
ಬಂಧನದ ಭೀತಿಯಲ್ಲಿದ್ದಾರೆ ಬಹುಭಾಷಾ ತಾರೆ ನವ್ಯಾ ನಾಯರ್ – ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಟಿ ಸಿಕ್ಕಿಹಾಕಿಕೊಂಡಿದ್ದು ಹೇಗೆ?
- ಮನರಂಜನೆ
- September 2, 2023
- No Comment
- 73
ನ್ಯೂಸ್ ಆ್ಯರೋ : ಮನಿ ಲ್ಯಾಂಡರಿಂಗ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಅವರ ವಿಚಾರಣೆ ವೇಳೆ ಖ್ಯಾತ ನಟಿ ನವ್ಯಾ ನಾಯರ್ ಅವರ ಹೆಸರು ತಳುಕು ಹಾಕಿಕೊಂಡಿದ್ದು, ನಟಿಗೆ ಬಂಧನದ ಭೀತಿ ಎದುರಾಗಿದೆ.
ಅಕ್ರಮ ಹಣ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಕಂದಾಯ ಅಧಿಕಾರಿ ಜೊತೆ ನವ್ಯಾ ಅವರು ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಕಂದಾಯ ಅಧಿಕಾರಿ ಕೊಟ್ಟ ಗಿಫ್ಟ್ ಅನ್ನು ಇವರು ಸ್ವೀಕರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಸದ್ಯದಲ್ಲೇ ನವ್ಯಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ತನಿಖೆಯ ವೇಳೆ ನಟಿ ನವ್ಯಾ ನಾಯರ್ ಅವರಿಗೆ ಅಧಿಕಾರಿ ಸಚಿನ್ ಅವರು ಚಿನ್ನದ ಉಡುಗೊರೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದು, ಇಡಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ನವ್ಯಾ ಅವರನ್ನು ಮುಂಬೈಗೆ ಕರೆಯಿಸಿಕೊಂಡು ವಿಚಾರಣೆ ಮಾಡಿದ್ದಾರೆ. ನಟಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಇನ್ನೂ ವಿಚಾರಣೆ ವೇಳೆ ಸ್ನೇಹದ ಸಂಕೇತವಾಗಿ ನಾನು ಬಂಗಾರದ ಸರವನ್ನು ಉಡುಗೊರೆಯಾಗಿ ಪಡೆದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ನವ್ಯಾ ಭೇಟಿಗಾಗಿ ಸಚಿನ್ ಹಲವು ಬಾರಿ ಕೊಚ್ಚಿನ್ ಗೂ ಹೋಗಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ತನಿಖೆ ವೇಳೆ ಅಧಿಕಾರಿಯ ಮೊಬೈಲ್, ವಾಟ್ಸಪ್ ಡೇಟಾ ಪರಿಶೀಲಿಸಿದಾಗ ಇವೆಲ್ಲವೂ ಪತ್ತೆ ಆಗಿವೆ. ಈ ಕುರಿತು ನವ್ಯಾ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅದರಾಚೆ ಬೇರೆ ಏನೂ ಇಲ್ಲ ಎಂದು ಹೇಳಿದ್ದಾರೆ