ಬಾಟಲಿಯಲ್ಲಿ ಸ್ವಲ್ಪ ಖಾಲಿಯಾಗಿತ್ತು. ಹಾಗಾಗಿ ಇಬ್ಬರಿಗೂ ಇನ್ನು ಸ್ವಲ್ಪ ರಮ್ ಬೇಕು ಎನಿಸಿತು. ಆಗ ನಾನು ರಣಬೀರ್ ಕಪೂರ್​ಗೆ ಓಲ್ಡ್ ಮಾಂಕ್ ಕುಡಿಸಿದೆ. ಅದು ಅವನಿಗೆ ಇಷ್ಟವಾಯಿತು ಎಂದಿದ್ದಾರೆ ಸೌರಭ್ ಶುಕ್ಲ.

ಅದಲ್ಲದೆ ರಣಬೀರ್‌ ಕಪೂರ್‌ಗೆ ಆ ₹30 ಸಾವಿರ ರೂಪಾಯಿಯ ರಮ್‌ ಮೊದಲು ಕುಡಿಸಿದ್ದು ತೆಲುಗು ಸ್ಟಾರ್ ನಟ ನಾಗಾರ್ಜುನ ಅಂತೆ ಎಂದು ಸಿಕ್ರೇಟ್‌ ಬಿಚ್ಚಿಟ್ಟಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *