ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿದ್ದು ನಿಜಾನಾ..!? – ಟಾಲಿವುಡ್ ನಲ್ಲಿ ಗುಸು ಗುಸು ಸುದ್ದಿಯಾಗುತ್ತಿರೋದೇನು?

ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿದ್ದು ನಿಜಾನಾ..!? – ಟಾಲಿವುಡ್ ನಲ್ಲಿ ಗುಸು ಗುಸು ಸುದ್ದಿಯಾಗುತ್ತಿರೋದೇನು?

ನ್ಯೂಸ್ ಆ್ಯರೋ‌ : ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕಳೆದೊಂದು ವರ್ಷದಿಂದ ಭಾರಿ ಸುದ್ದಿಯಲ್ಲಿದ್ದಾರೆ. ಲಿಪ್‌ಲಾಕ್‌, ಮದ್ವೆ, ಹನಿಮೂನ್ ಅಂತ ಈ ನರೇಶ್- ಪವಿತ್ರಾ ಜೋಡಿಯ ವೈಯಕ್ತಿಕ ಜೀವನದ ವಿಚಾರಗಳ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ 3 ಮದುವೆ ಆಗಿರುವ ನರೇಶ್ ನಟಿ ಪವಿತ್ರಾ ಲೋಕೇಶ್ ಜೊತೆ ಸುತ್ತಾಟ ನಡೆಸುತ್ತಿರುವುದು ಹಳೇ ಸುದ್ದಿ. ಆದ್ರೀಗ ನರೇಶ್- ಪವಿತ್ರಾ ಸೆಕೆಂಡ್ ಇನ್ನಿಂಗ್ಸ್ ಬಗ್ಗೆ ಹೊಸ ಅಪ್ಡೇಡ್ಸ್ ಸಿಕ್ಕಿದೆ.

ಕಳೆದ ವರ್ಷ ಮೈಸೂರಿನ ಹೋಟೆಲ್‌ವೊಂದರಲ್ಲಿ ನರೇಶ್- ಪವಿತ್ರಾ ಒಟ್ಟಿಗೆ ಕೈಗೆ ಸಿಕ್ಕಿಬಿದ್ದು ಭಾರೀ ಹೈಡ್ರಾಮಾ ನಡೆದಿತ್ತು. ನರೇಶ್ ತನ್ನ ಪತ್ನಿ ರಮ್ಯಾ ರಘುಪತಿ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಕದ್ದು ಮುಚ್ಚಿ ನಡೆಯುತ್ತಿದ್ದ ನರೇಶ್-ಪವಿತ್ರಾ ಲವ್ವಿಡವ್ವಿ ವಿಚಾರ ಆ ದಿನ ಜಗತ್‌ಜಾಹೀರಾಗಿತ್ತು. ಬಳಿಕ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಹೊಸ ವರ್ಷದ ಸಂಭ್ರಮದಲ್ಲಿ ಪವಿತ್ರಾ ಜೊತೆ ಲಿಪ್‌ಲಾಕ್ ಮಾಡಿ ವಿಡಿಯೋ ರಿಲೀಸ್ ಮಾಡಿದ್ದ, ನರೇಶ್ ಬಳಿಕ ಮದುವೆ ವಿಡಿಯೋ ಶೇರ್ ಮಾಡಿದ್ದರು. ಅಷ್ಟೇ ಅಲ್ಲ, ಈ ಜೋಡಿ ದುಬೈಗೆ ಹನಿಮೂನ್’ಗೆ ಹೋಗಿ ಬಂದಿರುವುದಾಗಿ ವಿಡಿಯೋ ಹಂಚಿಕೊಂಡಿದ್ದರು.

ಈಗಾಗಲೇ ಮೂರು ಮದುವೆಯಾಗಿರುವ ನರೇಶ್’ಗೆ 3ನೇ ಪತ್ನಿ ರಮ್ಯಾ ಇನ್ನೂ ವಿಚ್ಚೇದನ ಕೊಟ್ಟಿಲ್ಲ. ನರೇಶ್ ಡಿವೋರ್ಸ್’ಗಾಗಿ ಕೋರ್ಟ್ ಮೆಟ್ಟಿಲೇರಿದ್ದರೂ, ವಿಚ್ಛೇದನ ನೀಡಲು ರಮ್ಯಾ ಒಪ್ಪಿಲ್ಲ. ಮಗನಿಗಾಗಿ ತಾನು ವಿಚ್ಛೇದನ ಕೊಡಲ್ಲ ಅಂತ ಹೇಳಿಕೊಂಡಿದ್ದಾರೆ. ಆದ್ರೆ ನರೇಶ್ ಮಾತ್ರ ಪವಿತ್ರಾ ಲೋಕೇಶ್ ಜೊತೆ ಓಡಾಡುತ್ತಿದ್ದು, ವಿಡಿಯೋ ಶೇರ್ ಮಾಡುತ್ತಿದ್ದಾರೆ. ಅಲ್ಲದೇ, ನಾವಿಬ್ಬರೂ ಮದುವೆಯಾಗಿದ್ದೇವೆ ಎಂದು ನರೇಶ್ ವಿಡಿಯೋ ಹರಿಬಿಟ್ಟಿದ್ದಾರೆ.

ಆದ್ರೆ ಇದೀಗ ನರೇಶ್ ಇದನ್ನೆಲ್ಲಾ ಬೇರೆಯೇ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ. ನರೇಶ್- ಪವಿತ್ರಾ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಆ ಸಿನಿಮಾ ಪ್ರಮೋಷನ್‌ ಭಾಗವಾಗಿ ಹೀಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ತೆಲುಗು ನಟ ನರೇಶ್ ಸಿನಿಮಾ ಪ್ರಮೋಷನ್ ಸ್ಟ್ರ್ಯಾಟಜಿ ಪ್ರಕಾರ ಒಂದೊಂದೇ ವಿಡಿಯೋ ತೇಲಿ ಬಿಡುತ್ತಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.

ನರೇಶ್- ರಮ್ಯಾ ಇನ್ನೂ ವಿಚ್ಛೇದನ ಪಡೆದಿಲ್ಲ, ಹಾಗಿರುವಾಗ ನರೇಶ್ ಪವಿತ್ರಾ ಲೋಕೇಶ್’ರನ್ನು ಮದುವೆಯಾಗಲು ಹೇಗೆ ಸಾಧ್ಯ? ಇದು ಸಿನಿಮಾ ಬಗ್ಗೆ ಕ್ರೇಜ್ ಸೃಷ್ಟಿಸಲು ಚಿತ್ರತಂಡದ ಪ್ಲಾನ್ ಅಂತ ಟಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ನರೇಶ್ ಹಾಗೂ ಪವಿತ್ರ ಲೋಕೇಶ್ ನಟನೆಯ ‘ಸೆಕೆಂಡ್ ಇನ್ನಿಂಗ್ಸ್’ ಸಿನಿಮಾ ಸೆಟ್ಟೇರಿದೆಯಂತೆ. ಈ ಚಿತ್ರವನ್ನು ಸ್ವತಃ ನರೇಶ್ ನಿರ್ಮಿಸುತ್ತಿದ್ದು, ಎಂ.ಎಸ್. ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾದ ಪ್ರಮೋಷನ್ ಭಾಗವಾಗಿ ಲಿಪ್‌ಲಾಕ್, ಮದುವೆ, ಹನಿಮೂನ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

‘ಸೆಕೆಂಡ್ ಇನ್ನಿಂಗ್ಸ್’ ಪೋಸ್ಟರ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಮೊದಲ ಮದುವೆ ಮುರಿದು ಬಿದ್ದ ಜೋಡಿ ಸಹಜೀವನ ನಡೆಸಿ ನಂತರ ಮದುವೆ ಆಗುವ ಕಥೆಯನ್ನು ಆದರಿಸಿ ಸಿನಿಮಾ ಮಾಡಲಾಗುತ್ತಿದೆಯಂತೆ. ನರೇಶ್’ಗೆ ಮದುವೆ ಬಗ್ಗೆ ಕೇಳಿದಾಗ ಸುದ್ದಿಗೋಷ್ಟಿ ಮಾಡುವುದಾಗಿ ಹೇಳಿದ್ದರು. ಅದು ‘ಸೆಕೆಂಡ್ ಇನ್ನಿಂಗ್ಸ್’ ಸಿನಿಮಾ ಸುದ್ದಿಗೋಷ್ಠಿ ಎನ್ನಲಾಗ್ತಿದೆ. ಸದ್ಯಕ್ಕೆ ಈ ಬಗ್ಗೆ ಟಾಲಿವುಡ್’ನಲ್ಲಿ ಗುಸುಗುಸು ಕೇಳಿ ಬರ್ತಿದ್ದು, ನಿಜಕ್ಕೂ ಇದು ಸಿನಿಮಾವೋ ಅಥವಾ ನರೇಶ್-ಪವಿತ್ರಾ ಲೋಕೋಶ್ ನಿಜ ಜೀವನದ ಕಥೆಯೋ ಎನ್ನುವ ಬಗ್ಗೆ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *