
ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ – ಯಾವಾಗ? ಯಾವ ಫ್ಲಾಟ್ ಫಾರ್ಮ್ ಗೊತ್ತಾ? ಇಲ್ಲಿದೆ ಮಾಹಿತಿ
- ಮನರಂಜನೆ
- September 2, 2023
- No Comment
- 47
ನ್ಯೂಸ್ ಆ್ಯರೋ : ‘ಕಾವಾಲ’ ಹಾಡಿನ ಮೂಲಕ ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಬಿನಯದ ‘ಜೈಲರ್’ (Jailer) ಚಿತ್ರ ಅಂದುಕೊಂಡಂತೆ ಭರ್ಜರಿ ಯಶಸ್ವಿಯಾಗಿದೆ. ಬಾಕ್ಸ್ ಆಫೀಸ್ ಧೂಳೀಪಟ ಮಾಡಿರುವ ಈ ಚಿತ್ರ 630 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.
ಒಟಿಟಿ ಪ್ರಸಾರ ದಿನಾಂಕ ಪ್ರಕಟ
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾದ ಒಟಟಿ (OTT Release Date) ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಕಾಲಿವುಡ್ ಮಾತ್ರವಲ್ಲ ಭಾರತವನ್ನೂ ಮೀರಿ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೈಲರ್ ಚಿತ್ರದ ಎಚ್.ಡಿ. ಪ್ರಿಂಟ್ ಇತ್ತೀಚೆಗೆ ಆನ್ ಲೈನ್ ಮೂಲಕ ಲೀಕ್ ಆಗಿತ್ತು. ಹೀಗಾಗಿ ಪ್ರಸಾರ ಹಕ್ಕು ಪಡೆದುಕೊಂಡಿರುವ ಅಮೇಜಾನ್ ಪ್ರೈಮ್ ಇದೀಗ ಅಧಿಕೃತ ಪ್ರಸಾರ ದಿನಾಂಕ ಘೋಷಿಸಿದೆ.
ಆಗಸ್ಟ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರ 1 ತಿಂಗಳು ಮೊದಲೇ ಅಂದರೆ ಸೆಪ್ಟಂಬರ್ 7ರಂದು ಅಮೇಜಾನ್ ಪ್ರೈಮ್ (Amazon Prime) ನಲ್ಲಿ ಪ್ರಸಾರವಾಗಲಿದೆ. ತಮಿಳು ಜೊತೆಗೆ ಕನ್ನಡ, ತೆಲುಗು, ಮಲೆಯಾಳಂ ಮತ್ತು ಹಿಂದಿಯಲ್ಲೂ ‘ಜೈಲರ್’ನ ದರ್ಶನವಾಗಲಿದೆ.
ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಕನ್ನಡದ ಶಿವರಾಜ್ ಕುಮಾರ್, ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ವಿನಾಯಕನ್, ತಮನ್ನಾ, ರಮ್ಯಾಕೃಷ್ಣ, ಜಾಕಿಶ್ರಾಫ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.