ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮೆನ್ಷನ್ ಆದ ನಟರ ಪಟ್ಟಿ ರಿಲೀಸ್: 10 ನಟರಲ್ಲಿ ಗುರುತಿಸಿಕೊಂಡ ಕನ್ನಡದ ಓರ್ವ ನಟ

ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮೆನ್ಷನ್ ಆದ ನಟರ ಪಟ್ಟಿ ರಿಲೀಸ್: 10 ನಟರಲ್ಲಿ ಗುರುತಿಸಿಕೊಂಡ ಕನ್ನಡದ ಓರ್ವ ನಟ

ನ್ಯೂಸ್‌ಆ್ಯರೋ: ಹಿಂದೆಲ್ಲ ಸಿನಿಮಾ ಕ್ಷೇತ್ರಕ್ಕೆ ಪರಿಚಯವಾಗುತ್ತಿದ್ದ ಹೊಸಬರ ಬಗ್ಗೆ ತಿಳಿಯುತ್ತಿದ್ದದ್ದು ಒಂದು ಸಿನಿಮಾ ಬಿಡುಗಡೆಯಾದ ನಂತರ. ಆದರೆ ಈಗ ಹಾಗಲ್ಲ ಹೊಸ ಹಾಡು, ಟೀಸರ್, ಟ್ರೇಲರ್, ಪರಿಚಯವಾಗುವ ಹೊಸಬರ ಮಾಹಿತಿ ತಕ್ಷಣದಲ್ಲೇ ಅಪ್ಡೇಡ್‌ ಆಗುತ್ತದೆ. ಸಿನಿಮಾವೊಂದರ ಏನೇ ಮಾಹಿತಿ ಇದ್ದರೂ ಚಿತ್ರತಂಡ ತಕ್ಷಣವೇ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತದೆ. ಡಿಜಿಟಲ್ ಮಾಧ್ಯಮ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದ ಹಾಗೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಖಾತೆಗಳನ್ನು ತೆರೆದು ಅಲ್ಲಿ ಪ್ರೀತಿ ತೋರಿಸುತ್ತಾರೆ.

ಅದರಲ್ಲಿಯೂ ಟ್ವಿಟರ್‌ನಲ್ಲಿ ಸಿನಿ ರಸಿಕರು ಹೆಚ್ಚು ಸಕ್ರಿಯರಾಗಿರುತ್ತಾರೆ. ತಮ್ಮ ನೆಚ್ಚಿನ ನಟರ ಕುರಿತು ಏನೇ ಅಪ್‌ಡೇಟ್ ಬಂದರೂ ಅದರ ಬಗ್ಗೆ ಹ್ಯಾಷ್‌ಟ್ಯಾಗ್ ಒಂದನ್ನು ಸೃಷ್ಟಿಸಿ ಟ್ವೀಟ್ ಮಾಡಿ ಅದನ್ನು ಟ್ರೆಂಡ್ ಮಾಡುತ್ತಾರೆ. ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ನಟರ ಪಟ್ಟಿ ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತದೆ.

ಸದ್ಯ ಕಳೆದ 30 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಅದ 10 ಭಾರತದ ನಟರ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಕನ್ನಡ ಸಿನಿಮಾರಂಗದ ಕೇವಲ ಓರ್ವ ನಟನ ಹೆಸರು ಮಾತ್ರ ಗುರುತಿಸಿಕೊಂಡಿದೆ. ಮಾಹಿತಿ ಮಾಹಿತಿ ಇಲ್ಲಿದೆ.

  1. ದಳಪತಿ ವಿಜಯ್ –
  2. ಅಜಿತ್ ಕುಮಾರ್
  3. ಶಾರುಖ್ ಖಾನ್
  4. ಎನ್‌ಟಿಆರ್
  5. ಧನುಷ್
  6. ಪವನ್ ಕಲ್ಯಾಣ್
  7. ಸಲ್ಮಾನ್ ಖಾನ್
  8. ಪ್ರಭಾಸ್
  9. ರಾಮ್ ಚರಣ್
  10. ಡಿ ಬಾಸ್

30 ದಿನಗಳಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ ಹತ್ತು ನಟರ ಪಟ್ಟಿಯಲ್ಲಿ ದರ್ಶನ್‌ ಸ್ಥಾನ ಪಡೆದುಕೊಂಡಿದ್ದು, ಏಕೈಕ ನಟ ಎಂದು ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಈಚೆಗೆ ತಮ್ಮ 46ನೇ ಹುಟ್ಟುಹಬ್ಬ ಹಾಗೂ ವರ ಅಭಿನಯದ ಕ್ರಾಂತಿ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಇನ್ನುಳಿದಂತೆ ವಿಜಯ್, ಅಜಿತ್ ಹಾಗೂ ಶಾರುಖ್ ಖಾನ್ ನಟನೆಯ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದ ಕಾರಣ ಇವರು ಹೆಸರುಗಳು ಹೆಚ್ಚು ಮೆನ್ಷನ್ ಆಗಿದೆ ಎನ್ನಲಾಗಿದೆ.

ಆರ್‌ಆರ್‌ಆರ್‌ ಚಿತ್ರಕ್ಕೆ ಈಚೆಗೆ ಪ್ರಶಸ್ತಿಗಳು ಲಭಿಸಿದ್ದರಿಂದ ಎನ್‌ಟಿಆರ್ ಹಾಗೂ ರಾಮ್‌ ಚರಣ್ ಅವರ ಹೆಸರು ಅತೀಹೆಚ್ಚು ಬಾರಿ ಗುರುತಿಸಿಕೊಂಡಿದೆ. ಧನುಷ್ ಸಹ ತಮ್ಮ ಚಿತ್ರ ಬಿಡುಗಡೆಯಾದ ಕಾರಣ ಈ ಪಟ್ಟಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದ ಕಾರಣ ಮೆನ್ಷನ್ ಆಗಿದ್ದಾರೆ. ಇನ್ನು ಪ್ರಭಾಸ್ ಹಾಗೂ ಪವನ್ ಕಲ್ಯಾಣ್ ತಮ್ಮ ಮುಂದಿನ ಚಿತ್ರಗಳ ವಿಚಾರವಾಗಿ ಹೆಚ್ಚು ಪ್ರಚಾರದಲ್ಲಿ ತೊಡಗಿರುವ ಕಾರಣ ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *