ವಯಸ್ಸು ಮುಚ್ಚಿಟ್ಟು ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ನಟಿ ಮಲೈಕಾ  ಅರೋರ – ವೈರಲ್ ಆದ ವೀಡಿಯೋದಲ್ಲೇನಿದೆ?

ವಯಸ್ಸು ಮುಚ್ಚಿಟ್ಟು ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ನಟಿ ಮಲೈಕಾ ಅರೋರ – ವೈರಲ್ ಆದ ವೀಡಿಯೋದಲ್ಲೇನಿದೆ?

ನ್ಯೂಸ್ ಆ್ಯರೋ‌ : ಬಾಲಿವುಡ್ ನ ಬೋಲ್ಡ್ ನಟಿ ಮಲೈಕಾ ಅರೋರ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದಾರೆ. ಕೆಲವೇ ದಿನಗಳ ಹಿಂದೆ ತಮ್ಮ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಟ್ರೋಲ್ ಗೆ ಒಳಗಾಗಿದ್ದರು.

ಈ ವಿಚಾರದಲ್ಲಿ ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಆಕೆಯ ಬೆಂಬಲಕ್ಕೆ ನಿಂತ ಅರ್ಜುನ್ ಕಪೂರ್, ಮೊದಲು ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಹೇಳಿದ್ದರು. ಇದೀಗ ಮತ್ತೆ ಮಲೈಕಾ ಅರೋರಾ ಅವರ ಮತ್ತೊಂದು ಹಳೆಯ ವೀಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ಬಳಿಕ ಅವರ ವಯಸ್ಸಿನ ಬಗ್ಗೆ ಅನುಮಾನ ಮೂಡಿದ್ದು, ವಿವಿಧ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಯಸ್ಸಿನ ಅಂತರದ ವಿಷಯದಲ್ಲಿ ಸುದ್ದಿ

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವಿಚಾರ ಹೊರ ಬೀಳುತ್ತಿದ್ದಂತೆ ಮುಖ್ಯವಾಗಿ ಚರ್ಚೆಗೆ ಒಳಗಾಗಿದ್ದು ಅವರ ವಯಸ್ಸಿನ ಅಂತರ. ಅರ್ಜುನ್ ಕಪೂರ್ ಗಿಂತ ಮಲೈಕಾ ಅರೋರ 12 ವರ್ಷ ದೊಡ್ಡವರು. ಅಂದರೆ ಅರ್ಜುನ್ ಕಪೂರ್ ಗೆ 37 ಮತ್ತು ಮಲೈಕಾ ಅರೋರಾಗೆ 49 ವರ್ಷ.

ಗೊಂದಲ ಮೂಡಿಸಿದ ವೀಡಿಯೋ

ಆದರೆ ನಿನ್ನೆಯಿಂದ ವೈರಲ್ ಆಗಿರುವ ವೀಡಿಯೋ ನೋಡಿದ ಬಳಿಕ ಹಲವರು ಮಲೈಕಾ ಅರೋರಾ ತಮ್ಮ ನೈಜ ವಯಸ್ಸನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಸಂಬಂಧ ಚೆನ್ನಾಗಿದ್ದಾಗ, ಇಬ್ಬರೂ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸಾಜಿದ್ ಖಾನ್ ಇಬ್ಬರ ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದರು. ”ನೀವು ಅರ್ಬಾಜ್ ಖಾನ್‌ಗಿಂತ ಎರಡು ವರ್ಷ ದೊಡ್ಡವರು. ನಿಮಗಿಂತ ಚಿಕ್ಕವನನ್ನು ಮದುವೆ ಆದಾಗ, ನಿಮಗೆ ಏನು ಅನಿಸುತ್ತೆ?” ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮಲೈಕಾ ಕೂಡ ” ಖುಷಿಯಾಗಿದೆ” ಎಂದು ಹೇಳಿದ್ದರು. ಈ ವೀಡಿಯೋ ನೋಡಿದ ಬಳಿಕ ಗೊಂದಲ ಮೂಡಿರುವುದು ಯಾಕೆಂದರೆ ಈಗ ಅರ್ಬಾಜ್ ಖಾನ್ ವಯಸ್ಸು 55. ಅಂದ್ಮೇಲೆ ಮಲೈಕಾ ಅರೋರಾ ವಯಸ್ಸು 57 ಆಗಬೇಕು. ಅದ್ಹೇಗೆ 49 ವರ್ಷ ಆಯ್ತು? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಮಲೈಕಾ ಅರೋರಾ ತಮ್ಮ ಅಸಲಿ ವಯಸ್ಸನ್ನು ಮುಚ್ಚಿಟ್ಟಿದ್ದಾರಾ ಎಂದು ಹಲವಾರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಅವರನ್ನು ನೋಡಿದರೆ 57 ವರ್ಷದವರಂತೆ ಕಾಣುವುದಿಲ್ಲ. ಜಿಮ್ಮು, ಯೋಗ ಅಂತೆಲ್ಲ ಮಾಡಿ ದೇಹವನ್ನು ಫಿಟ್ ಆಗಿಟ್ಟಿದ್ದಾರೆ ಎಂದಿದ್ದಾರೆ ಕೆಲವರು. ಒಟ್ಟಿನಲ್ಲಿ ಈ ವೀಡಿಯೋ ನೆಟ್ಟಿಗರನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸಿದೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *