Amala Paul : 15 ಜನ ಗಂಡಂದಿರ ಮುಂದೆ ಬೆತ್ತಲಾಗಿ ನಟಿಸಿದ್ದೆ – ಶಾಕಿಂಗ್ ಹೇಳಿಕೆ ನೀಡಿದ “ಹೆಬ್ಬುಲಿ” ನಟಿ ಅಮಲಾ..!

Amala Paul : 15 ಜನ ಗಂಡಂದಿರ ಮುಂದೆ ಬೆತ್ತಲಾಗಿ ನಟಿಸಿದ್ದೆ – ಶಾಕಿಂಗ್ ಹೇಳಿಕೆ ನೀಡಿದ “ಹೆಬ್ಬುಲಿ” ನಟಿ ಅಮಲಾ..!

ನ್ಯೂಸ್‌ ಆ್ಯರೋ : ಬಹುಭಾಷಾ ನಟಿ ಅಮಲಾ ಪೌಲ್​ ಅವರು ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನ ಸಂಬಂಧವೂ ಸುದ್ದಿಯಾಗಿದ್ದರು. ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟ ಸುದೀಪ್‌ಗೆ ನಾಯಕಿಯಾಗಿ ಅಮಲಾ ಅವರು ಅಭಿನಯಿಸಿದ್ದಾರೆ.

ಕೇರಳ ಮೂಲದ ಅಮಲಾ ಅವರು ನೀಲತಾಮರನ್​ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ಇವರ ಅಭಿನಯದ ಮೈನಾ ಸಿನಿಮಾ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಅದಾದ ಬಳಿಕ ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ಅಭಿನಯಿಸಿ, ಬೇಡಿಕೆಯ ನಟಿಯರಲ್ಲಿ ಒಬ್ಬರಾದರು.

ಇನ್ನೂ ವೈಯಕ್ತಿಕ ಜೀವನ ಬಗ್ಗೆ ಹೇಳುವುದಾದರೆ 2014ರಲ್ಲಿ ನಿರ್ದೇಶಕ ವಿಜಯ್ ಜತೆ ಮದುವೆಯಾದ ಅಮಲಾ 2017ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಇನ್ನೂ ಅದಲ್ಲದೆ ಮಾಜಿ ಬಾಯ್​ಫ್ರೆಂಡ್​ ಜತೆಗಿನ ಲಿಪ್​ಲಾಕ್​ ಫೋಟೋಗಳು ವೈರಲ್​​ ಆಗಿದ್ದವು.

ಈಚೆಗೆ ಸಂದರ್ಶನ ವೊಂದರಲ್ಲಿ ತಮ್ಮ ಸಿನಿ ಬದುಕಿನ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರಲ್ಲಿ ಅಮಲಾ ಕೂಡ ಒಬ್ಬರು. ಇವರು 2019ರಲ್ಲಿ ಬಿಡುಗಡೆಗೊಂಡ ಆದೈ ಸಿನಿಮಾದಲ್ಲಿ ಬಟ್ಟೆಯಿಲ್ಲದ ದೃಶ್ಯಗಳಲ್ಲಿ ಬೋಲ್ಡ್‌ ಆಗಿ ಅಭಿನಯಿಸಿದ್ದರು. ಇನ್ನೂ ಈ ಸಿನಿಮಾದ ಬೋಲ್ಡ್‌ ದೃಶ್ಯಗಳ ಚಿತ್ರೀಕರಣದ ಬಗ್ಗೆ ಅಮಲಾ ಅವರು ಈಚೆಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಬಟ್ಟೆ ಇಲ್ಲದೆ ನಟಿಸುವ ಚಿತ್ರೀಕರಣದಲ್ಲಿ 15 ಜನ ಗಂಡಸರಿದ್ದರು. ಈ ವೇಳೆ ಒಬ್ಬರು ಮಹಿಳೆಯರು ಇರಲಿಲ್ಲ. ಸಿನಿಮಾ ಚೆನ್ನಾಗಿ ಮೂಡಿಬರಲು ನಾನು ಆ ದೃಶ್ಯವನ್ನು ಮಾಡಲೇ ಬೇಕಿತ್ತು. ಇಷ್ಟು ಜನರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು ಎಂಬ ಚಿಂತೆಯಲ್ಲಿದ್ದೆ. ಈ ಮನಃಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತಾ ಸರಿಯಾಗಿ ಬರುವುದಿಲ್ಲ ಎಂದು ಅರಿವಾಯಿತು. ಹಾಗಾಗಿ ನನಗೆ ಈಗ 15 ಗಂಡಂದಿರಿದ್ದಾರೆ ಎಂದು ಭಾವಿಸಿಕೊಂಡು ನಟಿಸಲು ಪ್ರಾರಂಭಿಸಿದೆ ಎಂದು ಹೇಳಿದರು.

ನಟ ಪೃಥ್ವಿರಾಜ್ ಸುಕುಮಾರ್ ಜತೆಗಿನ ಸಿನಿಮಾದಲ್ಲಿ ಮತ್ತೆ ಬೋಲ್ಡ್‌ ಅವತಾರದಲ್ಲಿ ಅಮಲಾ

ಅಮಲಾ ಅವರು ಪ್ರಸ್ತುತ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲಸ್ಸಿ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ತಿಂಗಳ ಹಿಂದಷ್ಟೇ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್​ ಮತ್ತು ಅಮಲಾ ನಡುವೆ ಲಿಪ್​ಲಾಕ್​ ದೃಶ್ಯವಿದೆ.

ಕಥೆಗಾಗಿ ಬೆತ್ತಲೆಯಾಗಿಯೇ ನಟಿಸಲು ರೆಡಿ ಎಂದ ಅಮಲಾ:

ಈ ಸಿನಿಮಾಗೂ ನಾನು ಸಹಿ ಮಾಡುವ ಮುನ್ನ ಲಿಪ್​ಲಾಕ್​ ಇರುತ್ತದೆ ಎಂದು ನಿರ್ದೇಶಕರು ನನಗೆ ಹೇಳಿದರು. ನಾನು ಈ ಮುಂಚೆಯೇ ಓಕೆ ಎಂದಿದ್ದೆ. ಆ ದೃಶ್ಯಕ್ಕೆ ಲಿಪ್​ಲಾಕ್​ ಅವಶ್ಯಕತೆ ಇತ್ತು. ಹೀಗಾಗಿ ನಾನು ಮಾಡಿದೆ. ಕಥೆಗಾಗಿ ಬೆತ್ತಲೆಯಾಗಿ ನಟಿಸಿದ್ದ ನಾನು ಇನ್ನೂ ಲಿಪ್‌ಲಾಕ್ ದೃಶ್ಯ ಮಾಡಲು ಕಷ್ಟವಾಗಲ್ಲ ಎಂದು ಬೋಲ್ಡ್‌ ಆಗಿ ಉತ್ತರಿಸಿದ್ದಾರೆ.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *