ಚಂದನವನಕ್ಕೆ ಚಂದದ ಗೊಂಬೆಯ ಆಗಮನ – ಯಾರೀ ಸುಂದರಿ? ಇವರು ಶೃತಿ ತಂಗಿ ಮಗಳು ಅನ್ನೋದು ನಿಮಗೆ ಗೊತ್ತಾ?

ಚಂದನವನಕ್ಕೆ ಚಂದದ ಗೊಂಬೆಯ ಆಗಮನ – ಯಾರೀ ಸುಂದರಿ? ಇವರು ಶೃತಿ ತಂಗಿ ಮಗಳು ಅನ್ನೋದು ನಿಮಗೆ ಗೊತ್ತಾ?

ನ್ಯೂಸ್ ಆ್ಯರೋ : ಶೃತಿ ಹಾಗೂ ಶರಣ್ ಕನ್ನಡ ಚಿತ್ರಂಗದಲ್ಲಿ ಮೂಡಿಸಿದ ಛಾಪು ಅಂತಿಂತದ್ದಲ್ಲ. ಶರಣ್ ತನ್ನ ಕಾಮಿಡಿಯ‌ ಮೂಲ‌ಕ ಹಾಗೂ ನಟಿ ಶೃತಿ ತನ್ನ ಅದ್ಭುತ ನಟನೆಯ ಮೂಲಕ ಮನೆಮಾತಾಗಿದ್ದಾರೆ. ಇದೀಗ, ಈ ಕುಟುಂಬದ ಮೂರನೇ ತಲೆಮಾರು ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದೆ.

ಹೌದು, ನಟಿ ಶೃತಿ ಅವರ ಸಹೋದರಿ ಉಷಾ ಕೃಷ್ಣ ಅವರ ಸುಪುತ್ರಿ ಕೀರ್ತಿ ಕೃಷ್ಣ ಚಂದನವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈ ಹಿಂದೆಯೂ ಹಲವಾರು ನಿರ್ದೇಶಕರು, ನಟರು ಇವರನ್ನು ಚಿತ್ರಂಗಕ್ಕೆ ಕರೆತನ್ನಿ‌ ಎಂದು ಕೇಳಿಕೊಂಡಿದ್ದರು. ಇದೀಗ ಅವರು ಅಧಿಕೃತವಾಗಿ ಚಿತ್ರರಂಗಕ್ಕೆ ಆಗಮಸುತ್ತಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ಹೊಸ ಚಿತ್ರ ‘ಧರಣಿ’ ಮೂಲಕ ಕೀರ್ತಿ ಕೃಷ್ಣ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ ನಟಿಸುತ್ತಿರುವ ಈ ಚಿತ್ರ ಕೋಳಿ ಅಂಕವನ್ನು ಪ್ರತಿನಿಧಿಸಲಿದೆ ಎನ್ನಲಾಗಿದೆ‌.

ಈ ಹಿಂದೆ, ಅಂದರೆ ಹನ್ನೆರಡು ವರ್ಷಗಳ ಹಿಂದೆ ಶೃತಿ‌ ಹಾಗೂ ರಾಮ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ನಾಗ ಶಕ್ತಿ’ ಚಿತ್ರದಲ್ಲಿ ಕೀರ್ತಿ ಕೃಷ್ಣ ಬಾಲ ಕಲಾವಿದೆಯಾಗಿ ನಟಿಸಿದ್ದರು. ಬಿಬಿಎ ಪೂರ್ಣಗೊಳಿಸಿರುವ ಕೀರ್ತಿ ಕೃಷ್ಣ ಅವರಿಗೆ ಚಿತ್ರಗಳಲ್ಲಿ ನಟಿಸುವ ಬಯಕೆ ಇತ್ತಾದರು. ಒಳ್ಳೆಯ ಕತೆಗಾಗಿ ಕಾಯುತ್ತಿದ್ದರಂತೆ. ಸದ್ಯ, ‘ಧರಣಿ’ ಚಿತ್ರದ ಕತೆ ಕೀರ್ತಿ ಅವರಿಗಷ್ಟೇ ಅಲ್ಲದೇ ಮನೆಯವರಿಗೂ ಬಹಳ ಇಷ್ಟವಾಗಿದೆಯಂತೆ. ಆ ಕಾರಣಕ್ಕೆ ಪೂರ್ಣಪ್ರಮಾಣದ ನಾಯಕಿಯಾಗಿ ಕೀರ್ತಿ ನಟಿಸುತ್ತಿದ್ದಾರೆ.

ಶೃತಿಯವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದೆ. ಸಹೋದರ ಶರಣ್ ಈಗಾಗಲೇ ಕನ್ನಡದ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಶೃತಿ ಅವರ ತಂದೆ ಕೃಷ್ಣ, ತಾಯಂದಿರಾದ ರಾಧಾ-ರುಕ್ಮಿಣಿ ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ನಟಿಸಿದ್ದಾರೆ. ಇದೀಗ, ಕೀರ್ತಿ ಕೃಷ್ಣ ಅವರು ಕೂಡ ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಇವರು‌ ನಟಿಸುತ್ತಿರುವ ಮೊದಲ ಚಿತ್ರ ‘ಧರಣಿ’ ಸಿನಿಮಾವನ್ನು ಸುಧೀರ್ ಶ್ಯಾನುಭೋಗ್ ನಿರ್ದೇಶನ‌ ಮಾಡುತ್ತಿದ್ದು, ಯಂಗ್ ಥಿಂಕರ್ಸ್ ಲಾಂಛನದಲ್ಲಿ ಉಮೇಶ್ ಹಾಗೂ ರಮೇಶ್ ಐತಾಳ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನುಳಿದ ವಿಷಯಗಳು ಇನ್ನಷ್ಟೇ ತಿಳಿಯಬೇಕಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *