ಕೊನೆಗೂ ಲೋಕಾರ್ಪಣೆಗೊಂಡಿದೆ ವಿಷ್ಣುವರ್ಧನ್ ಸ್ಮಾರಕ – ಸಾಹಸ ಸಿಂಹನ ಸ್ಮಾರಕ ಹೇಗಿದೆ ಗೊತ್ತಾ…?

ಕೊನೆಗೂ ಲೋಕಾರ್ಪಣೆಗೊಂಡಿದೆ ವಿಷ್ಣುವರ್ಧನ್ ಸ್ಮಾರಕ – ಸಾಹಸ ಸಿಂಹನ ಸ್ಮಾರಕ ಹೇಗಿದೆ ಗೊತ್ತಾ…?

ನ್ಯೂಸ್ ಆ್ಯರೋ : ಸಾಹಸ ಸಿಂಹ, ಅಭಿನಯ ಭಾರ್ಗವ ಎಂದೆಲ್ಲ ಕನ್ನಡಿಗರಿಂದ ಕರೆಸಿಕೊಂಡ ಹೆಸರಾಂತ ನಟ ಡಾ.ವಿಷ್ಣುವರ್ಧನ್ ಅವರು ಇಹಲೋಕ ತ್ಯಜಿಸಿದ 13 ವರ್ಷಗಳ ನಂತರ, ಇದೀಗ ವಿಷ್ಣು ಸ್ಮಾರಕ ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.

ವಿಷ್ಣು 2009 ರಲ್ಲಿ ನಿಧನರಾಗಿದ್ದರು. ಆಗಿನಿಂದಲೇ ಅಭಿಮಾನಿಗಳು, ಬೆಂಗಳೂರಿನ‌ ಅಭಿಮಾನ್ ಸ್ಟೂಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಿಸುವಂತೆ ಆಗ್ರಹಿಸಿದ್ದರು. ಆ ಕಾಲದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಮಾರಕಕ್ಕೆ ಶಂಕು ಸ್ಥಾಪನೆ‌ ನೆರವೇರಿಸಿದ್ದರು. ಒಂದು‌ ಕೋಟಿ ಅನುದಾನ‌ ಹಾಗೂ 2ಎಕರೆ ಜಾಗವನ್ನು‌ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅಭಿಮಾನ್ ಸ್ಟೂಡಿಯೋದ ಜಾಗದಲ್ಲಿ ನಮ್ಮದೂ ಪಾಲಿದೆ ಎಂಬ ಆಗ್ರಹದೊಂದಿಗೆ ಹಿರಿಯ ನಟ ಬಾಲಣ್ಣ ಅವರ ಪುತ್ರಿ ಕೋರ್ಟ್ ಮೆಟ್ಟಿಲೇರಿದ್ದರು. ಆ ಕಾರಣ ವಿಷ್ಣು ಸ್ಮಾರಕ ವಿವಾದಕ್ಕೆ ಒಳಗಾಗಿ ಸ್ಥಗಿತವಾಯಿತು.

ಈ ನಂತರ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು, ವಿಷ್ಣು ಆಡಿಬೆಳೆದ ಮೈಸೂರಿನಲ್ಲಿ‌ ಸ್ಮಾರಕ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು. ಈ ಬೇಡಿಕೆಗೆ ಮನ್ನಣೆ ನೀಡಿದ ಸರ್ಕಾರ 5ಎಕರೆ ಜಾಗವನ್ನು‌ ನೀಡಿದರು. ಆದರೆ ಅಲ್ಲೂ‌ ಕೂಡ ಜಾಗದ ವಿಚಾರದಲ್ಲಿ ತಕರಾರು ಬಂದಿತ್ತು. ಅನಂತರ‌ 2020ರಲ್ಲಿ ವಿಷ್ಣು ಸ್ಮಾರಕದ ಕಾಮಗಾರಿ ಆಭವಾಯ್ತು.

ವಿಷ್ಣು ಹುಟ್ಟು ಮತ್ತು ಸಾಧನೆ

ಮೈಸೂರಿನ ಚಾಮುಂಡಿಪುಂ ನಲ್ಲಿ ನಾರಾಯಣ ರಾವ್ ಹಾಗೂ ಕಾಮಾಕ್ಷಮ್ಮನ ಸುಪುತ್ರನಾಗಿ ಜನಿಸಿದ ಸಂಪತ್ ಕುಮಾರ್ ಮೈಸೂರಿನ ಲಕ್ಷ್ಮೀಪುರದಲ್ಲಿ ಎಂ .ವಿ.ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಮಾಧ್ಯಮಿಕ ಶಿಕ್ಷಣ, ನಂತರ ಬೆಂಗಳೂರಿನ ಚಾಮರಾಜಪೇಟೆಯ ಮಾಡೆಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು. ‘ವಂಶವೃಕ್ಷ’ ಸಿನಿಮಾ‌ ಮೂಲಕ ಸಿನಿ‌ ಜಗತ್ತಿಗೆ ಪಾದಾರ್ಪಣೆ ಮಾಡಿದ ವಿಷ್ಣು ಅನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ನಾಗರಹಾವು, ಯಜಮಾನ, ಸಿಂಹಾದ್ರಿಯ‌ ಸಿಂಹ, ಸಾಹುಕಾರ, ಸೂರ್ಯವಂಶ, ಜಮೀನ್ದಾರು, ಆಪ್ತಮಿತ್ರ ಇತ್ಯಾದಿ 200 ಕ್ಕೂ ಹೆಚ್ಚು ಸಿನಿಮಾಗಳ ಮೂಲಕ, ಇಂದಿಗೂ ಕೂಡ ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿದ್ದಾರೆ.

ಸ್ಮಾರಕದ ವಿಶೇಷತೆಗಳು

ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ನಟ ವಿಷ್ಣುವರ್ಧನ್ ಅವರ ಸ್ಮಾರಕ ಅತ್ಯಂತ ಸುಂದರವಾಗಿದೆ. ಖಡ್ಗ ಧರಿಸುವುದು ವಿಷ್ಣು ಅವರ ಅಭ್ಯಾಸವಾಗಿತ್ತು, ಅದೇ ಮಾದರಿಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. 7 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪ್ರತಿಮೆಯನ್ನೂ ನಿರ್ಮಿಸಲಾಗಿದೆ. ಜೊತೆಗೆ ವಿಷ್ಣು ಅವರ ಜೀವನ 600 ಕ್ಕೂ ಹೆಚ್ಚು ಭಾವಚಿತ್ರಗಳಿರುವ ಫೋಟೋ‌ ಗ್ಯಾಲರಿ‌ ನಿರ್ಮಿಸಲಾಗಿದೆ. ಇನ್ನುಳಿದಂತೆ, ಸಿನಿಮಾ ಮಂದಿರ, ನಾಟಕ ಶಾಲೆಗಳನ್ನು ನಿರ್ಮಿಸಲಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *