
ಅಣ್ಣ ಚಿರು ಸಮಾಧಿ ಬಳಿಯೇ ಸೀಮಂತ ಶಾಸ್ತ್ರ ನೆರವೇರಿಸಿದ ಆ್ಯಕ್ಷನ್ ಪ್ರಿನ್ಸ್ – ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ, ಪ್ರೇರಣಾ ದಂಪತಿ
- ಮನರಂಜನೆ
- September 12, 2023
- No Comment
- 41
ನ್ಯೂಸ್ ಆ್ಯರೋ : ಚಂದನವನದಲ್ಲಿ ನಟನೆ ಮತ್ತು ಗುಣದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ಧ್ರುವ ಸರ್ಜಾ ಪ್ರೇರಣಾ ಶಂಕರ್ ದಂಪತಿಯು ಶೀಘ್ರದಲ್ಲೇ ಎರಡನೇ ಮಗುವಿಗೆ ಪೋಷಕರಾಗಲಿದ್ದಾರೆ. ಈಚೆಗಷ್ಟೇ ಪ್ರೇರಣಾಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಧ್ರುವ ಸರ್ಜಾ ಅವರ ಕನಕಪುರ ಫಾರ್ಮ್ ಹೌಸ್‌ನಲ್ಲಿ ಈ ಸೀಮಂತ ಕಾರ್ಯಕ್ರಮ ನಡೆದಿದೆ.
ಹೌದು.. ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ದಂಪತಿ ಕಳೆದ ತಿಂಗಳು ಎರಡನೇ ಮಗುವಿಗೆ ಪೋಷಕರಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, “ನಮ್ಮ ಕುಟುಂಬಕ್ಕೆ ಇನ್ನೊಂದು ಪುಟ್ಟ ಕಂದನ ಆಗಮನವಾಗುತ್ತಿದೆ. ಖುಷಿ ಡಬಲ್ ಆಗುತ್ತಿದೆ” ಎಂದು ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದರು.
ಇದೀಗ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಬಹಳ ಸರಳ ಮತ್ತು ಶಾಸ್ತ್ರ ಬದ್ಧವಾಗಿ ನಡೆಸಿಕೊಟ್ಟಿದ್ದು, ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಇನ್ನು ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಈ ಶುಭ ಕಾರ್ಯಕ್ರಮವನ್ನು ಧ್ರುವ ಸರ್ಜಾ ನಡೆಸಿದ್ದು, ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್ ಆಗಿತ್ತು ಎಂದು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಶುಭ ಸಮಾರಂಭಕ್ಕೆ ಧ್ರುವ ಸರ್ಜಾ ಕುಟುಂಬದವರು, ಬಂಧು-ಮಿತ್ರರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದು, ಸಮಾರಂಭದಲ್ಲಿ ಧ್ರುವ ಅವರ ಮಗಳು ಎಲ್ಲರ ಗಮನಸೆಳೆದಿದ್ದಾಳೆ.
ಕೆಲ ದಿನಗಳ ಹಿಂದೆ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ್ದ ಧ್ರುವ ಸರ್ಜಾ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.