ಕಥೆ ಹುಡುಕುತ್ತಾ ಕರಾವಳಿಯಲ್ಲಿ ಬೀಡುಬಿಟ್ಟ ರಿಷಬ್ ಶೆಟ್ಟಿ ತಂಡ – ಕಾಂತಾರ 2 ಜೂನ್‌ಗೆ ಚಿತ್ರೀಕರಣ ಶುರು, 2024ರ ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ

ಕಥೆ ಹುಡುಕುತ್ತಾ ಕರಾವಳಿಯಲ್ಲಿ ಬೀಡುಬಿಟ್ಟ ರಿಷಬ್ ಶೆಟ್ಟಿ ತಂಡ – ಕಾಂತಾರ 2 ಜೂನ್‌ಗೆ ಚಿತ್ರೀಕರಣ ಶುರು, 2024ರ ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ

ನ್ಯೂಸ್ ಆ್ಯರೋ : ಕಾಂತಾರ ಚಿತ್ರದ ಯಶಸ್ವಿನ ಬಳಿಕ ಇಡೀ ವಿಶ್ವಕ್ಕೆ ಕಾಡಿದ ಪ್ರಶ್ನೆಯೆಂದರೆ ಕಾಂತಾರ 2 ಸಿನಿಮಾ ಬರಲಿದೆಯೇ ಎಂದು. ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸ್ಪಷ್ಟನೆ ನೀಡಿದ್ದು, ಈಗಾಗಲೇ ಚಿತ್ರಕಥೆ ಬಗ್ಗೆ ಚರ್ಚೆ ನಡೆದು ಒಂದು ಹಂತಕ್ಕೆ ಬಂದಿದೆ ಎಂದು ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗವಹಿಸಿದ ವಿಜಯ್ ಕಿರಗಂದೂರು ಅವರು, ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ಅವರು ಕಥೆಗಾಗಿ ಕರಾವಳಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಚಿತ್ರದ ಬಹುಭಾಗ ಮಳೆಗಾಲದಲ್ಲಿ ನಡೆಯುವ ಕಾರಣ, ಜೂನ್​ನಲ್ಲಿ ಕಾಂತಾರ 2 ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಿದೆ ಎಂದು ಹೇಳಿಕೊಂಡಿದ್ದಾರೆ.

ಕಾಂತಾರ ಚಿತ್ರದ ಹಿಂದಿನ ಕಥೆಯನ್ನು ಕಾಂತಾರ 2 ಹೇಳಲಿದ್ದು, ಪಂಜುರ್ಲಿ ಗುಳಿಗ ದೈವಗಳ ಹಿನ್ನೆಲೆಯನ್ನು ಹೇಳುವ ಪ್ರಯತ್ನ ಚಿತ್ರತಂಡ ಮಾಡಲಿದೆ.

ಕಾಂತಾರ 2 ದೊಡ್ಡ ಬಜೆಟ್​ನಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿದೆ. ‘ಕಾಂತಾರ’ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿತ್ತೆಂದರೆ, ಅದರ ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.ಕೆಲವು ಹೊಸ ಪಾತ್ರಗಳು ಚಿತ್ರತಂಡ ಸೇರಿಕೊಳ್ಳಲಿವೆ. ಆದರೆ, ಕಥಾವಸ್ತು ಮತ್ತು ಶೈಲಿ ಮೊದಲ ಚಿತ್ರದಂತೆಯೇ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *