ಕಿರಿಕ್‌ ಕೀರ್ತಿ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ – ‘ಸೂಪರ್‌ ಜೋಡಿ’ ದೂರವಾಗಿದ್ದು ಯಾಕೆ ಗೊತ್ತಾ? ವೈರಲ್ ಆದ ವಿಡಿಯೋದಲ್ಲಿ ಕೀರ್ತಿ ಹೇಳಿದ್ದೇನು?

ಕಿರಿಕ್‌ ಕೀರ್ತಿ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ – ‘ಸೂಪರ್‌ ಜೋಡಿ’ ದೂರವಾಗಿದ್ದು ಯಾಕೆ ಗೊತ್ತಾ? ವೈರಲ್ ಆದ ವಿಡಿಯೋದಲ್ಲಿ ಕೀರ್ತಿ ಹೇಳಿದ್ದೇನು?

ನ್ಯೂಸ್‌ ಆ್ಯರೋ : ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿ, ಕನ್ನಡಪರ ಹೋರಾಟಗಾರನಾಗಿ, ಟಿವಿ ನಿರೂಪಕನಾಗಿ ಕನ್ನಡಿಗರ ಮನಗೆದ್ದಿದ್ದ ಕಿರಿಕ್‌ ಕೀರ್ತಿ ಅವರ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.

ಕಿರಿಕ್ ಕೀರ್ತಿ ಮೊದಲಿಗೆ ಜನರಿಗೆ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಅದರ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ಉತ್ತಮವಾಗಿ ಆಟವಾಡಿ ರನ್ನರ್‌ ಅಪ್‌ ಪ್ರಶಸ್ತಿ ಗೆದ್ದಿದ್ದರು. ಪ್ರತಿಯೊಬ್ಬರೂ ಮೆಚ್ಚುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಕಿರಿಕ್ ಕೀರ್ತಿ ಅವರು ತಾನು ಪ್ರೀತಿಸಿದ್ದ ಹುಡುಗಿ ಅರ್ಪಿತಾ ಅವರನ್ನು ವರಿಸಿದ್ದರು. ಅನುಕೂಲ ಕುಟುಂಬದಲ್ಲಿ ಜನಿಸಿದ್ದ ಅರ್ಪಿತಾ ಮನೆಯವರ ವಿರೋಧದ ಮಧ್ಯೆಯೇ ಕೀರ್ತಿ ಅವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಹಲವು ಸವಾಲುಗಳನ್ನು ಎದುರಿಸಿದರು. ಕೀರ್ತಿ ಅವರ ಪ್ರತಿಯೊಂದು ಕಷ್ಟದ ಹೆಜ್ಜೆಗಳಲ್ಲಿ ಕೂಡ ಅರ್ಪಿತಾ ಸಾಥ್‌ ನೀಡುತ್ತಿದ್ದರು.

ಬಿಗ್ ಬಾಸ್‌ ರಿಯಾಲಿಟಿ ಶೋಗೆ ಹೋಗಿ ಬಂದ ನಂತರ ಕಿರಿಕ್ ಕೀರ್ತಿ ಅವರ ಅದೃಷ್ಟವೇ ಬದಲಾಯಿತು. ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ ಹಾಗೂ ಇನ್ನು ಹಲವಾರು ಸಿನಿಮಾಗಳಲ್ಲಿ ಕೂಡ ಕಿರಿಕ್ ಕೀರ್ತಿ ಬಣ್ಣ ಹಚ್ಚಿದ್ದಾರೆ. ಮತ್ತೊಂದೆಡೆ ಅರ್ಪಿತಾ ಅವರಿಗೂ ಧಾರಾವಾಹಿಗಳಲ್ಲಿ ನಟಿಸುವಂತಹ ಅವಕಾಶ ಹುಡುಕಿಕೊಂಡು ಬಂದಿದೆ. ಈ ದಂಪತಿ ‘ಸೂಪರ್ ಜೋಡಿ’ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿ, ದಾಂಪತ್ಯ ಜೀವನದ ಕುರಿತಂತೆ ಎಲ್ಲರೊಂದಿಗೂ ಹಂಚಿಕೊಂಡಿದ್ದರು.

ಇಷ್ಟೊಂದು ಅನ್ಯೋನ್ಯವಾಗಿದ್ದ ಈ ಜೋಡಿ ಕೆಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದೆ. ಇದರ ಕುರಿತಂತೆ ನೇರ ನೇರವಾಗಿಯೇ ಕಿರಿಕ್ ಕೀರ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಅರ್ಪಿತಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಹೆಸರಿನ ಜತೆ ಇದ್ದ ಕೀರ್ತಿ ಎನ್ನುವ ಹೆಸರನ್ನು ತೆಗೆದು, ಕೇವಲ ಅರ್ಪಿತಾ ಎಂದು ಉಳಿಸಿಕೊಂಡಿದ್ದಾರೆ.

‘ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದೆ. ಈಗ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎಂದು ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಹೇಳುವ ಮೂಲಕ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಗನ ಜೊತೆಗೆ ಬರ್ತಡೇಯನ್ನು ಕೂಡ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎದು ಬೇಸರ ಹೊರಹಾಕಿದ್ದಾರೆ. ಸದ್ಯಕ್ಕೆ ಅರ್ಪಿತಾ ತಮ್ಮ ಮಗನೊಂದಿಗೆ ತಂದೆಯ ಮನೆಯಲ್ಲಿದ್ದಾರೆ.

ಇದೀಗ ವಿಡಿಯೋ ಅಪ್ಲೋಡ್ ಮಾಡಿರುವ ಕಿರಿಕ್ ಕೀರ್ತಿ ಜನರು ಬೇಕಾಬಿಟ್ಟಿ ತಮ್ಮ ಜೀವನದ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾ ಹೀರೋಗಳ ದಯವಿಟ್ಟು ನಮಗೆ ಬದುಕಲು ಬಿಡಿ. ಯಾಕೆ ನಮಗೆ ಟಾರ್ಚರ್‌ ಮಾಡುತ್ತಿರುವುದು? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಮಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವು ನಮ್ಮ ಕುಟುಂಬಕ್ಕೆ ಇಲ್ಲ.

ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಂಡು ಹೀಗಂತೆ ಅವನು ಹಾಗಂತೆ ಇವಳು ಈ ರೀತಿ ಮಾಡಿದ್ದಾರೆ ಅಂತೀರಾ ಅಲ್ವಾ ಯಾರು ಬಂದು ನಿಮ್ಮ ಬಳಿ ಕಥೆ ಹೇಳಿದ್ದಾರೆ. ನಮ್ಮ ಮನೆಯ ಮತ್ತೊಂದು ರೂಮಿನಲ್ಲಿ ನೀವು ವಾಸವಿದ್ರಾ? ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಯಾರೋ ಒಂದಿಷ್ಟು ಊಹಾ ಪೋಹಗಳನ್ನು ಹರಡಿದಾಗ ಕ್ಲಾರಿಟಿ ಕೊಡಬೇಕು ಅದಕ್ಕೆ ಕ್ಲಾರಿಟಿ ಕೊಟ್ಟಿರುವೆ’ ಎಂದು ಕೀರ್ತಿ ವಿಡಿಯೋದಲ್ಲಿ ಮಾತನಾಡಿದ್ದಾರೆ.

‘ನಾನು ಚೆನ್ನಾಗಿರುವೆ. ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೀವಿ. ನಾನು ಏನಾದರೂ ಬಂದು ಅವಳು ಹೀಗೆ ಮಾಡಿದ್ದಾಳೆ ಅಥವಾ ಅವಳು ಬಂದು ನಾನು ಹೀಗೆ ಮಾಡಿರುವೆ ಎಂದು ಏನಾದರೂ ಹೇಳಿದ್ದಾರಾ? 10 ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಅನ್ನೋ ಅರಿವು ನಮಗಿದೆ. ನನ್ನ ಹೊಟ್ಟೆ ಉರಿಸುವುದು ಯಾಕೆ ನಿಮ್ಮ ಕಾಮೆಂಟ್ ಪೋಸ್ಟ್‌ನ ನನ್ನ ಕುಟುಂಬದವರು ನೋಡಿ ಕಣ್ಣೀರು ಹಾಕುವುದು, ಅವಳ ಮನೆಯವರು ನೋಡಿ ಅವರು ಕಣ್ಣೀರು ಹಾಕುವುದು .. ಇದರಿಂದ ನಿಮಗೆ ಏನು ಸಿಗುತ್ತದೆ? ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ಹಾಗೆ ನಾವು ಕೂಡ ಒಬ್ಬರು ಅಂದುಕೊಳ್ಳಿ. ನಮ್ಮ ಪೋಸ್ಟ್‌ ನಮ್ಮ ಸ್ಟೋರಿಗಳ ಆಧಾರದ ಮೇಲೆ ನೀವೇ ಕಥೆ ಸೃಷ್ಟಿ ಮಾಡಿಕೊಂಡು ನೀವೇ ಏನೋ ನಿರ್ಧಾರ ಮಾಡಿಕೊಂಡಿದ್ದೀರಿ.

ಏನಾದರೂ ಆದಾಗ ನಾವೇ ಬಂದು ಕ್ಲಾರಿಟಿ ಕೊಡುತ್ತೀವಿ. ಸೈದ್ಧಾಂತಿಕ ವಿಚಾರಗಳಲ್ಲಿ ನನ್ನನ್ನು ವಿರೋಧಿಸಲು ಆಗದೇ ಇದ್ದಾಗ ಬಿಟ್ಟು ಬಿಡಿ ಅದನ್ನು ಬಿಟ್ಟು ವೈಯಕ್ತಿ ವಿಚಾರದಲ್ಲಿ ಯಾಕೆ ಎಳೆದು ತರುತ್ತೀರಿ? ನಿಮ್ಮ ಪ್ರೋಫೈಲ್‌ನಲ್ಲಿ ನಿಮ್ಮ ಫೋಟೋ ಹಾಕಿಕೊಳ್ಳುವ ಯೋಗ್ಯತೆ ಇರುವುದಿಲ್ಲ ಅಲ್ಲಿ ನನ್ನ ಫೋಟೋ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ’ ಎಂದು ಕೀರ್ತಿ ಹೇಳಿದ್ದಾರೆ.

‘ನನಗೆ 7 ವರ್ಷದ ಮಗ, 60-70 ವರ್ಷದ ಅಮ್ಮ ಅಪ್ಪ ಇದ್ದಾರೆ ಹೊಟ್ಟೆ ಉರಿಯುತ್ತದೆ. ನಿಮ್ಮ ತಾಯಿ ಅಥವಾ ಹೆಂಡತಿ ಹೋಗೋ ಇನ್ನು ಮನೆಗೆ ರೇಷನ್ ತಂದಿಲ್ಲ ನಾಚಿಕೆ ಮಾನ ಮರ್ಯಾದೆ ಇಲ್ಲ ಅಂತ ಮನೆಯಿಂದ ಹೊರ ದಬ್ಬಿರುತ್ತಾರೆ. ಆ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಅಗುವುದಿಲ್ಲ ಅಂತ ನನ್ನ ವಿಚಾರಗಳನ್ನು ಹಾಕುತ್ತೀರಾ ಅಂದ್ರೆ ಮನುಷ್ಯರಾ ನೀವು? ನಿಮ್ಮ ತಟ್ಟೆಯಲ್ಲಿ ಹೆಗಣ ಬಿದ್ದಿದ್ದೆ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದೀರಾ?

ನನ್ನ ಸಂಕಟ ನಮಗೆ ಗೊತ್ತು ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ, ಹೇಗೆ ಸರಿ ಮಾಡಬೇಕು ಹೇಗೆ ಅನುಸರಿಸಿಕೊಳ್ಳಬೇಕು ಅನ್ನೋ ಅರಿವು ನಮಗಿದೆ. ಮತ್ತೊಬ್ಬರ ಬದುಕು ನಾಶ ಮಾಡಲು ಯಾಕೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತೀರಾ?’ ಎಂದಿದ್ದಾರೆ ಕೀರ್ತಿ.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *