
ಒಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೀನು ನನಗೆ ಬೇಕು ಅನ್ನೋದು ಕಷ್ಟ..!! – ಕಾಸ್ಟಿಂಗ್ ಕೌಚ್ ಬಗ್ಗೆ ಹಿರಿಯ ನಟಿ ರೇವತಿ ಹೇಳಿದ್ದೇನು..!?
- ಮನರಂಜನೆ
- October 15, 2023
- No Comment
- 79
ನ್ಯೂಸ್ ಆ್ಯರೋ : ಈಚೆಗೆ ಮೀಟೂ ಅಭಿಯಾನ ಭಾರತ ಸಿನಿಮಾ ರಂಗದಲ್ಲಿ ದೊಡ್ಡ ಸದ್ದು ಮಾಡಿತು. ವಿವಿಧ ರಂಗದಲ್ಲಿ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯವನ್ನು ಎದುರಿಸುವ ವಿರುದ್ಧ ಶುರುವಾದ ಅಭಿಯಾನವಿದು. ಮೀಟೂ ಮೂಲಕ ಅನೇಕ ನಟಿಯರು ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಈಚೆಗೆ ಹಿರಿಯ ಕಲಾವಿದೆ ಬಹುಭಾಷಾ ಖ್ಯಾತ ನಟಿ ರೇವತಿ ಅವರು ಕೂಡ ಕಾಸ್ಟಿಂಗ್ ಕೌಚ್ ಬಗೆಗಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಟಿ ರೇವತಿ ಅವರು 80 ಹಾಗೂ 90ರ ದಶಕದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ಸಂದರ್ಶನದಲ್ಲಿ ಆ ಕಾಲದ ಕಾಸ್ಟಿಂಗ್ ಕೌಚ್ ಹಾಗೂ ಇವತ್ತಿನ ಕಾಲದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್‌ನ ಬಗ್ಗೆ ಮಾತನಾಡಿದ್ದಾರೆ.
ನಮ್ಮ ಕಾಲದಲ್ಲಿ ಮೊಬೈಲ್ ಬಳಕೆ ಇರುತ್ತಿರಲಿಲ್ಲ. ಕೆಲಸ ಮುಗಿದ ಮೇಲೆ ಮನೆಗೆ. ನಂತರ ಬೆಳವಣಿಗೆ ಮುಂದಿನ ಚಿತ್ರೀಕರಣದಲ್ಲೇ ನಡೆಯುತ್ತಿತ್ತು. ಆದರೆ ಈಗ ಎಲ್ಲಾನೂ ನಡೆಯುವುದು ಮೊಬೈಲ್‌ನಲ್ಲೆ. ಇಂದು ನಡೆಯುತ್ತಿರುವ ಕಾಸ್ಟಿಂಗ್ ಕೌಚ್‌ಗೆ ಮೊಬೈಲ್ ಫೋನ್ ಕಾರಣ ಎಂದು ದೂರಿದರು.
“80, 90ರ ದಶಕಗಳಲ್ಲಿ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ. ಮೊಬೈಲ್ ಫೋನ್ ಹಾಗೂ ಮೆಸೇಜ್‌ಗಳಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೀನು ನನಗೆ ಬೇಕು, ನನ್ನೊಟ್ಟಿಗೆ ಇರು ಎಂದು ಕೆಟ್ಟ ಉದ್ದೇಶದಿಂದ ಕೇಳುವುದು ಕಷ್ಟ” ಎಂದು ಅವತ್ತಿನ ಕಾಲದಲ್ಲಿ ಇದೆಲ್ಲ ಅಷ್ಟು ಸುಲಭ ಇರಲಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ಧಾರೆ.
“ಈ ಕಾಲದಲ್ಲಿ ಒಂದು ಮಸೇಜ್ ಮಾಡಿ ಬಂದು ಭೇಟಿ ಮಾಡು, ಕಾಫಿಗೆ ಹೋಗೋಣ ಹೀಗೆ ನೂರಾರು ಮೆಸೇಜ್‌ಗಳು ಹೋಗುತ್ತವೆ. ಈ ಕಾಲದಲ್ಲಿ ಮೊಬೈಲ್ ಫೋನ್‌ಗಳಿಂದಲೇ ಹೆಚ್ಚು ಸಮಸ್ಯೆಗಳು ಬರುತ್ತವೆ. ಮೊಬೈಲ್ ಫೋನ್‌ಗಳಿಂದ ಎಮೋಜಿ ಬಳಸುವುದು ಹೆಚ್ಚಾಗಿದೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಎಮೋಜಿಗಳ ಅರ್ಥ ಸರಿಯಾಗಿ ಅರ್ಥವಾಗುವುದಿಲ್ಲ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಳಸಬೇಕು” ಎಂದು ಮೊಬೈಲ್ ದುರ್ಬಳಕೆ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ 80, 90ರ ದಶಕದಲ್ಲಿ ಎದುರಿಸುತ್ತಿದ್ದ ಸಾಮಾನ್ಯ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟಿ ರೇವತಿ, ಆ ಕಾಲದಲ್ಲಿ ಏನಾದರೂ ಇಂತಹ ಕೆಟ್ಟ ಸಂದರ್ಭಗಳು ಎದುರಾದರೆ ನೋ ಎಂದು ಹೇಳಿ ನಕ್ಕು ಹೋಗುತ್ತಿದ್ದೆವು, ಅದು ಅಲ್ಲಿಗೆ ಮುಗಿಯುತ್ತಿತ್ತು ಎಂದರು.