
ಉರ್ಫಿ ಜಾವೇದ್ ಸತ್ತರೆ ಸ್ಮಶಾನದಲ್ಲೂ ಆಕೆಗೆ ಜಾಗ ಸಿಗಲ್ವಂತೆ – ಉರ್ಫಿ ಅಪರಾವತಾರ ವಿರೋಧಿಸಿ ಕಾನೂನು ಸಮರಕ್ಕೆ ಮುಂದಾದ ಫೈಜಾನ್ ಅನ್ಸಾರಿ
- ಮನರಂಜನೆ
- March 13, 2023
- No Comment
- 77
ನ್ಯೂಸ್ ಆ್ಯರೋ : ಬಾಲಿವುಡ್ ನಟಿ, ಮಾಡೆಲ್ ಉರ್ಫಿ ಜಾವೇದ್’ಗೆ ಸತ್ತರೆ ಸಶ್ಮಾನದಲ್ಲಿಯೂ ಜಾಗ ಸಿಗಲ್ವಂತೆ. ಹೀಗಂತ ಫೈಜಾನ್ ಅನ್ಸಾರಿ ಹೇಳಿದ್ದಾರೆ. ಉಡುಗೆ ತೊಡುಗೆ ಕಾರಣಕ್ಕೆ ಸದಾ ಟ್ರೋಲ್ ಆಗುತ್ತಿರುವ ಉರ್ಫಿ ಜಾವೇದ್’ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಫೈಜಾನ್ ಇದೀಗ ಉರ್ಫಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ನಟಿ ಉರ್ಫಿ ಜಾವೇದ್ ಮೈಮಾಟ ತೋರಿಸಿ ಹಣ ಗಳಿಸುವ ಕೆಟ್ಟ ಮಾರ್ಗವನ್ನು ಬಿಡಬೇಕು, ಮೈ ಕಾಣಿಸುವಂಥ ಮತ್ತು ಅತಿ ಕೆಟ್ಟ ಎನಿಸುವ ಬಟ್ಟೆಗಳನ್ನು ಧರಿಸಿ ದೇಶವನ್ನು ಹಾಳುಮಾಡುತ್ತಿದ್ದಾರೆ. ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಮುಜುಗರಕ್ಕೀಡು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೈಜಾನ್ ಅನ್ಸಾರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಉರ್ಫಿ ಜಾವೇದ್ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ. ಉರ್ಫಿ ವಿರುದ್ಧ ಫತ್ವಾ ಹೊರಡಿಸಲು ಮೌಲಾನಾಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ, ನಟಿಯ ಸಾವಿನ ನಂತರ ಆಕೆಯನ್ನು ಸ್ಮಶಾನದಲ್ಲಿ ಹೂಳಲು ಜಾಗ ನೀಡುವುದಿಲ್ಲ. ಮೈಮಾಟ ತೋರಿಸುವಂತಹ ಬಟ್ಟೆ ಧರಿಸಿ ಮುಸ್ಮಿಂ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾಳೆ. ಹಾಗಾಗಿ ನೋಟಿಸ್ ನೀಡಿದ್ದೇನೆ. ಅಗತ್ಯವಿದ್ದರೆ ಬಾಂಬೆ ಹೈಕೋರ್ಟ್‌ಗೂ ಹೋಗುವುದಾಗಿ ಫೈಜಾನ್ ಹೇಳಿದ್ದಾರೆ.
ಉರ್ಫಿಗೆ ನಿಜವಾದ ಟ್ಯಾಲೆಂಟ್ ಇಲ್ಲ. ಆಕೆ ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾಳೆ. ದೇಹ ತೋರಿಸಿ ಹಣ ಗಳಿಸುತ್ತಿದ್ದಾಳೆ. ಆಕೆಯಿಂದಾಗಿ ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದಿರುವ ಬಾಲಿವುಡ್ ನಟಿಯರು ಮತ್ತು ಸೂಪರ್‌ಸ್ಟಾರ್‌ಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಮೈಮಾಟ ತೋರಿಸಿ ಹಣ ಗಳಿಸುವ ಉರ್ಫಿಗೆ ನಿಜವಾಗಿಯೂ ಟ್ಯಾಲೆಂಟ್ ಇದ್ದರೆ, ನಟಿಸಿ, ಸಿನಿಮಾ ಮಾಡಿ ಹಣ ಸಂಪಾದಿಸಲಿ ಎಂದು ಫೈಜಾನ್ ಚಾಲೆಂಜ್ ಮಾಡಿದ್ದಾರೆ.
ಉರ್ಫಿ ಮುಂಬೈನಲ್ಲಿಯೇ ವಾಸಿಸಲು ಬಯಸಿದರೆ, ಆಕೆ ತನ್ನ ಡ್ರೆಸ್ಸಿಂಗ್ ಸೆನ್ಸ್ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಮುಂಬೈನಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಫೈಜಾನ್ ವಾರ್ನ್ ಮಾಡಿದ್ದಾರೆ. ಉರ್ಫಿ ಬಗ್ಗೆ ಈ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದ್ದೇನೆ, ಆಕೆಗೆ ತನ್ನ ಮಿತಿ, ಸ್ಥಿತಿ ಬದಲಾಯಿಸಿಕೊಳ್ಳಲು ಹಲವು ಬಾರಿ ಹೇಳಿದ್ದೇನೆ.
ಈಗಾಗಲೇ ಈ ವಿಚಾರವಾಗಿ ನಾನು ಮಸೀದಿಗಳು ಮತ್ತು ಸ್ಮಶಾನಗಳಿಗೆ ದೂರು ನೀಡಿದ್ದೇನೆ. ಉರ್ಫಿ ಇಡೀ ಮುಂಬೈನ ವಾತಾವರಣವನ್ನು ಹಾಳು ಮಾಡುತ್ತಿದ್ದಾಳೆ. ಈ ಬಗ್ಗೆ ಪೊಲೀಸ್ ದೂರು ಕೂಡ ದಾಖಲಾಗಿದೆ. ಇದೀಗ ಉರ್ಫಿ ಜಾವೇದ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಫೈಜಾನ್ ಅನ್ಸಾರಿ ಹೇಳಿದ್ದಾರೆ.