
ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದ ‘ಜೈಲರ್’ – ನಟ ರಜನಿಕಾಂತ್, ನಿರ್ದೇಶಕ ನೆಲ್ಸನ್‌ಗೆ ಕೋಟಿ ಮೌಲ್ಯದ ಉಡುಗೊರೆ
- ಮನರಂಜನೆ
- September 2, 2023
- No Comment
- 54
ನ್ಯೂಸ್ ಆ್ಯರೋ : ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ಕಲೆಕ್ಷನ್ ಮಾಡಿ ದಾಖಲೆಯನ್ನು ಸೃಷ್ಟಿಸಿದೆ. ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿರುವ ಖುಷಿಯಲ್ಲಿ ಚಿತ್ರ ನಿರ್ಮಾಪಕ ಕಲಾನಿತಿ ಮಾರನ್ ಅವರು ಚಿತ್ರದ ನಿರ್ದೇಶಕ ನೆಲ್ಸನ್ ಹಾಗೂ ರಜನಿಕಾಂತ್ ಇಬ್ಬರಿಗೂ ಸರ್‌ಪ್ರೈಸ್ ಆಗಿ ದುಬಾರಿ ಗಿಫ್ಟ್ ನೀಡಿದ್ದಾರೆ.
ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ರಜನಿಕಾಂತ್ ಇಬ್ಬರಿಗೂ ‘ಜೈಲರ್’ ಕಂಬ್ಯಾಕ್ ಸಿನಿಮಾವೆಂದೇ ಹೇಳಬಹುದು. ‘ಬೀಸ್ಟ್’ ಸೋಲಿನಿಂದ ಟೀಕೆಗೆ ಒಳಗಾಗಿದ್ದ ನೆಲ್ಸನ್ ‘ಜೈಲರ್’ ಇವರಿಗೆ ಮರುಜೀವ ಕೊಟ್ಟಿದೆ ಅಂತಾ ಹೇಳಿದ್ರೆ ತಪ್ಪಾಗಲ್ಲ.
ಸನ್ ಪಿಕ್ಚರ್ಸ್ ಸಿಇಒ ಕಲಾನಿತಿ ಮಾರನ್ ಅವರು ಇತ್ತೀಚೆಗೆ ‘ತಲೈವಾ’ ಅವರನ್ನು ಚೆನ್ನೈನ ಪೋಯಸ್ ಗಾರ್ಡನ್ ಮನೆಯಲ್ಲಿ ಭೇಟಿ ಮಾಡಿ ಸಿನಿಮಾದ ಲಾಭಾಂಶದ ಚೆಕ್ ಹಾಗೂ ‘ಬಿಎಂಡ್ಲ್ಯುಎಕ್ಸ್ 7’ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಂದಾಜು 100 ಕೋಟಿ ರೂಪಾಯಿಯ ಚೆಕ್ ನ್ನು ರಜಿನಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.


ಇದಲ್ಲದೆ ಕಲಾನಿತಿ ಮಾರನ್ ಅವರು ‘ಜೈಲರ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಭೇಟಿಯಾಗಿ ದುಬಾರಿ ಗಿಫ್ಟ್ ನ್ನು ನೀಡಿದ್ದಾರೆ.
ಜಗತ್ತಿನಲ್ಲಿ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಬ್ಲ್ಯಾಕ್ ಪೋರ್ಷೆ ಕಾರನ್ನು ಹಾಗೂ ಸಿನಿಮಾದ ಲಾಭಾಂಶದ ಚೆಕ್ ನ್ನು ನೆಲ್ಸನ್ ಅವರಿಗೆ ನೀಡಿದ್ದಾರೆ. ಸನ್ ಪಿಕ್ಚರ್ಸ್ ನಟ, ನಿರ್ದೇಶಕನಿಗೆ ನೀಡಿರುವ ಗಿಫ್ಟ್ ನ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.