ವಿನೋದ್ ರಾಜ್ ನಿಮ್ಮ ಮಗ ಅನ್ನೋ ಸುದ್ದಿಯಿದೆ ಎಂದಾಗ ಅಣ್ಣಾವ್ರು ಹೇಳಿದ್ದೇನು? – ವಯಸ್ಸು ಕೆಲವೊಮ್ಮೆ ಎಂಥವರನ್ನೂ ತಪ್ಪು ಮಾಡಿಸುತ್ತೆ ಎಂದಿದ್ಯಾಕೆ ವರನಟ?

ವಿನೋದ್ ರಾಜ್ ನಿಮ್ಮ ಮಗ ಅನ್ನೋ ಸುದ್ದಿಯಿದೆ ಎಂದಾಗ ಅಣ್ಣಾವ್ರು ಹೇಳಿದ್ದೇನು? – ವಯಸ್ಸು ಕೆಲವೊಮ್ಮೆ ಎಂಥವರನ್ನೂ ತಪ್ಪು ಮಾಡಿಸುತ್ತೆ ಎಂದಿದ್ಯಾಕೆ ವರನಟ?

ನ್ಯೂಸ್ ಆ್ಯರೋ : ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಮೇರು ನಟ. ಕನ್ನಡಿಗರಿಂದ ನಟ ಸಾರ್ವಭೌಮ, ರಸಿಕರ ರಾಜ, ವರನಟ ಎಂದೆಲ್ಲ ಕರೆಸಿಕೊಂಡಿದ್ದ ಚಂದನವನದ ಸಾರ್ವಕಾಲಿಕ ಶ್ರೇಷ್ಠ ಡಾ.ರಾಜ್ ಕುಮಾರ್ ಅವರು, ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಆದರೂ ಕೂಡ ವಿನೋದ್ ರಾಜ್ ಕುಮಾರ್ ಅವರು‌ ಅಣ್ಣಾವ್ರ ಮಗ ಅನ್ನೋ ವಿವಾದ ದಶಕಗಳಿಂದಲೂ‌ ದೊಡ್ಡ‌ ಮನೆಯನ್ನು ಸುತ್ತುತ್ತಲೇ‌ ಇದೆ.

ಈ ಬಗ್ಗೆ ಕನ್ನಡದ ಹೆಸರಾಂತ ಬರಹಗಾರ ದಿವಂಗತ ರವಿ ಬೆಳಗೆರೆ ಅವರು ‘ರಾಜ್ ಲೀಲಾ ವಿನೋದ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಸದ್ಯ, ಈ ಬಗ್ಗೆ ಡಾ.ರಾಜ್ ಕುಮಾರ್ ಅವರ ಆಪ್ತರೊಬ್ಬರು ಬಿಚ್ಚಿಟ್ಟಿರುವ ವಿಚಾರ ಸಕ್ಕತ್ ಸುದ್ದಿಯಲ್ಲಿದೆ.

ಈ ವಿಚಾರದ ಬಗ್ಗೆ ಡಾ.ರಾಜ್ ಕುಟುಂಬದ ಆಪ್ತರಾಗಿದ್ದ ನಿರ್ದೇಶಕ ಪ್ರಕಾಶ್ ಮೇಹು ಅವರು ರಾಜ್ ಕುಮಾರ್ ಅವರೊಂದಿಗೆ ದಶಕಗಳ‌ ಹಿಂದೆ ವಿಚಾರಿಸಿದ್ದರಂತೆ. ಇದನ್ನು ಸ್ವತಃ ಪ್ರಕಾಶ್ ಮೇಹು ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

ಒಮ್ಮೆ ಡಾ.ರಾಜ್‌ಕುಮಾರ್, ಅವರ ತಮ್ಮ ವರದಪ್ಪ ಹಾಗೂ ನಿರ್ದೇಶಕ ಪ್ರಕಾಶ್‌ ಮೇಹು ತಮಿಳು ಸಿನಿಮಾ ಒಂದನ್ನು ನೋಡುತ್ತಿದ್ದರಂತೆ. ಚಿತ್ರದ‌ ಹಿರೋ ಆಗಿದ್ದಾತ, ತಮಿಳು ಚಿತ್ರರಂಗದ ಮೇರು ನಟನೊಬ್ಬನ ಅನಧಿಕೃತ ಮಗನಾಗಿದ್ದನಂತೆ. ಈ ಬಗ್ಗೆ ಮಾತನಾಡುತ್ತ ಡಾ.ರಾಜ್ ‘ಹಿರೋ ನೋಡಲು ಥೇಟ್ ಆ ಕಲಾವಿದನ ತರವೇ ಇದ್ದಾರಲ್ಲ ಎಂದು. ಈ ವೇಳೆ ವರದಪ್ಪ ಅವರು ಆತ ಅವರದೇ ಮಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಎದ್ದು ಹೋದರಂತೆ.

ಇದೇ ವೇಳೆ ಸಿನಿಮಾ‌ ನೋಡುವುದನ್ನು ಮುಂದುವರೆಸಿದ ಡಾ.ರಾಜ್ ಅವರೊಂದಿಗೆ ಮೇಹು‌ ಪ್ರಕಾಶ್ ಸಲುಗೆಯಿಂದ ‘ನಟಿ ಲೀಲಾವತಿ ಅವರು ವಿನೋದ್ ಅವರನ್ನು ಡಾ.ರಾಜ್ ಅವರ ಮಗ ಎನ್ನುತ್ತಾರಲ್ಲ. ಏನಿದು?’ ಎಂದು‌ ಕೇಳಿದ್ದರಂತೆ. ಇದಕ್ಕೆ ಡಾ.ರಾಜ್ ‘ವಯಸ್ಸು ಕೆಲವೊಮ್ಮೆ ಎಂಥವರನ್ನೂ ತಪ್ಪು‌ ಮಾಡಿಸುತ್ತದೆ. ಆದರೆ, ಆ ಮಗು ಹುಟ್ಟಿದ ಮೇಲೆ ತಮಗೆ ಸಂಪರ್ಕ ಕಡಿದು‌‌ ಹೋಗಿ ಅದಾಗಲೇ ಮೂರು ವರ್ಷ ಕಳೆದು ಹೋಗಿತ್ತು. ಅವರು ಆ ರೀತಿ ಹೇಳಿ ಅದರಿಂದ ತಮಗೆ ಒಳ್ಳೆಯದಾಗುತ್ತೆ ಎಂದು ನಂಬಿದ್ದರೆ, ನಾನ್ಯಾಕೆ ಬೇಡ ಎನ್ನಲಿ. ಅವರಿಬ್ಬರಿಗೂ ಒಳ್ಳೆಯದಾಗಲಿ’ ಎಂದು ಹೇಳಿದ್ದರಂತೆ.

ಮುಂದುವರೆಸಿ ‘ಲೀಲಾವತಿ ಅವರು ಭಾಗವತ್ ಎಂಬ ರಂಗಭೂಮಿ ಕಲಾವಿದರನ್ನು ವಿವಾಹವಾಗಿದ್ದು. ವಿನೋದ್ ಅವರ ಮಗ. ಆದರೂ ಅವರು ಯಾಕೆ ಈ ರೀತಿ ಹೇಳಿಕೊಂಡು ತಿರುಗುತ್ತಿದ್ದಾರೋ ಗೊತ್ತಿಲ್ಲ’ ಎಂದು ಡಾ.ರಾಜ್ ಕುಮಾರ್ ಅವರ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ್ದರಂತೆ…!! ಒಟ್ಟಿನಲ್ಲಿ ಅಣ್ಣಾವ್ರು ಸತ್ತ ನಂತರವೂ ಈ ವಿಚಾರವಂತೂ ಇನ್ನೂ ಪ್ರಶ್ನೆಯಾಗಿಯೇ ಉಳಿದಿರೋದು ಮಾತ್ರ ಸುಳ್ಳಲ್ಲ..

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *