ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಮತ್ತೆ ಧ್ವನಿಯೆತ್ತಿದ ನಟಿ – ದಾದಾಸಾಹೇಬ್‌ ಫಾಲ್ಕೆ ಚಿತ್ರೋತ್ಸವದ ಪ್ರಶಸ್ತಿಗಳ ಆಯ್ಕೆಗೆ ಕಂಗನಾ ಅಪಸ್ವರ

ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಮತ್ತೆ ಧ್ವನಿಯೆತ್ತಿದ ನಟಿ – ದಾದಾಸಾಹೇಬ್‌ ಫಾಲ್ಕೆ ಚಿತ್ರೋತ್ಸವದ ಪ್ರಶಸ್ತಿಗಳ ಆಯ್ಕೆಗೆ ಕಂಗನಾ ಅಪಸ್ವರ

ನ್ಯೂಸ್‌ ಆ್ಯರೋ: ಕಂಗನಾ ರಣಾವತ್ ಅವರು ಮತ್ತೊಮ್ಮೆ ಬಾಲಿವುಡ್ ವಿರುದ್ಧ ಮಾತಿನ ಪ್ರಹಾರ ಶುರು ಮಾಡಿದ್ದಾರೆ. ಟ್ವೀಟ್ ಮೂಲಕ ಅವರು ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ತಮಗೆ ಅನ್ನಿಸಿದ್ದನ್ನು ಹಿಂದು ಮುಂದು ನೋಡದೆ ಥಟ್‌ ಅಂತ ಹೇಳಿ ಅನೇಕ ಬಾರಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಬಗ್ಗೆ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ತಪ್ಪಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಗನಾ ರಣಾವತ್‌ ಮೊದಲಿನಿಂದಲೂ ನೆಪೋಟಿಸಂ ವಿರುದ್ಧ ನಿಂತಿದ್ದಾರೆ. ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ಆತ್ಮಹತ್ಯೆ ಮಾಡಿಕೊಂಡಾಗಲಂತೂ ಬಾಲಿವುಡ್‌ ವ್ಯವಸ್ಥೆ ವಿರುದ್ಧ ತಿರುಗಿ ಬಿದ್ದಿದ್ದರು. ನೇರವಾಗಿಯೇ ಕೆಲವು ನಟ-ನಟಿಯರ ಹೆಸರು ಹೇಳಿ, ಬಾಲಿವುಡ್‌ನಲ್ಲಿ ನೆಪೋಟಿಸಂ ಸಮಸ್ಯೆಯಿಂದಲೇ ಸುಶಾಂತ್‌ನಂತಹ ಪ್ರತಿಭೆಗಳಿಗೆ ಅವಕಾಶ ದೊರೆಯದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ನೆಪೋಟಿಸಂ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದ್ದರು.

ಇದೀಗ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಇಬ್ಬರಿಗೂ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ದೊರೆತಿರುವುದರ ಬಗ್ಗೆ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಪ್ರಕಾರ ಯಾರೆಲ್ಲಾ ಈ ಪ್ರಶಸ್ತಿಗೆ ಅರ್ಹರು ಎಂದು ಹೇಳಿದ್ದಾರೆ.

ಕಂಗನಾ ರಣಾವತ್‌ ಸಿದ್ಧಪಡಿಸಿರುವ ಲಿಸ್ಟ್‌

ಅತ್ಯುತ್ತಮ ನಟ – ರಿಷಬ್‌ ಶೆಟ್ಟಿ ( ಕಾಂತಾರ)

ಅತ್ಯುತ್ತಮ ನಟಿ – ಮೃಣಾಲ್‌ ಠಾಕೂರ್‌ ( ಸೀತಾರಾಮಂ)

ಅತ್ಯುತ್ತಮ ನಿರ್ದೇಶಕ – ಎಸ್‌.ಎಸ್.‌ ರಾಜಮೌಳಿ ( ಆರ್‌ಆರ್‌ಆರ್‌)

ಅತ್ಯುತ್ತಮ ಪೋಷಕ ನಟ – ಅನುಪಮ್‌ ಖೇರ್‌ ( ದಿ ಕಾಶ್ಮೀರ್‌ ಫೈಲ್ಸ್)‌

ಅತ್ಯುತ್ತಮ ಪೋಷಕ ನಟಿ – ತಬು ( ದೃಶ್ಯಂ/ ಭೂಲ್‌ ಭುಲಯ್ಯ)

ಬಾಲಿವುಡ್‌ ನೀಡಿರುವ ಪ್ರಶಸ್ತಿ ಸರಿ ಇಲ್ಲ, ನನಗೆ ಸಮಯ ದೊರೆತಾಗ, ಯಾರೆಲ್ಲಾ ಈ ಪ್ರಶಸ್ತಿಗೆ ಅರ್ಹರು ಎಂದು ಸಂಪೂರ್ಣ ಲಿಸ್ಟ್‌ ತಯಾರಿಸುತ್ತೇನೆ, ಧನ್ಯವಾದಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಕಂಗನಾ ಪೋಸ್ಟ್‌ಗೆ ಪರ-ವಿರೋಧ ಕಮೆಂಟ್ಸ್‌ ಬರುತ್ತಿವೆ.

ಕಂಗನಾ ತಯಾರಿಸಿರುವ ಲಿಸ್ಟ್‌ನಲ್ಲಿ ರಿಷಬ್‌ ಶೆಟ್ಟಿ ಹಾಗೂ ಕಾಂತಾರ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಕಾಂತಾರ ಸಿನಿಮಾ ನೋಡಿದ್ದ ಕಂಗನಾ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೊದಲಿನಿಂದಲೂ ಕಂಗನಾ, ದಕ್ಷಿಣ ಸಿನಿಮಾಗಳು ಹಾಗೂ ಕಲಾವಿದರನ್ನು ಹೊಗಳುತ್ತಾ ಬಂದಿದ್ದಾರೆ. ಅಕ್ಟೋಬರ್‌ 20ರಂದು ಕಾಂತಾರ ಚಿತ್ರ ವೀಕ್ಷಿಸಿದ್ದ ಅವರು ಚಿತ್ರವನ್ನು ಹೊಗಳಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *