ಮುಂದಿನ ವಾರ ನಟ ಪ್ರಭಾಸ್ ನಟಿ ಕೃತಿ ಸನೋನ್ ಅದ್ದೂರಿ ನಿಶ್ಚಿತಾರ್ಥ..!? – ಮಾಲ್ಡೀವ್ಸ್ ನಲ್ಲಿ ನಡೆಯೋ ಶುಭಕಾರ್ಯದ ಬಗ್ಗೆ ಬಾಯಿ ಬಿಟ್ಟಿದ್ಯಾರು..!?

ಮುಂದಿನ ವಾರ ನಟ ಪ್ರಭಾಸ್ ನಟಿ ಕೃತಿ ಸನೋನ್ ಅದ್ದೂರಿ ನಿಶ್ಚಿತಾರ್ಥ..!? – ಮಾಲ್ಡೀವ್ಸ್ ನಲ್ಲಿ ನಡೆಯೋ ಶುಭಕಾರ್ಯದ ಬಗ್ಗೆ ಬಾಯಿ ಬಿಟ್ಟಿದ್ಯಾರು..!?

ನ್ಯೂಸ್ ಆ್ಯರೋ : ಈಗೀಗ ಹೆಚ್ಚಿನ ಸೆಲೆಬ್ರಿಟಿಗಳು ಮದುವೆಯಾಗುತ್ತಿದ್ದಾರೆ‌. ಇತ್ತೀಚೆಗಷ್ಟೇ, ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ, ಕಿಯಾರಾ-ಸಿದ್ದಾರ್ಥ್ ಹಸೆಮಣೆ ಏರಿದ್ದರು. ಇದೀಗ ಸಿನಿ ದುನಿಯಾದ ಮತ್ತೊಂದು ಜೋಡಿಗಳು ಮದುವೆಗೆ ಸಿದ್ಧವಾಗಿವೆ. ಹೌದು, ಪ್ರಭಾಸ್ ಹಾಗೂ ಕೃತಿ ಸನೋನ್ ವಿವಾಹವಾಗಿಲಿದ್ದಾರಂತೆ. ಸದ್ಯದಲ್ಲೇ ಎಂಗೇಜ್ಮೆಂಟ್ ನಡೆಯಲಿದೆ.

ಪ್ರಭಾಸ್-ಕೃತಿ ಸನೋನ್ ಲವ್ ಸ್ಟೋರಿ :

ಸಾಕಷ್ಟು ಸಮಯದಿಂದ ಸಿನಿ‌ ಜಗತ್ತಿನಲ್ಲಿ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ‘ಆದಿಪುರುಷ್’ ಸಿನಿಮಾ ಶೂಟಿಂಗ್ ವೇಳೆ ಇವರಿಬ್ಬರ ನಡುವೆ ಪ್ರೀತಿಯಾಗಿತ್ತು ಎಂಬ ಸುದ್ದಿ ಹರಡಿತ್ತು. ಈ ವಿಚಾರವನ್ನು ಇವರಿಬ್ಬರು ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಮತ್ತೆ ಸಿನಿ ವಿಮರ್ಶಕರೊಬ್ಬರ ಕಡೆಯಿಂದ ಕಡೆಯಿಂದ ಸಿಹಿ ಸುದ್ದಿಯೊಂದ ಸಿಕ್ಕಿದೆ.

‘ಆದಿಪುರುಷ್’ ಜೋಡಿಯ ಬಗ್ಗೆ‌ ಸಿನಿಮಾ ವಿಮರ್ಶಕ ಉಮೇಶ್ ಸಂಧು ಇತ್ತೀಚೆಗೆ ಮಾಡಿರುವ ಟ್ವಿಟ್ ಒಂದು ಸಾಕಷ್ಟು ವೈರಲ್ ಆಗಿದೆ. ಪ್ರಭಾಸ್ ಹಾಗೂ ಕೃತಿ ಮುಂದಿನ ವಾರ ಮಾಲ್ಡೀವ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಉಮೇಶ್ ಸಂಧು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಉಮೇಶ್ ಸಂಧು ಟ್ವಿಟ್ಟ್ ಬಗ್ಗೆ ಮಾತನಾಡಿರುವ ನೆಟ್ಟಿಗರು ‘ನಿಶ್ಚಿತಾರ್ಥದ ವಿಚಾರ ಸ್ವತಃ ಪ್ರಭಾಸ್-ಕೃತಿಗೆ ತಿಳಿದಿಲ್ಲ’ ಎಂದು ಕಾಲೆಳೆದಿದ್ದಾರೆ‌. ಆದರೆ ಈ ವಿಚಾರ ನಿಜವೋ ಸುಳ್ಳೋ ಎಂಬುದನ್ನು ಪ್ರಭಾಸ್ ಅಥವಾ ಕೃತಿ ಇನ್ನಷ್ಟೇ ಸ್ಪಷ್ಟ ಪಡಿಸಬೇಕಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *