
ಆರೂರು ಜಗದೀಶ್ ಹೆಗಲ ಮೇಲೆ ಕೈಯಿಟ್ಟು ನಟ ಅನಿರುದ್ಧ್ ಕಣ್ಣೀರು: ಜೊತೆ ಜೊತೆಯಲಿ ಸೀರಿಯಲ್ ವಿವಾದ ಸುಖಾಂತ್ಯ
- ಮನರಂಜನೆ
- December 10, 2022
- No Comment
- 801
ನ್ಯೂಸ್ ಆ್ಯರೋ: ನಟ ಅನಿರುದ್ಧ್ ಮತ್ತು ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕ ಆರೂರು ಜಗದೀಶ್ ಮಧ್ಯೆಯಿದ್ದ ಮನಃಸ್ತಾಪ ಇಂದು ಹಿರಿಯರ ಸಮ್ಮುಖದಲ್ಲಿ ಸುಖಾಂತ್ಯವಾಗಿದೆ.
ಟೆಲಿವಿಷನ್ ಅಸೋಸಿಯೇಶನ್ ಜತೆ ನಡೆದ ಸಭೆಯ ಬಳಿಕ ಇಬ್ಬರು ಅಸಮಾಧಾನವನ್ನು ಮರೆತು ಹೆಗಲ ಮೇಲೆ ಕೈಯಿಟ್ಟು ಮತ್ತೇ ಒಂದಾಗಿ ಮಾಧ್ಯಮದ ಮುಂದೆ ಕಾಣಿಸಿಕೊಂಡರು.
ಮಾಧ್ಯಮದವರ ಜತೆ ಮಾತನಾಡುತ್ತ ನಟ ಅನಿರುದ್ಧ್ ಅವರು ಆರೂರು ಜಗದೀಶ್ ಅವರ ಹೆಗಲ ಮೇಲೆ ಕೈಯಿಟ್ಟು ಭಾವುಕರಾದರು. ಏನೂ ಕೆಟ್ಟ ಘಳಿಗೆ. ಸಂಬಂಧಕ್ಕೆ ಬಿರುಕು ಬೀಳಬಾರದಿತ್ತು. ದುರಂತ ಅದು. ಅಭಿಮಾನಿಗಳಿಗೆ ನಾನು ಕ್ಷಮೆಯನ್ನು ಕೇಳುತ್ತೇನೆ. ಜೀ ವಾಹಿನಿಗೆ ಆರೂರು ಜಗದೀಶ್ ಅವರಿಗೆ ಒಳ್ಳೆದಾಗಲಿ. ನಾನು ಸೂರ್ಯವಂಶ ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಬರುತ್ತಿದ್ದೇನೆ. ನಿಮ್ಮ ಆಶೀರ್ವಾದ, ಹಾರೈಕೆ ಸದಾ ನನ್ನ ಮೇಲಿರಲಿ ಎಂದರು.
ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮತ್ತೇ ಅನಿರುದ್ಧ್ ಕಾಣಿಸಿಕೊಳ್ಳಲಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ದೇಶಕ ಆರೂರು ಜಗದೀಶ್ ಅವರು, ಮುಂದಿನ ದಿನಗಳಲ್ಲಿ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೂರು ತಿಂಗಳ ಹಿಂದೆ ಸಾಕಷ್ಟು ಕೆಟ್ಟ ಘಟನೆಗಳು ನಡೆದಿದ್ದು, ಇಂದು ಹಿರಿಯರ ಸಮ್ಮುಖದಲ್ಲಿ ಎಲ್ಲವೂ ಸುಖಾಂತ್ಯಗೊಂಡಿದೆ. ಅನಿರುದ್ಧ್ ಅವರ ಮುಂದಿನ ಪ್ರೊಜೆಕ್ಟ್‌ಗಳಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದರು.
ನಿರ್ದೇಶಕ ಪಿ. ಶೇಷಾದ್ರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಭೆಯಲ್ಲಿ ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.