
ಮಗಳ ವಯಸ್ಸಿನ ನಟಿಯ ಜೊತೆ ವಿವಾಹಕ್ಕೆ ತಯಾರಾದ ಅಮಿರ್ ಖಾನ್? – ಯಾರದು ನಟಿ? ಏನಿದೆ ಹೊಸ ಅಪ್ ಡೇಟ್?
- ಮನರಂಜನೆ
- May 26, 2023
- No Comment
- 137
ನ್ಯೂಸ್ ಆ್ಯರೋ : ‘ದಂಗಲ್’, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರಗಳಲ್ಲಿ ತನ್ನೊಂದಿಗೆ ನಟಿಸಿದ ಫಾತಿಮಾ ಸನಾ ಶೇಕ್ ಜೊತೆ ಆಮೀರ್ ಖಾನ್ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.
ಆಮೀರ್, ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಲಿದ್ದಾರೆ. ಆಮೀರ್ ಖಾನ್ ತಮ್ಮ ‘ದಂಗಲ್’ ಸಿನಿಮಾ ಸಮಯದಿಂದಲೂ ಸನಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ವಿಮರ್ಶಕ ಕಮಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ಫಾತಿಮಾಗೆ ಆಮೀರ್ ಖಾನ್ ಕುಟುಂಬದ ಜೊತೆ ಹೆಚ್ಚು ಆಪ್ತತೆ ಇದೆ. ಆಮೀರ್ ಪುತ್ರಿ ಇರಾ ಖಾನ್ ಜೊತೆಯೂ ಒಳ್ಳೆಯ ಬಾಂಧವ್ಯವಿದೆ. ಹಾಗಾಗಿ ಇವರಿಬ್ಬರು ಮದುವೆಯಾಗುವುದು ಖಚಿತ ಎನ್ನುತ್ತಿದೆ ಕೆಲವು ಮೂಲಗಳು. ಇತ್ತೀಚೆಗೆ ಆಮೀರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಒಟ್ಟಾಗಿ ಆಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು.
ಆಮೀರ್ ಖಾನ್ ಮತ್ತು ಕಿರಣ್ ರಾವ್ 2021ರಲ್ಲಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಸುಮಾರು 17 ವರ್ಷ ಒಟ್ಟಿಗೆ ಬಾಳಿದ್ದ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಅಂದಿನಿಂದ ಆಮೀರ್ ಖಾನ್ ಬಗ್ಗೆ ಗಾಸಿಪ್ ಹರಿದಾಡುತ್ತಿದ್ದವು. ಮದುವೆ ವಿಚಾರ ಕುರಿತು ಆಮೀರ್ ಖಾನ್ ಇದುವರೆಗೆ ಸ್ಪಷ್ಟನೆ ನೀಡಿಲ್ಲ.
ಸತತ ಸೋಲುಗಳ ಬಳಿಕ ಇದೀಗ ಆಮೀರ್ ಖಾನ್ ನಟನೆಯಿಂದ ಸ್ವಲ್ಪ ದಿನ ದೂರ ಉಳಿದಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ.