
ಸೆ.24ರಂದು ಹಸೆಮಣೆ ಏರಲಿದ್ದಾರೆ ಪರಿಣಿತಿ-ರಾಘವ್ – ಐಷಾರಾಮಿ ಹೋಟೆಲ್ ನಲ್ಲಿ ನಡೆಯಲಿದೆ ಮದುವೆ, ಗೆಸ್ಟ್ ಯಾರೆಲ್ಲ ಗೊತ್ತಾ?
- ಮನರಂಜನೆ
- September 7, 2023
- No Comment
- 36
ನ್ಯೂಸ್ ಆ್ಯರೋ : ಪ್ರೀತಿಯಲ್ಲಿದ್ದ ಸ್ಟಾರ್ ಜೋಡಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ಮದುವೆ ಡೇಟ್ ಫಿಕ್ಸ್ ಆಗಿದೆ. ಸೆಪ್ಟೆಂಬರ್ 24ರಂದು ರಾಜಸ್ಥಾನದ ಉದಯ್‌ಪುರ್‌ನಲ್ಲಿ ಇವರ ಮದುವೆಯ ನಡೆಯಲಿದೆ. ಇದೀಗ ಮದುವೆ ಆಮಂತ್ರಣ ಕೂಡಾ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾರ್ವಜನಿಕವಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಇವರು ಪ್ರೀತಿಯಲ್ಲಿದ್ದಾರೆಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಯಾವುದಕ್ಕೂ ಪ್ರತಿಕ್ರಿಯಿಸದ ಜೋಡಿ, ಈಚೆಗೆ ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಪ್ರೀತಿಯನ್ನು ಅಧಿಕೃತ ಮಾಡಿಕೊಂಡಿದ್ದಾರೆ. ಇವರ ಮದುವೆಯ ಕಾರ್ಯಕ್ರಮಗಳು ಸೆಪ್ಟೆಂಬರ್ 17ರಿಂದ 24ವರೆಗೆ ನಡೆಯಲಿದೆ.
ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಾಗ ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂದು ಜೋರಾಗಿ ಸುದ್ದಿ ಹರಡಿತ್ತು. ಕೊನೆಗೆ ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರಾ ಟ್ವೀಟ್ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಸ್ಟಾರ್ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲು ಸಿದ್ಧರಾಗಿದ್ದಾರೆ.
ಸೋರಿಕೆಯಾದ ಮದುವೆಯ ಆರತಕ್ಷತೆ ಆಮಂತ್ರಣದಲ್ಲಿ, “ರಾಘವ್ ಚಡ್ಡಾ ಅವರ ಪೋಷಕರು ಅಲ್ಕಾ ಮತ್ತು ಸುನೀಲ್ ಚಡ್ಡಾ ಅವರು ತಮ್ಮ ಮಗ ‘ರಾಘವ್ ಮತ್ತು ಪವನ್ ಚೋಪ್ರಾ ಹಾಗೂ ರೀನಾ ದಂಪತಿಯ ಮಗಳು ಪರಿಣಿತಿ ಅವರ ಆರತಕ್ಷತೆಯನ್ನು ಸೆಪ್ಟೆಂಬರ್ 30ರಂದು ತಾಜ್ ಚಂಡೀಗಢದಲ್ಲಿ ಆರತಕ್ಷತೆ ಊಟಕ್ಕೆ ನಿಮ್ಮನ್ನು ಆಹ್ವಾನಿಸಿದ್ದಾರೆ.” ಎಂದು ಬರೆಯಲಾಗಿದೆ.
ಸರೋವರದ ಮೇಲಿನ ಐಷಾರಾಮಿ ಹೊಟೇಲ್‌ನಲ್ಲಿ ಮದುವೆ:
ಸೆಪ್ಟೆಂಬರ್ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಮದುವೆ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪಿಚೋಲಾ ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆಯಲಿದೆ. ಈ ಹೋಟೆಲ್ನ ದಿನದ ಬಾಡಿಗೆ ಗರಿಷ್ಠ 10 ಲಕ್ಷದವರೆಗೆ ಇದೆ. ಈ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ವಿವಾಹದ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಅದ್ದೂರಿ ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ನ ಸಿಎಂ ಭಗವಂತ್ ಸಿಂಗ್ ಮಾನ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದೆ.
ಹಳದಿ ಶಾಸ್ತ್ರ, ಮೆಹಂದಿ ಮತ್ತು ಸಂಗೀತವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ. ಮದುವೆಯ ನಂತರ, ಚಂಡೀಘರ್ ನ ತಾಜ್ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.