ರಿಲೀಸ್ ಆಗಿ ತಿಂಗಳೊಳಗೆ ಓಟಿಟಿಗೆ ಬರಲು ರೆಡಿಯಾದ ಕ್ರಾಂತಿ: ಹಿಟ್ ಸಿನಿಮಾ ವೇದ, ವಿ ರೋಣ, ಕೆಜಿಎಫ್ 2, ಕಾಂತಾರ ಎಷ್ಟು ದಿನಕ್ಕೆ ಬಂದಿದ್ದು ಗೊತ್ತಾ?

ರಿಲೀಸ್ ಆಗಿ ತಿಂಗಳೊಳಗೆ ಓಟಿಟಿಗೆ ಬರಲು ರೆಡಿಯಾದ ಕ್ರಾಂತಿ: ಹಿಟ್ ಸಿನಿಮಾ ವೇದ, ವಿ ರೋಣ, ಕೆಜಿಎಫ್ 2, ಕಾಂತಾರ ಎಷ್ಟು ದಿನಕ್ಕೆ ಬಂದಿದ್ದು ಗೊತ್ತಾ?

ನ್ಯೂಸ್‌ಆ್ಯರೋ: ಮೊಬೈಲ್‌ ಬಳಕೆ ಹೆಚ್ಚಾಗುತ್ತಿದ್ದ ಹಾಗೇ ಜನರಿಗೆ ಎಲ್ಲನೂ ಸುಲಭದಲ್ಲಿ ಕೈಗೆಟಕುವ ಹಾಗೇ ಮಾಡಿದೆ. ಹಿಂದೆಲ್ಲ ಸಿನಿಮಾ ಬಂದರೇ ಚಿತ್ರಮಂದಿರಕ್ಕೆಯೇ ಹೋಗಿ ನೋಡಬೇಕಿತ್ತು. ಇಲ್ಲದಿದ್ದರೆ ಟಿವಿಯಲ್ಲಿ ಪ್ರದರ್ಶನವಾಗಬೇಕಿತ್ತು. ಆದರೆ ಪ್ರಸ್ತುತ ಕಾಲಘಟ್ಟ ಹಾಗಿಲ್ಲ. ಒಟಿಟಿ ಎಂಬ ವೇದಿಕೆ ರಿಲೀಸ್‌ ಆದ ಸಿನಿಮಾವನ್ನು ಶೀಘ್ರದಲ್ಲೇ ನೋಡುವಂತೆ ಮಾಡಿದೆ. ಇದರಿಂದ ಸಿನಿಮಾ ಚಿತ್ರಮಂದಿರಗಳಲ್ಲಿ ಸೋತಿದ್ದರೆ ಕೆಲವೊಮ್ಮೆ ಬಾರಿ ಒಟಿಟಿ ಮೂಲಕ ಗೆಲ್ಲುವುದುಂಟು.

ಹೀಗೆ ದಿನದಿಂದ ದಿನಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವ ಓಟಿಟಿಗೆ ಇಂದು ಚಿತ್ರಮಂದಿ ಹೊಂದಿಕೊಂಡಿದ್ದಾರೆ. ಅದೆಷ್ಟೋ ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಚಿತ್ರಗಳನ್ನು ಇಂತಿಷ್ಟು ದಿನಗಳ ನಂತರ ಓಟಿಟಿಯಲ್ಲಿ ಸ್ಟ್ರೀಮ್ ಮಾಡುವುದಾಗಿ ಓಟಿಟಿ ಅಪ್ಲಿಕೇಶನ್‌ನವರು ಚಿತ್ರತಂಡದ ಜೊತೆ ಒಪ್ಪಂದ ಮಾಡಿಕೊಂಡು ಸಿನಿಮಾವನ್ನು ಬಿಡುಗಡೆ ಮಾಡುತ್ತಾರೆ.

ಚಿತ್ರಮಂದಿರದಲ್ಲಿ ಒಳ್ಳೆಯ ಗಳಿಕೆ ಮಾಡಿದರೆ ನಿಗದಿತ ದಿನಕ್ಕಿಂತ ತುಸು ನಿಧಾನವಾಗಿ ಆ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕಾಂತಾರ. ಇನ್ನು ಸದ್ಯ ಕ್ರಾಂತಿ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕವೂ ಸಹ ಘೋಷಣೆಯಾಗಿದ್ದು, ಚಿತ್ರ ಫೆಬ್ರವರಿ 23ರಿಂದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗಲಿದೆ. ಕಳೆದ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಕ್ರಾಂತಿ ಚಿತ್ರ ತಿಂಗಳಿಗೂ ಮುನ್ನವೇ ಓಟಿಟಿಗೆ ಬರುತ್ತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು ಕನ್ನಡದ ಸ್ಟಾರ್ ನಟರ ಕೊನೆಯ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಎಷ್ಟು ದಿನಗಳ ಬಳಿಕ ಓಟಿಟಿಗೆ ಲಗ್ಗೆ ಇಟ್ಟವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ವಿಕ್ರಾಂತ್ ರೋಣ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರವಾಗಿದ್ದ ವಿಕ್ರಾಂತ್ ರೋಣ ಕಳೆದ ವರ್ಷದ ಜುಲೈ 22ರಂದು ಭರ್ಜರಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 2ರಂದು ಜೀ 5ನಲ್ಲಿ ಸ್ಟ್ರೀಮ್ ಆಗಿತ್ತು. ಈ ಮೂಲಕ ಚಿತ್ರಮಂದಿರಗಳಲ್ಲಿ 37 ದಿನಗಳ ಪ್ರದರ್ಶನ ಕಂಡ ಬಳಿಕ ವಿಕ್ರಾಂತ್ ರೋಣ ಓಟಿಟಿಗೆ ಲಗ್ಗೆ ಇಟ್ಟಿತ್ತು.

ಕೆಜಿಎಫ್ ಚಾಪ್ಟರ್ 2

ಭಾರತದ ಚಿತ್ರ ಎಂಬ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜೂನ್ 3ರಂದು ಓಟಿಟಿಗೆ ಬಂದಿತ್ತು. ಈ ಮೂಲಕ ಸರಿಯಾಗಿ 50 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕೆಜಿಎಫ್ ಚಾಪ್ಟರ್ 2 ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು.

ಜೇಮ್ಸ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಳೆದ ವರ್ಷ ಮಾರ್ಚ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿತ್ತು. ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾದ ಈ ಚಿತ್ರ ಏಪ್ರಿಲ್ 14ರಂದು ಓಟಿಟಿಗೆ ಲಗ್ಗೆ ಇಟ್ಟಿತ್ತು. ಅಂದರೆ ಚಿತ್ರಮಂದಿರದಲ್ಲಿ 28 ದಿನಗಳ ಕಾಲ ಪ್ರದರ್ಶನಗೊಂಡ ಬಳಿಕ ಜೇಮ್ಸ್ ಸೋನಿ ಲಿವ್‌ನಲ್ಲಿ ಬಿಡುಗಡೆಗೊಂಡಿತ್ತು.

ವೇದ

ಎ ಹರ್ಷ ನಿರ್ದೇಶನದ, ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರ ಕಳೆದ ವರ್ಷದ ಡಿಸೆಂಬರ್ ತಿಂಗಳ 23ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಫೆಬ್ರವರಿ 10ರಿಂದ ಜೀ 5 ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗ್ತಿದೆ. ಈ ಮೂಲಕ 49 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಬಳಿಕ ವೇದ ಚಿತ್ರ ಓಟಿಟಿಗೆ ಬಂದಿತ್ತು.

ಹೀಗೆ ಒಟಿಟಿ ವೇದಿಕೆಗಳು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದು, ಇದು ಮನರಂಜನಾ ಉದ್ಯಮವನ್ನು ಹೆಚ್ಚು ಸೃಜನಾತ್ಮಕವಾಗಿಯೂ, ಸ್ಪರ್ಧಾತ್ಮಕವಾಗಿಯೂ ಬೆಳೆಸಲು ನೆರವಾಗಲಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *